ವಿಷಯಕ್ಕೆ ಹೋಗು

ಪುಟ:ಪ್ರೇಮ ಮಂದಿರ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಾಗೊ ಸಣ. • • • • •v , ದಲ್ಲಿ ಕ್ಲಾಂತನಾಗಿ ದೇವೇಂದ್ರಕುಮಾರನಾದ ಜಯಂತನೇ ವಿಶ್ರಾಂತಿಗೋಸ್ಕರವಾಗಿ ಈ ಪರ್ಣಕುಟೀರದಲ್ಲಿ ಬಂದು ಮಲಗಿರುವನೆಂದು ಆ ರಮಣಿಯು ಭಾವಿಸಿದಳು ! ಪ್ರಿಯವಾಚಕರೇ, ಇಷ್ಟು ಹೊತ್ತಿನ ವರೆಗೆ ನಿಮಗೆ ಹೇಳದೆ ಇದ್ದ ಆ ಸುಂದರಿಯ ಹೆಸರು ಲಲಿತೆ ' ಯೆಂಬುದಾಗಿತ್ತೆಂದು ಈಗ ಹೇಳಿಬಿಡುವೆವು. ರಾಜಕುಮಾರಿಯು ತನ್ನಲ್ಲಿಯೇ ಅಲೋಚಿಸಹತ್ತಿದಳು. ಎಲೈ ಭಗವಂತಾ, ಯಾಕೆ ನನ್ನ ಪರೀಕ್ಷೆಯನ್ನು ಮಾಡುತ್ತಲಿರುವೆ ? ಈ ರೂಪವಷ್ಟಿಯಲ್ಲಿ ನಾನೇತಕ್ಕೆ ಹಾರಿ ಕೊಂಡೆನೋ ? ಅಪೂರ್ವ ಸಂಘಟನೆಯಿಂದ ಈ ಕುಮಾರನು ನನ್ನ ದೃಷ್ಟಿಗೇಕೆ ಬೀಳ ಬೇಕು ? ಯಾವನು ನನಗೆ ಎಂದೂ ಲಭಿಸವಂತಿಲ್ಲವೋ, ಯಾವನನ್ನು ಆಸಿಸುವದಕ್ಕೆ ನನಗೆ ಆಸ್ಪದವಿಲ್ಲವೋ ಅಂತಹನ ವಿಷಯವಾಗಿ ಈ ನನ್ನ ಹೃದಯವ ಹೀಗೇಕೆ ಉನ್ನ ತವಾಗಿರುವದು ? ಚಾಣರೂ ಚಂದ್ರಾವತರೂ ಅನ್ನೋನ್ಯವಾಗಿ ಬದ್ಧವೈರಿಗಳು. ಅದರ ಲಿಯೂ ನನ್ನ ತಂದೆಯು ಈ ವೀರಶ್ರೇಷನಾದ ಕರುಣಸಿಂಹನಿಗೆ ಮುಖ್ಯ ಶತ್ರುವ! ನನ್ನ ತಂದೆಯೇ ಈ ಕುಮಾರನ ಸರ್ವಸ್ವವನ್ನೂ ಅಪಹರಿಸಿದ್ದಾನೆ. ನನ್ನ ತಂದೆಯ ಈ ಅತ್ಯಾ ಚಾರದ ಮೂಲಕವಾಗಿಯೇ ಕರುಣಸಿಂಹನ ಸರ್ವಸ್ವವು ನಾಶವಾಗಿ ಆತನು ಬಾದಶಹನ ಸೇನಾಪತಿಯಾಗಬೇಕಾಯಿತು. ಕರುಣಸಿಂಹನು ನಿಜವಾಗಿಯೂ ನನ್ನವನಾಗಬಹುದು ! ಆದರೆ ನನ್ನ ಅಪ್ಪನು ಇದಕ್ಕೆ ಸಮ್ಮತಿಸುವುದೆಂತು ? ” ರಾಜನಂದಿನಿಯಾದ ಲಲಿತೆಯ ಚಿಂತನಪ್ರವಾಹಕ್ಕೆ ಒಮ್ಮೆಲೆ ತಡೆಯುಂಟಾ ಡಿತು. ಪತ್ರಶಯ್ಕೆಯಮೇಲೆ ಮಲಗಿಕೊಂಡಿದ್ದ ಕುಮಾರನು ಈ ಕಾಲಕ್ಕೆ ಮೆಲ್ಲ ಮೆಲ್ಲನೆ ಕಣ್ಣೆರೆದನು, ಮತ್ತು ಅಸ್ಪಷ್ಟವಾದ ವಾಣಿಯಿಂದ ಮಾತಾಡಿದನು. ( ನಾನು ಎಲ್ಲಿ ಇದ್ದೇನೆ. ಈ ಮೋಹಪೂರ್ಣ ಪ್ರದೇಶದಲ್ಲಿ ನನ್ನನ್ನು ತಂದವರಾರು ? ನನ್ನ ಹಾಸುಗೆಯ ಬಳಿಯಲ್ಲಿ ಕುಳಿತಿರುವ ದೇವಬಾಲೆ ನೀನಾರು ??? ಲಲಿತೆಯು ದೊಡ್ಡ ಸಂಕಟದಲ್ಲಿ ಬಿದ್ದಳು. ನಾಚುಗೆಯಿಂದ ಆಕೆಯ ಕುತ್ತಿಗೆಯು ಜಗಿದುಹೋಯಿತು. ಲಲಿತೆಯು ಕರುಣಸಿಂಹನಿಗೆ ನಾಚುವುದು ಸ್ವಾಭಾವಿಕವಾಗಿಯೇ ಇತ್ತು. ಆದರೆ ಯಾವನು ನಿನ್ನ ಪ್ರಾಣವನ್ನು ಬದುಕಿಸಿದನೋ, ಆತನಿಗೆ ನಾಚಬೇಕಾದ ಕಾರಣವೇನೂ ಇಲ್ಲ. ' ಎಂದು ಆ ಯೋಗಿಯು ಅವಳಿಗೆ ಎಷ್ಟೋ ಸಾರಿ ಹೇಳಿದ್ದನು. ಲಲಿತೆಯು ಕಂಪಿತವಾದ ಮೃದುಸ್ವರದಿಂದ ಮಾತಾಡಿದಳು. “ ತಾವು ಯಾವ ವಿಷ ಯಕ್ಕೂ ಚಿಂತೆಯನ್ನು ಮಾಡಬೇಡಿರಿ. ತಾವು ಒಳ್ಳೇ ಸುರಕ್ಷಿತವಾದ ಸ್ಥಳದಲ್ಲಿಯೇ ಇದ್ದೀರಿ, ” “ ನೀನು ಯಾರು ? ಮತ್ತು ಇಷ್ಟೊಂದು ಪ್ರೇಮದಿಂದ ನನ್ನ ಶುಶೂಷೆಯನ್ನೇಕೆ ಮಾಡುತ್ತಿರುವೆ ? "