ವಿಷಯಕ್ಕೆ ಹೋಗು

ಪುಟ:ಪ್ರಸ್ತುತ.pdf/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಆಧುನಿಕತೆಯ ಸ್ವೀಕರಣ / ೪೭


ಅದು ಪೋಷಕವಲ್ಲ, ಮಾರಕವಾಗಿದೆ. ದೀವಟಿಗೆಯ ಹಳದಿ ಬೆಳಕು ಮಾಡುತ್ತಿದ್ದ ಪರಿಣಾಮವನ್ನು ಮಾಡಬಲ್ಲ ಬೆಳಕನ್ನು ನಾವು ಸಂಯೋಜಿಸಬೇಕಾದುದು ಮುಖ್ಯ. ಈಗ, ರಂಗದ ದೀಪ ವ್ಯವಸ್ಥೆಯಲ್ಲಿ ದೊಡ್ಡ ಕ್ರಾಂತಿಯಾಗಿದ್ದು, ಯಾವುದೇ ಬಗೆಯ ಬಣ್ಣವನ್ನೂ ನಾವು ಪಡೆಯಲು ಸಾಧ್ಯ, ಉತ್ತಮ ಪ್ರತಿಫಲನ ಶಕ್ತಿಯುಳ್ಳ, ಪರಿಣಾಮದಲ್ಲಿ ಎಣ್ಣೆಯ ದೀಪಗಳಷ್ಟೆ ಸಶಕ್ತವಾದ ಫ್ಲೋರಸೆಂಟ್ ದೀಪಗಳು ಬಂದಿದ್ದು, ಅವುಗಳನ್ನು ಅಳವಡಿಸುವುದೇ ನಿಜವಾದ ಅರ್ಥದಲ್ಲಿ ಆಧುನಿಕತೆಯ ಸ್ವೀಕರಣವೆನಿಸುತ್ತದೆ.
ಆಭರಣಗಳ ಕುರಿತು ಕೂಡ ಇದೇ ದಾರಿಯನ್ನು ಅನುಸರಿಸಬಹುದು. ಆಕಾರದಲ್ಲೂ, ಅಲಂಕರಣದಲ್ಲೂ ಸಾಂಪ್ರದಾಯಿಕ ಆಭರಣಗಳಂತೆಯೆ ಇದ್ದು, ತಯಾರಿಕೆಯ ತಾಂತ್ರಿಕತೆಯಲ್ಲಿ ಸೌಲಭ್ಯವುಳ್ಳ ಆಭರಣಗಳ ಬಳಕೆ ಸಾಧ್ಯವಿದೆ. ಹಳದಿ ಬೇಗಡಿಯಿಂದ ಮುಚ್ಚಿದ, ಪ್ಲಾಸ್ಟಿಕ್ ಯಾ ತಗಡಿನ ಕಿರೀಟವನ್ನೂ, ಭುಜ ಕೀರ್ತಿಯನ್ನೊ ಬಳಸಿದರೆ, ಅದು ಸೌಂದರವನ್ನುಳಿಸಿಕೊಂಡು ಅಳವಡಿಸಿದ ಸೌಲಭ್ಯವಾಗುತ್ತದೆ. ಕಾಲಿಗೆ ಕಟ್ಟುವ ಕಾಣ್ಮುಳ್ಳು, ಕಾಲೊಂಡುಗಳನ್ನೆಲ್ಲ ಒಂದೇ ಆಭರಣವಾಗಿ ತಯಾರಿಸಿ, ಸುಲಭವಾಗಿ ಸಿಕ್ಕಿಸಿಕೊಳ್ಳುವ ಪಟ್ಟಿ (fix strap)ಗಳನ್ನು ಅಳವಡಿಸಿದರೆ, ಕಲಾ ಪರಂಪರೆಗೆ ಬಾಧಕವಲ್ಲ. ಇಂತಹ ವಿಷಯದಲ್ಲಿ ಬೇಕಾಗಿರುವುದು, ಒಂದು ಕೇಂದ್ರೀಯ ಸಿದ್ಧಾಂತ ದೃಷ್ಟಿ, ಅದು ಸ್ಪಷ್ಟವಾಗಿ ಕಣ್ಣ ಮುಂದೆ ಇದ್ದಾಗ, ಆಧುನಿಕ ಸೌಲಭ್ಯ ಮತ್ತು ಕಲಾ ಸೌಂದಯ್ಯಗಳ ಸಮನ್ವಯವು ಸಮಸ್ಯೆಯಾಗುವುದಿಲ್ಲ.
“ಹಿಂದೆ ಕೆಲವು ವಸ್ತುಗಳು ಇರಲಿಲ್ಲ. ಈಗ ಇವೆ. ಆದುದರಿಂದ ಅವು ರಂಗಕ್ಕೆ ಬಂದಿವೆ.” ಎಂಬ ಮಾತೊಂದಿದೆ. ಆದರೆ, ಕಲಾದೃಷ್ಟಿಯಿಂದ ನೋಡುವಾಗ ವಿಷಯವು ಅಷ್ಟು ಸರಳವಾಗಿ ಇಲ್ಲ. ಹಿಂದೆ ಇರಲಿಲ್ಲ, ಈಗ ಇದೆ ಎಂಬುದರಿಂದಲೇ ಒಂದು ವಸ್ತುವಾಗಲಿ, ತಂತ್ರವಾಗಲಿ ಸ್ವೀಕಾರಾರ್ಹವೆನಿಸಲಾರದು. ಈ ವಸ್ತು ಇಲ್ಲದಿದ್ದಾಗ, ಹಿಂದೆ ಇದ್ದ ವ್ಯವಸ್ಥೆ ಹೇಗಿತ್ತು? ಅದು ಯಾವ ಪರಿಣಾಮವನ್ನು ಸಾಧಿಸಿತ್ತು? ಅದನ್ನು ಈಗ ನಾವು ಮಾಡಿದ ಬದಲಾವಣೆಯಿಂದ, ಅಂದರೆ,ಹೊ ಸ ವಸ್ತುವಿನಿಂದ ಉತ್ತಮ ಪಡಿಸಿದ್ದೇವೆಯೆ? ಅಲ್ಲ, ಅಷ್ಟಕ್ಕಾದರೂ ಉಳಿಸಿದೇವೆಯೆ? ಎಂದು ಪ್ರಶ್ನಿಸಿಕೊಂಡರೆ, ಹಿಂದೆ ಇರಲಿಲ್ಲ_ಈಗ ಇದೆ_ಎಂಬ ಸರಳ ಸೂತ್ರವು ದುರ್ಬಲವೆನಿಸದಿರುವುದಿಲ್ಲ.
ಇದಕ್ಕೆ ದೃಷ್ಟಾಂತವಾಗಿ, ನಾವು ಇಂದು ಬಳಸುತ್ತಿರುವ ಗಾಜು ಮಣಿಗಳ ಆಭರಣಗಳನ್ನು ಮತ್ತು ಟ್ವಿಂಕಲ್, ನೈಲೆಕ್ಸ್ ಬಟ್ಟೆಗಳನ್ನು ಉದಾಹರಿಸಬಹುದು. ಇಲ್ಲ, ಮರದ ಆಭರಣದ ಬದಲು ಮಣಿಯ ಆಭರಣ_ಒಂದರ ಬದಲು ಇನ್ನೊಂದು ಬಗೆಯ ಬಟ್ಟೆ, ಎಂಬಂತಹ ಸರಳ ಬದಲಾವಣೆ ಆದುದಲ್ಲ. ಅತ್ಯಂತ