ವಿಷಯಕ್ಕೆ ಹೋಗು

ಪುಟ:ಪ್ರಸ್ತುತ.pdf/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಸೈದ್ಧಾಂತಿಕ ಖಚಿತತೆಯ ಆವಶ್ಯಕತೆ

ನೃತ್ಯಗಳೂ ಸೌಮ್ಯ, ಗಂಭೀರವಾಗಿರಬೇಕೆಂದು ಸಂಪ್ರದಾಯ. ಇದಿರು ವೇಷದ ಮುಖವರ್ಣಿಕ, ನೃತ್ಯಗಳು ಹೆಚ್ಚು ತೀವ್ರ ಮತ್ತು ಪ್ರಖರ. ಇದಿರು ವೇಷ ಮತ್ತು ಸಂವಾದಿ, ಆದರೆ ಈ ಸಮೀಕರಣ ಪೂರ್ತಿಯಾಗಿ ಅನ್ವಯವಾಗುವುದಿಲ್ಲ. ಉದಾ- ಬಣ್ಣದ ವೇಷಗಳು, ಸ್ಥೂಲವಾಗಿ ನಾವೀಗ ಹೇಳುವ “ಖಳನಾಯಕ ಪಾತ್ರಗಳ ತಾಮ್ರಧ್ವಜನು ಇದಿರು ವೇಷವಾದರೂ, ಯಮನು ಬಣ್ಣದ ವೇಷವಾದರೂ ಅವರು ಖಳರಲ್ಲವಷ್ಟೆ?

ವೇಷಗಳ ಸ್ವರೂಪ ಮತ್ತು ಸ್ಥಾನದಲ್ಲಾದ ಬದಲಾವಣೆಗಳು, ಕೆಲವು ಬಾರಿ ವೇಷಧಾರಿಗಳ ಸ್ಥಾನವನ್ನು ಹೊಂದಿಕೊಂಡೂ ಆಗಿವೆ. ಬಣ್ಣದ ವೇಷಗಳಾ ಗಿದ್ದ ಕಂಸ, ಮಾಗಧರು ಇದಿರು ವೇಷಗಳಾಗಿವೆ. ಸಾಲ್ವರಂತಹ ಬಣ್ಣದ ವೇಷ ಕಿರೀಟದ ವೇಷವಾಗಿ, ಸುಮಾರು ಮೂರನೇ ಕಟು ವೇಷದ ಸ್ಥಾನಕ್ಕೆ ಬದಲಾಗಿದೆ.ಈ ಸ್ಥಾನಪಲ್ಲಟ(status shift)ಕ್ಕೆ ಆ ಪಾತ್ರಗಳ ಚಿತ್ರಣದ ಕುರಿತ ಪರಿಕಲ್ಪನೆ ಗಳು ಬದಲಾದುದೂ ಕಾರಣವಿರಬಹುದು. ವಿಶೇಷತಃ ತೆಂಕುತಿಟ್ಟಿನಲ್ಲಿ ಪ್ರಮುಖ ಸ್ಥಾನದಲ್ಲಿದ್ದ ಬಣ್ಣದ ವೇಷಗಳು ಸದ್ಯ ಆಲಂಕಾರಿಕ ಅಸ್ತಿತ್ವದತ್ತ ಸಾಗಿವೆ. ಮಾತುಗಾರಿಕೆಗೆ ಮಹತ್ವ ಹೆಚ್ಚಿದುದು ಇದಕ್ಕೆ ಕಾರಣವೊ, ಬಣ್ಣದ ವೇಷದ ವಿಭಾಗ ದಲ್ಲಿ ಪ್ರತಿಭಾವಂತರು ಪರಿಶ್ರಮಿಸದುದು ಕಾರಣವೊ, ಅಲ್ಲ ನಮ್ಮ ಒಟ್ಟು ಸಾಮಾ ಜಿಕ ಸಾಂಸ್ಕೃತಿಕ ಧೋರಣೆಯೊ, ಎಂದು ನಿರ್ಧಾರವಾಗಿ ಹೇಳುವಂತಿಲ್ಲ. ಅಥವಾ ಅವೆಲ್ಲವೂ ಭಾಗಶಃ ಕಾರಣವಾಗಿರಬಹುದು. ಇಂತಹ ಸ್ಥಾನಪಲ್ಲಟ ಮತ್ತು ಮರುಹೊಂದಾಣಿಕೆಗಳು ಆಗಬಾರದೆಂದಿಲ್ಲ. ಅವು ಅಸಹಜವೂ ಅಲ್ಲ. ಆದರೆ, ಅವು ಒಟ್ಟು ಯಕ್ಷಗಾನದ ಶೈಲಿಯ ಒಳಗೆ, ವ್ಯಾಪಕವಾಗಿ ಔಚಿತ್ಯ ಮತ್ತು ಪಾತ್ರ ಕಲ್ಪನೆಯ ಸೈದ್ದಾಂತಿಕ ನ್ಯಾಯಕ್ಕೆ ಸಹಜವಾಗಿರಬೇಕು. ಮಾತ್ರವಲ್ಲ, ಅದು ಕಲೆಯಲ್ಲಿರುವ ಸೌಂದರ್ಯಾತ್ಮಕ ಅಂಶಗಳನ್ನು ಒಂದು ಪಕ್ಷ ಬೆಳೆಸದಿದ್ದರೂ, ಇದ್ದುದನ್ನು ಕಳೆದುಕೊಳ್ಳುವುದಕ್ಕೆ ಕಾರಣವಾಗಬಾರದು. ವಿಸಂಗತಿಯು ಒಂದು 'ವೈರಸ್' ಇದ್ದಂತೆ. ಒಮ್ಮೆ ಪ್ರವೇಶಿಸಿದರೆ, ಹರಡುತ್ತ ಹೋಗುತ್ತದೆ. ಸದ್ಯ, ತೆಂಕುತಿಟ್ಟು ಯಕ್ಷಗಾನದ ಹಿಮ್ಮೇಳ, ಮುಮ್ಮೇಳಗಳೆರಡರಲ್ಲೂ ಇದಕ್ಕೆ ದೃಷ್ಟಾಂತ ಗಳನ್ನು ಕಾಣಬಹುದು. ಉದಾ- ಪರಂಪರೆಯ ದೇವೇಂದ್ರ ಕಿರೀಟದ ವೇಷ, ಅದರ ಒಟ್ಟಿಗೆ ತಲೆಬಿಟ್ಟ ನಾಟಕವೇಷದ ದಿಕ್ಷಾಲಕ, ಮೈಬಿಟ್ಟು ತುರಾಯಿಕಟ್ಟಿದ ಇನ್ನೊಂದು ಬಲ, - ಇದೆಲ್ಲ ಒಟ್ಟಿಗೆ ರಂಗಸ್ಥಳದಲ್ಲಿ ಕಂಡಾಗ ಯಾವುದನ್ನು ಯಾವುದಕ್ಕೆ ಜೋಡಿಸಿದಂತಿರುತ್ತದೆ. ದೇವೀಮಹಾತ್ಮೆಯ ದೇವಿಗೆ ತೊಟ್ಟಿಲಿನ ಸನ್ನಿವೇಶಕ್ಕೆ, ಪೀಠದಲ್ಲಿ ಕುಳ್ಳಿರುವ ಬದಲು, ಪ್ರತ್ಯೇಕ ತೊಟ್ಟಿಲನ್ನು ಇರಿಸುವುದು ಇಂತಹದೇ ಇನ್ನೊಂದು ವಿಷಯ, ಇದು ಕಾಲ್ಪನಿಕ ರಂಗದ ಸಿದ್ದಾಂತವನ್ನು ಬಿಟ್ಟು, ವಾಸ್ತವಿಕವನ್ನು ತರುವ ಕೆಲಸ, ಇಂತಹವು ಸೈದ್ಧಾಂತಿಕ ನಿರ್ಣಯಗಳಿಲ್ಲದೆ ಸೇರಿ ಕೊಳ್ಳುವವುಗಳು. ಇವು ಬರಬರುತ್ತ ರಂಗಭೂಮಿಯ ಮಾಮೂಲಿ ಅಂಶಗಳಾಗುತ್ತ