ವಿಷಯಕ್ಕೆ ಹೋಗು

ಪುಟ:ಪ್ರಸ್ತುತ.pdf/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೫೪ | ಪ್ರಸ್ತುತ

ಉ. ಕನ್ನಡ ರಂಗಪದ್ಧತಿಯು, ತೆಂಕುತಿಟ್ಟು ಮತ್ತು ಬಡಗುತಿಟ್ಟುಗಳ ಮೇಲೆ ಬೀರಿದ ಪ್ರಭಾವವನ್ನು ಮೂರು ಹಂತಗಳಲ್ಲಿ ಪರಿಶೀಲಿಸಬಹುದು. ೧೯೬೨ ರಲ್ಲಿ ಉ. ಕನ್ನಡ ಪದ್ಧತಿಯಲ್ಲಿ ಪಳಗಿದ ಕಡತೋಕಾ ಮಂಜುನಾಥ ಭಾಗವತರು ತೆಂಕುತಿಟ್ಟಿನ ಧರ್ಮಸ್ಥಳ ಮೇಳದ ಭಾಗವತರಾದರು. ಅದಾಗಲೇ, ತೆಂಕುತಿಟ್ಟಿನಲ್ಲಿ ದಿ| ಕುರಿಯ ವಿಠಲ ಶಾಸ್ತ್ರಿಗಳು, ಶಾಸ್ತ್ರೀಯ ನೃತ್ಯವನ್ನು ಅಭ್ಯಸಿಸಿ ಅದನ್ನು ಯಕ್ಷ ಗಾನದ ರಂಗಕ್ಕೆ ಅಳವಡಿಸುವ ಪ್ರಯೋಗ ಆರಂಭಿಸಿದ್ದರು. ಅವರು ಆಗ ಧರ್ಮ ಸ್ಥಳ ಮೇಳದ ಮುಖ್ಯ ವೇಷಧಾರಿಯಾಗಿದ್ದರು. ಅವರಿಗೆ ಕಡತೋಕ ಅವರು ಭಾಗ ವತರಾಗಿ ದೊರೆತುದೂ, ಅದಕ್ಕೆ ಸರಿಯಾಗಿ ದಿ| ಕುದ್ರೆಕೂಡ್ಲು ರಾಮ ಭಟ್ಟರು ಮದ್ದಲೆವಾದಕರಾಗಿದ್ದದೂ, ಒಂದು ವಿಶಿಷ್ಟ ಹೊಂದಾಣಿಕೆಯಾಗಿತ್ತು. ಈ ಮೂವರು, ನಿಧಾನವಾದ, ಪುನರಾವರ್ತನೆಗಳಿಂದ ಕೂಡಿದ ಪದ್ಯಾಭಿನಯವನ್ನು ರಂಗದಲ್ಲಿ ಪ್ರಯೋಗಿಸಿ ಹೊಸ ಅಲೆಯೊಂದನ್ನು ನಿರ್ಮಿಸಿದರು. ಇದೇ ಕಾಲದಲ್ಲಿ ಉ. ಕ.ದ ಹಿರಿಯ ನಟರಾದ ದಿ| ಮೂರೂರು ದೇವರು ಹೆಗಡೆ ಅವರೂ ಧರ್ಮಸ್ಥಳ ಮೇಳ ದಲ್ಲಿ ತಿರುಗಾಟ ನಡೆಸಿದ್ದರು. ಇದು ಒಂದು ಪರಿಪಕ್ವ ಪ್ರಯೋಗವೆಂದು ಅಂಗೀ ಕೃತವಾಯಿತು. ಆದರೆ, ಇದು ಇಡಿಯ ತಿಟ್ಟಿನ ಮೇಲೆ ಪ್ರಭಾವ ಬೀರಲು ಸಮ ರ್ಥವಾಗಲಿಲ್ಲ. ಕಾರಣ, ಅದು ಒಂದು ಸುದೀರ್ಘವಾದ, ಮೇಳ ಪರಂಪರೆಯ ಫಲ ವಾಗಿರದೆ, ವೈಯಕ್ತಿಕ ಯತ್ನವಾಗಿತ್ತು. ಆದರೆ, ಕಡತೋಕರು ಇಂದಿನವರೆಗೂ ಧರ್ಮಸ್ಥಳ ಮೇಳದ ಭಾಗವತರಾಗಿರುವುದರಿಂದ, ಆ ಮೇಳದ ರಂಗಪದ್ಧತಿಯು ತೆಂಕುತಿಟ್ಟಿನ ಉಳಿದ ಮೇಳಗಳಿಗಿಂತ ಭಿನ್ನವಾಗಿಯೇ ಬೆಳೆದು ಬಂದಿದೆ. ಗದಾಪರ್ವ, ಸುಧನ್ವಾರ್ಜುನ, ದಕ್ಷಾಧ್ವರ ಮುಂತಾದ ಹಲವು ಪ್ರಸಂಗಗಳಲ್ಲಿ ತೆಂಕು ತಿಟ್ಟಿನ ಹಳೆಯ ಪದ್ಧತಿಯ ಮಾಮೂಲು ಪ್ರದರ್ಶನಕ್ಕಿಂತ ಭಿನ್ನವಾದ ಪದ್ಧತಿಯು ನೆಲೆ ಗೊಂಡು, ಅದರ ಹಲವು ಅಂಶಗಳು ಬೇರೆ ಮೇಳಗಳಿಗೂ ವರ್ಗಾವಣೆಯಾಗಿವೆ.

ಎರಡನೆಯ ಹಂತದಲ್ಲಿ, ೧೯೬೮ರಲ್ಲಿ ಸಾಲಿಗ್ರಾಮ ಮೇಳವು, ಒಂದು ದೊಡ್ಡ ಮೇಳವಾಗಿ ಸಂಘಟನೆಗೊಂಡಾಗ ಕೆರೆಮನೆ ಶಿವರಾಮ ಹೆಗ್ಡೆ, ಮಹಾಬಲ ಹೆಗ್ಡೆ, ಶಂಭು ಹೆಗ್ಡೆ, ಗಜಾನನ ಹೆಗ್ಡೆ ಅವರು ವೇಷಧಾರಿಗಳಾಗಿ ಬಂದರು. ಇದರ ಬೆನ್ನಿಗೆ ಚಿಟ್ಟಾಣಿ ರಾಮಚಂದ್ರ ಹೆಗ್ಡೆಯವರೂ, ಬಡಗುತಿಟ್ಟಿನ ಮೇಳಗಳಲ್ಲಿ ಪ್ರಮುಖ ವೇಷಧಾರಿಯಾದರು. ಹಿಂದೆಯೇ ಕೆರೆಮನೆ ಮೇಳದಲ್ಲಿ ಭಾಗವತರಾ ಗಿದ್ದ, ಮತ್ತು ಡಾ| ಕಾರಂತರ ಪ್ರಯೋಗಗಳಲ್ಲಿ ಭಾಗವಹಿಸಿದ್ದ ದಿ| ನಾರ್ಣಪ್ಪ ಉಪ್ಪರರು, ಉ. ಕ. ಶೈಲಿಯ ವೇಷಧಾರಿಗಳಿಗೆ ಭಾಗವತಿಕೆ ಮಾಡಬಲ್ಲವರಾಗಿ ದ್ದರು. ಉ. ಕ.ದ ವೇಷಧಾರಿಗಳ ಪ್ರವೇಶ, ಬಡಗುತಿಟ್ಟಿನ ಮೇಲೆ ಪ್ರಚಂಡ ವೆನಿಸುವ ಪ್ರಭಾವ ಬೀರಿತು, ರಂಗಪ್ರದರ್ಶನದಲ್ಲಿ ಹೊಸ ಸಾಧ್ಯತೆಯು ಲೋಕ ವನ್ನೆ ತೆರೆದು ತೋರಿತು. ಯಕ್ಷಗಾನವೆಂದರೆ ಹೀಗೂ ಉಂಟೆ, ಅದರ ಪದ್ಯಗಳಲ್ಲಿ ಅಭಿನಯಕ್ಕೆ ಇಷ್ಟೆಲ್ಲ ಸಾಧ್ಯತೆಗಳುಂಟೆ ಎಂದು ರಸಿಕರು ಅಚ್ಚರಿಪಡುವಂತಾಯಿತು.