ವಿಷಯಕ್ಕೆ ಹೋಗು

ಪುಟ:ಪ್ರಸ್ತುತ.pdf/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಉತ್ತರ ಕನ್ನಡ ಯಕ್ಷಗಾನ ಪರಂಪರೆ / ೫೫

ಯಕ್ಷಗಾನದ ರಸಿಕರಿಗೂ, ಕಲಾವಿದರಿಗೂ ಇದೊಂದು ಸಾಕ್ಷಾತ್ಕಾರ (revelation) ಮತ್ತು ಶಾಕ್ ಕೂಡ ಆಗಿತ್ತು. ಇದರ ಪ್ರಭಾವ ಇಂದಿಗೂ ಮುಂದುವರಿದಿದೆ.

ಹೀಗೆ ಒಂದು ಮಹತ್ವದ ರಂಗಘಟನೆಯಾಗಿ ಬಂದ, ಒಂದು ಅಲುಗಾಟದ ಕ್ರಿಯೆಯಾಗಿದ್ದ ಉ. ಕನ್ನಡ ಪ್ರಭಾವಕ್ಕೆ ಕಲಾವಿದರು ಎರಡು ರೀತಿಯಾಗಿ ಪ್ರತಿ ಕ್ರಿಯಿಸಿದರು. ಕೆಲವು ಹಿರಿಯ ನಟರು, ಈ ಅಲುಗಾಟಕ್ಕೆ ಒಳಗಾಗದೆ, ತಮ್ಮದೆ ಆದ ರೀತಿಯಿಂದ ಗಂಭೀರವಾಗಿ ಮುಂದುವರಿದರು. ಅವರು ಕಳೆಗುಂದದೆ, ತಮ್ಮ ಅಸ್ತಿತ್ವ ಉಳಿಸಿದರು ಕೂಡ. (ಉದಾ: ದಿ| ಶಿರಿಯಾರ ಮಂಜುನಾಯಕರು). ಇನ್ನು ಹಲವರು ಉ. ಕನ್ನಡದ ನಟರನ್ನು ಅನುಕರಿಸಲು ಹೊರಟರು. ಸಹಜವಾಗಿ ಇದು, ಅವರು ಸಾಗಿ ಬಂದ ಪರಂಪರೆಯ ಮೇಲೆ, ಹೊಸ ತೇಪೆಯಂತಾಗಿ, ಅಪಕ್ವವೆನಿಸಿತು. ಇದ ರಿಂದ ಅವರ ಮೂಲತಿಟ್ಟಿನ ಸತ್ವವೂ ನಾಶವಾಯಿತು. ಇದರಿಂದಾಗಿ, ವಿಶೇಷತಃ ಕುಂದಾಪುರಿ ಬಡಗುತಿಟ್ಟಿನ ಪ್ರತ್ಯೇಕತೆಯೇ ಅಳಿದು ಹೋಗುವಂತಾಗಿದ್ದು, ಉ. ಕ. ಮತ್ತು ಬಡಗು ತಿಟ್ಟುಗಳು ಒಂದರಲ್ಲೊಂದು ಲೀನವಾಗುತ್ತಿವೆ. ಆದರೆ ಇದು ಎರಡೂ ತಿಟ್ಟುಗಳ ಒಳ್ಳೆಯ ಅಂಶಗಳ ಸಮನ್ವಯವಾಗದೆ, ಒಂದು ಅವ್ಯವಸ್ಥಿತ ಮಿಶ್ರಣವು ಕಾಣಿಸುತ್ತಿದ್ದು, ಪದ್ಯಗಳ ನೃತ್ಯಾಭಿನಯದ ಹೆಸರಲ್ಲಿ ತುಂಬ ಬಾಲಿ ಶವಾದ ವಿಕಾರಗಳು ಬೆಳೆದಿವೆಯೆಂದು ವಿಷಾದದಿಂದ ಹೇಳಬೇಕಾಗಿದೆ. ಇಲ್ಲಿ ಅನು ಸರಣೆಯು ಒಂದು ಅಭಿವ್ಯಕ್ತಿಯ ಕಾಳಜಿಯಾಗದೆ, ಒಂದು ಫ್ಯಾಶನ್ ಆಗಿರುವುದು ಕಂಡುಬರುತ್ತಿದೆ. ಕೆರೆಮನೆ ಶಂಭು ಹೆಗ್ಡೆ ಅವರು ಒಂದು ಪ್ರಬುದ್ಧವಾದ ಸಮನ್ವ ಯದ ಮಾದರಿಯನ್ನು ಕೊಟ್ಟರೂ, ಅದರ ಸೈದ್ದಾಂತಿಕ ಗ್ರಹಿಕೆ ಉಳಿದವರಿಗೆ ಸಾಧ್ಯವಾಗಲಿಲ್ಲ.

ಉ. ಕನ್ನಡ ಪದ್ಧತಿಯ ಪ್ರಭಾವವನ್ನು ಇನ್ನೊಂದು ಕ್ಷೇತ್ರದಲ್ಲಿ ಗುರುತಿಸಬಹುದು. ದಕ್ಷಿಣ ಕನ್ನಡಕ್ಕೆ ತಾಗಿ ಕೊಂಡಿರುವ ಸಾಗರ, ಹೊಸನಗರ, ಶೃಂಗೇರಿ, ತೀರ್ಥಹಳ್ಳಿ ಪ್ರದೇಶದ ಯಕ್ಷಗಾನವು (ಕುಂದಾಪುರಿ) ಬಡಗುತಿಟ್ಟಿನ ವಿಸ್ತರಣವೇ ಆಗಿತ್ತು. ಇದೀಗ ಬಹುಪಕ್ಷ ಉ. ಕನ್ನಡ ತಿಟ್ಟಿಗೆ ಮಾರ್ಪಾಟು ಹೊ೦ದಿದೆ.

ಈ ಸಂದರ್ಭದಲ್ಲಿ ಗಮನಿಸಬೇಕಾದ ಪ್ರಮುಖ ವಿದ್ಯಮಾನವೊಂದನ್ನು ಎಲ್ಲ ತಿಟ್ಟುಗಳಿಗೆ ಸಂಬಂಧಿಸಿ ಗಮನಿಸಬಹುದು. ಕರಾವಳಿಯ ಮೂರೂ ತಿಟ್ಟುಗಳು ಒಂದಲ್ಲ ಒಂದು ಬಗೆಯಿಂದ ಅಸ್ತಿತ್ವ ಸಂಕಟ (Crisis of identity) ಅನುಭವಿ ಸುತ್ತಿವೆ. ಒಂದು ಕಡೆಯಿಂದ, ವ್ಯಾವಹಾರಿಕ ವಾಸ್ತವದ ಒತ್ತಡ. ಒಂದು ಉದ್ಯಮ ವಾಗಿ, ಲಕ್ಷಗಟ್ಟಲೆ ಹೂಡಿಕೆಯ ವ್ಯವಹಾರವು ಬಾಳಬೇಕಾದರೆ 'ರಾಜಿ'ಗಳು ಮತ್ತು ಆಕರ್ಷಣಾತಂತ್ರ (ಗಿಮಿಕ್ಸ್)ಗಳು ಅನಿವಾರ್ಯವಾಗುತ್ತವೆ. ಈಗ ಈ ಉದ್ಯಮಕ್ಕೆ ಇರುವ ಮಾರುಕಟ್ಟೆಯ ಪ್ರದೇಶ ಮತ್ತು ಜನಸಂಖ್ಯೆಯನ್ನು ಗಮನಿಸಿದರೆ, ಇರುವ