ವಿಷಯಕ್ಕೆ ಹೋಗು

ಪುಟ:ಪ್ರಸ್ತುತ.pdf/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೦ | ಪ್ರಸ್ತುತ

ಹೋದಂತೆ, ಕಲೆಯ ರೂಪವು ವಿಘಟಿತವಾಗಲು ಕಾರಣವಾಗುವುವು. ಹೀಗೆ ವಿಭಿನ್ನ ವಾದ, ಮತ್ತು ಆ ಆ ಕಲೆಯ ರಚನೆಗೆ ಸಹಜವಲ್ಲದ ಅಂಶಗಳು ಸೇರಿಹೋದುದ ರಿಂದಲೇ, ಉತ್ತರ ಭಾರತದ ನೌಟಂಕಿ, ಮ ಹಾರಾಷ್ಟ್ರ ಕರಾವಳಿಯ ದ ಶಾವತಾರಿ ಗಳು, ಇಂದಿನ ದುರ್ಬಲ ಸ್ಥಿತಿಗೆ ಬಂದಿವೆ ಎಂದು ಕೇಳುತ್ತೇವೆ. ನಮ್ಮ ಯಕ್ಷಗಾನದ ತೆಂಕುತಿಟ್ಟು, ಇದೇ ದಾರಿಯಲ್ಲಿರುವುದು ಖೇದಕರವಾಗಿದೆ.

ಯಕ್ಷಗಾನದ ಇತರ ಪಾತ್ರಗಳ ಅಭಿವ್ಯಕ್ತಿ ವಿಧಾನ, ಔಚಿತ್ಯದ ವಿಚಾರ- ಇವುಗಳಿಗಿಂತ ಭಿನ್ನವಾದ, ಸಂಕೀರ್ಣವಾದ ಪಾತ್ರವೆಂದರೆ ಹಾಸ್ಯ ಪಾತ್ರ. ಹಾಸ್ಯಗಾರ ನೆಂಬವನು, ಹಿಂದೆ ಹೆಚ್ಚು ಕಡಿಮೆ ರಾತ್ರಿಯುದ್ದಕ್ಕೂ ರಂಗಸ್ಥಳದಲ್ಲಿ ಇರುತ್ತಿ ದ್ದನು. ಹನುಮನಾಯಕನೆಂದರೂ ಅವನೇ. ಉಳಿದ ಪಾತ್ರಗಳಂತೆ ಇದು ಒಂದು ಕಥಾಪಾತ್ರ ಮಾತ್ರವಲ್ಲ. ಅದು ಕಥಾನಕವನ್ನಿಡೀ ಜೋಡಿಸುವ ಕೊಂಡಿ ಮತ್ತು ಅನಿರ್ಬಂಧಿತವಾದ ಅಭಿವ್ಯಕ್ತಿಗೆ ಅವಕಾಶವಿರುವಂತಹದು. ಸಾಂಪ್ರದಾಯಿಕವಾಗಿ ಹಾಸ್ಯ ಪಾತ್ರಗಳ ವೇಷಭೂಷಣಗಳಲ್ಲಿ ಅಂತಹ ವ್ಯತ್ಯಾಸವಿರಲಿಲ್ಲ. ಹಾಸ್ಯಗಾ ರನು ವಹಿಸುವ ಬ್ರಹ್ಮ, ನಾರದ, ಋಷಿ ಮೊದಲಾದ ಪಾತ್ರಗಳನ್ನು ಬಿಟ್ಟರೆ, ಉಳಿ ದಂತೆ ಅವನಿಗೆ ಒಂದು ಚಲ್ಲಣ ಯಾ ಕಚ್ಚೆ, ಒಂದು ಅಂಗಿ, ಒಂದು ಮುಂಡಾಸು ಇಷ್ಟೆ ಇತ್ತು. ಎಲ್ಲ ರಾಜರ ಚಾರಕನಾಗಿ ಇದೇ ರೀತಿ ಅವನು ಬರಬೇಕು. ಇತ್ತೀ ಚೆಗೆ ರಾಕ್ಷಸದೂತ, ದೇವಲೋಕದ ಬಾಗಿಲಚಾರಕ, ಸಖ - ಹೀಗೆ ವಿಭಿನ್ನ ಪಾತ್ರ ಗಳಿಗೆ ಬೇರೆ ಬೇರೆ ರೀತಿಯ ಮುಖವರ್ಣಿಕೆ ಮತ್ತು ಉಡುಪುಗಳು ಬಳಕೆಗೆ ಬಂದಿವೆ.
- ಹಾಸ್ಯಗಾರನಿಗೆ, ಉಳಿದ ಪಾತ್ರಗಳಿಗಿಲ್ಲದ ಸ್ವಾತಂತ್ರ್ಯ, ಸೌಲಭ್ಯಗಳು, ಹಾಸ್ಯಗಾರನೆಂಬ ಸ್ಥಾನದಲ್ಲಿ ಅಂತರ್ಗತವಾಗಿ ಇವೆ. ಆತನು ಯಾವುದೇ ಪಾತ್ರ ವನ್ನು ತಮಾಷೆ ಮಾಡಬಹುದು, ಕತೆಯ ಕಾಲದ ಚೌಕಟ್ಟನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದಿಲ್ಲ. ಮಾತಿನ ಕ್ರಮ, ಶೈಲಿ, ಭಾಷೆಗಳಲ್ಲೂ ಉಳಿದ ಪಾತ್ರಗಳ “ನಾಟ್ಯಧರ್ಮಿ'ಯ ಬಿಗಿಯನ್ನು ಕಡೆಗಣಿಸಬಹುದು. ಸಹಜವಾದ ರೀತಿಯಿಂದ ಮಾತಾಡಬಹುದು. ಇದು ನಾಟ್ಯ ಧರ್ಮಿಯಿಂದ, ಲೋಕಧರ್ಮಿಗೆ, ಅವಾಸ್ತವ ದಿಂದ, ವಾಸ್ತವಕ್ಕೆ, ಪುರಾಣದಿಂದ ಆಧುನಿಕಕ್ಕೆ ಸಲೀಸಾಗಿ ಜಿಗಿಯುತ್ತ, ಸ್ಪಂದನ ಗಳನ್ನು ನಿರ್ಮಿಸುತ್ತ ಹೋಗುವ ಪಾತ್ರ, ಇಡೀ ಪ್ರೇಕ್ಷಕವರ್ಗದ ಪ್ರತಿನಿಧಿಯಾಗಿ ರಂಗದಲ್ಲಿ ಈ ಪಾತ್ರವಿದೆ ಮತ್ತು ಗಾಂಭೀರದ ಬಂಧನವಿಲ್ಲದೆ, 'ಹುಡುಗಾಟಿಕೆ ಯಿಂದ', ಅನಿರ್ಬಂಧಿತವಾಗಿ ಸನ್ನಿವೇಶಗಳಿಗೆ ಪ್ರತಿಕ್ರಿಯೆ ತೋರಿಸುತ್ತ ಪ್ರೇಕ್ಷಕನ ಮನಸ್ಸಿಗೆ ಅತಿಹತ್ತಿರವಾಗುತ್ತ, ಹೆಜ್ಜೆ ಹೆಜ್ಜೆಗೂ ಪ್ರದರ್ಶನಕ್ಕೆ ಸೃಷ್ಟಿಶೀಲ ಆಯಾಮ ನೀಡಬಲ್ಲ ಈ ಪಾತ್ರ ಒಂದು ರೀತಿಯಿಂದ ಬಯಲಾಟದ ಒಳ-ಹೊರ ಗನ್ನಳೆಯುವ ಒಂದು ಶಕ್ತಿ ಕೇಂದ್ರವೇ ಆಗಿದೆ. ಈ ಪಾತ್ರಕ್ಕೆ ತನ್ನದಾದ ವ್ಯಕ್ತಿತ್ವ