ವಿಷಯಕ್ಕೆ ಹೋಗು

ಪುಟ:ಪ್ರೇಮ ಮಂದಿರ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪ ವಾಗ್ಯೂಷಣ, ++\\r\ #vhhff st fits? 2 + ## # # # # # # #

  • *ಕೆ 1

ರಾಜಕುಮಾರಿಯ ಈ ಮಾತಿನಿಂದ ಆ ಸ್ತ್ರೀಗೆ ಸ್ವಲ್ಪ ತ್ರಾಸವಾದಂತೆ ತೋರಿತು. ಆಕೆಯ ಹೃದಯದಲ್ಲಿ ಆವುದೋ ಒಂದು ಗೂಢವಿಚಾರವು ಉತ್ಪನ್ನವಾಗಿರಬಹು ದೆಂದು, ಅವಳ ಮುಖವನ್ನು ನೋಡುವ ಯಾವನಾದರೂ ತರ್ಕಿಸುವಂತಿತ್ತು. ಪ್ರಬ ಲವಾದ ಆವೇಗಭರದಿಂದ ಅವಳು ಒಮ್ಮೆಲೆ ಹರಿಹಾಯ್ದು ಸ್ವಲ್ಪ ಕುದ್ಧ ಸ್ವರದಿಂದ ಮಾತನಾಡಿದಳು. (( ಲಲಿತೇ, ಲಲಿತೆ, ಈ ಮಾತನ್ನು ನನ್ನ ಮುಂದೆ ಬಚ್ಚಿಡುವ ಪ್ರಯ ತವನ್ನು ಸ್ವಲ್ಪಾದರೂ ಮಾಡಬೇಡ, ಆ ನಿನ್ನ ಪ್ರಯತ್ನವು ಎಂದೂ ಸಫಲವಾಗುವುದಿಲ್ಲ. ತಿಳಿಯಿತೇ? ನಿಮ್ಮಿಬ್ಬರ ಪ್ರೇಮಕಥೆಗಳನ್ನು ನಾನು ಪೂರ್ಣವಾಗಿ ತಿಳಿದಿದ್ದೇನೆ ! ಇಂತಹನನ್ನಿಂದ ನೀನಾ ಸಂಗತಿಗಳನ್ನು ಬಚ್ಚಿಡುವೆಯಾ ? ನಾನು ಒಂದೇ ಒಂದು ಮಾತನ್ನು ನಿನಗೆ ಹೇಳುತ್ತೇನೆ ಕೇಳು; ಅಂದರೆ ನನ್ನ ಮಾತಿನ ಸತ್ಯತೆಯು ನಿನಗೆ ಕಂಡು ಬರುವುದು, ೨೨ ( ಹೇಳು. ಅದಾವ ಮಾತನ್ನು ಹೇಳುತ್ತೀ ? ಸ್ವಲ್ಪ ಕೌತುಕದಿಂದಲೂ ಸ್ವಲ್ಪ ದಿಟ್ಟತನದಿಂದಲೂ ಲಲಿತೆಯು ಮಾತನಾಡಿದಳು. ಆ ಸ್ತ್ರೀಯು ಮಂದಹಾಸದಿಂದ ಮಾತನಾಡಿದಳು. (( ಕುಮಾರಕರುಣಸಿಂಹನು ಈಗಲೇ ಇಲ್ಲಿಂದ ಹೊರಟುಹೋದನು. ಲಲಿತೇ, ನೀವಿಬ್ಬರೂ ಆಡಿದ ಮಾತುಗಳೆ ಲ್ಲವನ್ನೂ ನಾನು ಕೇಳಿದೆನು; ತಿಳಿಯಿತೇ? ೨೨ ಈ ಮಾತಿನಿಂದ ಲಲಿತೆಯ ಆಶ್ಚರ್ಯವು ದ್ವಿಗುಣಿತವಾಯಿತು. ಆದರೆ ಆ ಆಶ್ಚ ರ್ಯವನ್ನು ವ್ಯಕ್ತಗೊಳಿಸದೆ ಅವಳು ಮಾತನಾಡಿದಳು. ( ಒಳ್ಳೇದು. ನೀನು ಹೇಳಿ ದುದು ನಿಜವಾಗಿದ್ದರೆ, ಮುಂದೆ ಮಾಡತಕ್ಕವಳೇನು ? ನಾನು ಈ ವಿಷಯದಲ್ಲಿ ಏನು ಮಾಡಬೇಕೆಂದು ನೀನನ್ನುತ್ತೀ? ” - ಆ ಸ್ತ್ರೀಯು ಸ್ವಲ್ಪ ಅಧಿಕಾರದ ಸ್ವರದಿಂದ ಹೇಳಿದಳು. ರಾಜಕನ್ಯಯೋ, ನಾನು ಹಿತಕರವಾದ ಮಾತನ್ನೇ ನಿನಗೆ ಹೇಳುತ್ತಿದ್ದೇನೆ ಕೇಳು. ಕುಮಾರನ ಮೇಲೆ ಪ್ರೇ ಮಾಡುವುದನ್ನು ಬಿಟ್ಟು ಬಿಡು. ಅದರ ಪರಿಣಾಮವು ಒಳ್ಳೆಯದಾಗುವುದಿಲ್ಲ. ' ಕುಮಾ ರನನ್ನು ಮರೆತು ಬಿಡುತ್ತೇನೆಂ' ದು ಈಗ ನನ್ನ ಸಮಕ್ಷದಲ್ಲಿ ನೀನು ಒಪ್ಪಿಕೊ, ಮತ್ತೆ ಆತನ ದರ್ಶನವನ್ನೇ ತೆಗೆದುಕೊಳ್ಳುವುದಿಲ್ಲವೆಂದು ನನಗೆ ವಚನಕೊಡು. ಇಷ್ಟೇ ಅಲ್ಲ; ಆತನ ದರ್ಶನಕ್ಕೋಸ್ಕರ ನೀನು ಪ್ರಯತ್ನವನ್ನು ಕೂಡ ಎಂದೂ ಮಾಡ ತಕ್ಕುದಲ್ಲ.” ಇಷ್ಟು ಮಾತನಾಡಿ ಆ ವಿಲಕ್ಷಣ ಸ್ತ್ರೀಯು ಕೆಲಹೊತ್ತು ಸುಮ್ಮನೆ ನಿಂತಳು, ಪಾಪ! ಲಲಿತೆಯು ಕಲ್ಲಬೊಂಬೆಯಂತೆ ನಿಂತಲ್ಲಿಯೇ ನಿಂತುಬಿಟ್ಟಳು. ವಿಸ್ಮಯಾತಿ ರೇಕದಿಂದ ಆಕೆಯ ಬಾಯಿಂದ ಶಬ್ದಗಳೇ ಹೊರಡದಾದವು !