ಪುಟ:ಪ್ರೇಮ ಮಂದಿರ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರೇಮಮಂದಿರ. M +++ ++ "... " ( ತಮಗೆ ಆಶ್ರಯವನ್ನಿತ್ಯ ಯೋಗಿವರರಿಗೆ ನಾನೊಬ್ಬಳು ಶಿಷ್ಯಳು. ಆಜ್ಞೆಯನ್ನು ಶಿರಸಾವಹಿಸುವದು ನನ್ನ ಕರ್ತವ್ಯವು, ತಮ್ಮ ಸೇವೆಯನ್ನು ಮಾಡುವದಕ್ಕೋಸ್ಕರ ನಾನು ನಿಯಮಿಸಲ್ಪಟ್ಟಿದ್ದೇನೆ. ” ( ಈ ಕೆಲಸಕ್ಕೆ ನಿನ್ನನ್ನು ಯಾರು ನಿಯಮಿಸಿದರು. ? ” • ಆ ಯೋಗಿವರ್ಯರೇ, ” ( ಆ ಯೋಗಿವಯ್ಯರು ಯಾರು ? ” «« ಅವರೊಬ್ಬ ಮಾಹಾತಪಸ್ವಿಗಳು. ೨) « ಹೀಗೊ-ಆದರೆ ನಾನು ಈ ಸ್ಥಳಕ್ಕೆ ಹೇಗೆ ಬಂದೆನು ? ೨೨ ಲಲಿತೆಯು ಕರುಣಸಿಂಹನಿಗೆ ಹಿಂದಿನ ವೃತ್ತಾಂತವನ್ನೆಲ್ಲ ಹೇಳಿದಳು. ಅವಳು ಹೇಳುತ್ತ ಹೋದಂತೆ ಕರುಣಸಿಂಹನಿಗೂ ಹಿಂದಿನ ಸಂಗತಿಗಳು ನೆನಪಾಗಹತ್ತಿದವು, ಆಗಲವನು ಉತ್ಕಂಠತೆಯಿಂದ ಪ್ರಶ್ನೆ ಮಾಡಿದನು. " ಶಹಾನಶಹರು ಎಲ್ಲಿ ಇದ್ದಾರೆ ? ” - ( ತಮ್ಮ ಶುಕ್ರೂಷೆಯ ವ್ಯವಸ್ಥೆಯನ್ನು ಮಾಡಿ ಜಹಾಪನಾಹರು ದಿಲ್ಲಿಗೆ ಹೊರಟು ಹೋದರು. ತಮಗೋಸ್ಕರ ಗಾಡಿಯು ಸಿದ್ದವಾಗಿದೆ. ತಮಗೆ ವಾಸಿಯಾಯಿತೆಂದರೆ ಎಲ್ಲಿಗೆ ಹೋಗತಕ್ಕದ್ದೂ ಅಲ್ಲಿಗೆ ಹೊರಡಬಹುದು, ” - « ಈ ಪ್ರಾಣಸಂಕಟದಲ್ಲಿ ನೀನು ನನ್ನನ್ನು ಜೋಪಾನಮಾಡಿದೆ. ಈ ನಿನ್ನ ಉಪಕಾ ರವನ್ನು ನಾನು ಹೇಗೆ ತೀರಿಸಲಿ ? ನಿನ್ನ ವಿಷಯವಾಗಿ ನನ್ನಲ್ಲಿರುವ ಕೃತಜ್ಞತೆಯನ್ನು ನಾನು ಹೇಗೆ ತೋರಿಸಲಿ ? ನೀನು ಸ್ವರ್ಗದೊಳಗಿನ ದೇವಕನ್ಯಯೋ? ಯಾಕಂದರೆ ನೀನು ಶುಕ್ರೂಷೆ ಮಾಡಿದುದರಿಂದ ನನ್ನ ಯಾತನೆಗಳೆಲ್ಲವೂ ಇಲ್ಲದಂತಾದುವು. ೨೨ ಈ ಮಾತನ್ನು ಕೇಳಿ ಲಲಿತೆಯು ಲಜ್ಜಿತಳಾದಳು. ಅಸ್ಪುಟಸ್ವರದಿಂದಲೂ ಗಾಂಭೀ ರ್ಯದಿಂದಲೂ ಅವಳು ಮಾತನಾಡಿದಳು. “ ಮೊದಲು ತಾವೇ ನನ್ನ ಪ್ರಾಣವನ್ನು ಉಳಿಸಿದಿರಿ. ನನ್ನ ಈ ಕ್ಷುದ್ರವಾದ ಪ್ರಾಣದ ಮೇಲೆ ಇನ್ನು ತಾವೇ ಪೂರ್ಣ ಅಧಿಕಾ ರಿಗಳು.- ೨೨ - ಲಲಿತೆಯ ಬಾಯಿಂದ ಹೆಚ್ಚಾಗಿ ಮಾತುಗಳು ಹೊರಡಲಿಲ್ಲ. ಆಕೆಯು ತನ್ನ ಲ್ಲಿಯೇ ನಕ್ಕು ಮಾತನಾಡಿಕೊಂಡಳು. “ ನಮ್ಮ ವ್ಯಾ! ಎಂತಹ ಧೈರ್ಯದು ? ನಾನು ಸ್ಪಷ್ಟವಾಗಿ ನುಡಿದು ಬಿಟ್ಟೆನಲ್ಲ!... "

  • ಕರುಣಸಿಂಹನು ಕಿಂಚಿತ್ಸಂಕೋಚದಿಂದ ಪ್ರಶ್ನೆ ಮಾಡಿದನು. ಸುಂದರೀ! ನಿನ್ನ ಪರಿಚಯವನ್ನು ನನಗೆ ಹೇಳಲು ನಿಜವಾಗಿ ಏನಾದರೂ ಪ್ರತಿಬಂಧಕವಿದೆಯೇ ? ”

ಈ ಪ್ರಶ್ನೆಗೆ ಉತ್ತರ ಕೊಡಬೇಕಾದರೆ ಲಲಿತೆಯ ಹೃದಯವು ವಿದೀರ್ಣವಾಗ ಹತ್ತಿತು. ಯಾವ ಕರುಣಸಿಂಹನು ಅವಳ ತಂದೆಯ ನಿಷ್ಟುರವಾದ ಮತ್ತು ನಿಂದ್ಯವಾದ ಆಚರಣೆಗಳಿಂದ ಭಿಕ್ಷುಕನಂತೆ ಸಿಕ್ಕಸಿಕ್ಕಲ್ಲಿ ಹುಡು ಹಡು ತಿರುಗುತ್ತಿದ್ದನೋ ಅವನಿಗೆ