ವಿಷಯಕ್ಕೆ ಹೋಗು

ಪುಟ:ಪ್ರಸ್ತುತ.pdf/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಸೈದ್ಧಾಂತಿಕ ಖಚಿತತೆಯ ಆವಶ್ಯಕತೆ


ವೆಂಬುದಿಲ್ಲ, ಅಥವಾ ಎಲ್ಲ ವ್ಯಕ್ತಿತ್ವಗಳೂ ಅಲ್ಲಿ ಮಿಳಿತವಾಗುತ್ತವೆ. ಇದರ ಸಾಧ್ಯತೆಗಳನ್ನು ನಮ್ಮ ಹಾಸ್ಯಗಾರ ಕಲಾವಿದರು, ಅತ್ಯುತ್ಕೃಷ್ಟ ರೀತಿಯಿಂದ ದುಡಿಸಿಕೊಂಡಿದ್ದಾರೆ.

ಇಂತಹ ಅಸೀಮ ಸಾಧ್ಯತೆಗಳನ್ನು ಹೊಂದಿರುವ ಈ ಪಾತ್ರ, ತುಂಬ ಹೊಣೆಗಾರಿಕೆಯದು ಕೂಡ. ಮಾತು, ಅದರಲ್ಲೂ ಹಾಸ್ಯ, ಯಾವಾಗಲೂ ಕೆಳ ಮಟ್ಟಕ್ಕೆ ಜಾರುವ ಅಪಾಯ ಅಧಿಕ. ಉತ್ತಮ ಹಾಸ್ಯ ಸೃಷ್ಟಿ, ಉಳಿದ ರಸಗಳ ಅಭಿವ್ಯಕ್ತಿಗಿಂತಲೂ ಕಷ್ಟವೆನ್ನುವುದು ಈ ನೆಲೆಯಲ್ಲಿ. ಹಾಸ್ಯಗಾರನ ಹಾಸ್ಯಕ್ಕೆ, ಇತರ ಪಾತ್ರಗಳ ಪೂರ್ಣ ಸಹಕಾರ ಅತಿ ಅಗತ್ಯ. ಹಾಸ್ಯದ ಔಚಿತ್ಯ, ಅನೌಚಿತ್ಯ ಗಳಲ್ಲೂ ಇತರ ಪಾತ್ರಗಳ ಹೊಣೆಗಾರಿಕೆ ಇದೆ.

ಹಾಸ್ಯಗಾರನ ವೇಷ ವಿಧಾನವು ಕೂಡ, ಯಕ್ಷಗಾನದ ಇತರ ವೇಷಗಳಿಗೆ ಹೊಂದಿಕೆಯಾಗಿ, ಆದರೆ, ಅದು ತನ್ನ ಸಹಜ ಪ್ರತ್ಯೇಕತೆ, ಮತ್ತು ವೈಚಿತ್ರವನ್ನುಳಿಸಿ ಕೊಂಡು ರೂಪುಗೊಳ್ಳುವ ಅಗತ್ಯವಿದೆ. ಇಂತಹ ಯತ್ನವನ್ನು ಡಾ| ಶಿವರಾಮ ಕಾರಂತರು ರೂಪಿಸಿದ ವೇಷ ವಿಧಾನದಲ್ಲಿ ಕಾಣುತ್ತೇವೆ. ಕೆಲವು ಹಾಸ್ಯಗಾರರು ಕೂಡ, 'ಯಕ್ಷಗಾನೋಚಿತ-ಹಾಸ್ಯ ವೇಷದ' ಚಿತ್ರ ಶಿಲ್ಪಗಳನ್ನು ರೂಪಿಸಿದ್ದಾರೆ. ಇವುಗಳನ್ನು ಸೈದ್ಧಾಂತಿಕವಾದ ನೆಲೆಗಟ್ಟಿನಲ್ಲಿ ಸ್ಥಿರೀಕರಿಸುವುದು ಅಪೇಕ್ಷಣೀಯ ವಾಗಿದೆ.

ಅಭಿವ್ಯಕ್ತಿಯಾಗಲಿ, ಪ್ರಾಯೋಗಿಕ (experimental) ರಚನೆಯಾಗಲಿ, ಸಾರ್ಥಕವಾಗುವುದು, ಅದರ ಹಿಂದೆ ಕಲಾ ಸ್ವರೂಪದ ಸಮಗ್ರವಾದ ಗ್ರಹಿಕೆ ಮತ್ತು ಪರಿಕಲ್ಪನಾತ್ಮಕವಾದ ಖಚಿತತೆ ಇದ್ದಾಗ.


ಪದವೀಧರ ಯಕ್ಷಗಾನ ಸಮಿತಿ, ಮುಂಬಯಿ ಇವರ ಐದನೆಯ ಯಕ್ಷಗಾನ ಸಮ್ಮೇಳನದಲ್ಲಿ (ಒಕ್ಟೋಬರ್ ೧೯೯೧) ತಾ. ೨೨-೧೦-೧೯೯೧ರಂದು ಜರಗಿದ ಅಭಿವ್ಯಕ್ತಿ ಕಲ್ಪನೆ' ಗೋಷ್ಠಿಯ ಅಧ್ಯಕ್ಷ ಭಾಷಣದ ಲೇಖನ ರೂಪ 28561 GOVIN SURATKAL C 574 158

LIBRARY