ಪುಟ:ಪ್ರೇಮ ಮಂದಿರ.djvu/೩೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಪ್ರೇಮಮಂದಿರ 9 $# #1 # # # # # #*#* tina ತನ್ನ ಮಾತಿಗೆ ಲಲಿತೆಯು ಉತ್ತರವನ್ನು ಕೊಡುವುದಿಲ್ಲವೆಂದು ತಿಳಿದು ಆ ಸ್ತಿಯು ಮತ್ತೆ ಮಾತಾಡಹತ್ತಿದಳು. '(ಲಲಿತೇ, ನಿನ್ನ ಪ್ರೇಮವು ಯಾವನ ಮೇಲೆ ಕೂತಿ ರುವುದೋ ಆ ಕರುಣಸಿಂಹನು ನನ್ನವನಾಗಿದ್ದಾನೆ. ಆತನ ಪ್ರೇಮದ ಮೇಲೆ ನನ್ನ ಪೂರ್ಣ ಅಧಿಕಾರವಿದೆ. ಚಿಕ್ಕಂದಿನಿಂದಲೂ ನಾವಿಬ್ಬರೂ ಕೂಡಿಯೇ ಆಡಿದವರು; ಕೂಡಿಯೇ ಬೆಳೆದವರು; ಆಗಿನಿಂದಲೇ ಆತನು ನನ್ನ ಹೃದಯೇಶ್ವರನಾಗಿದ್ದಾನೆ. ಅಂದಿನಿಂದಲೇ ನನ್ನ ಪ್ರೇಮವು ಆತನ ಮೇಲೆ ದೃಢವಾಗಿ ಕೂತಿದೆ. ರಾಜಕನೈಯೇ, ನನ್ನ ಹೃದಯೇಶ್ವರನನ್ನು ಈಗ ನೀನು ಅಪಹರಿಸುತ್ತಿರುವೆ! ಕುಮಾರನ ವಿಷಯಕ ವಾದ ಪ್ರೇಮತರುವಿನ ಬೇರುಗಳು ನನ್ನ ಹೃದಯಭೂಮಿಯಲ್ಲಿ ತಳತನಕ ಇಳಿದು ಹೋಗಿವೆ. ನಿನ್ನ ಕೃತ್ಯದ ಮೂಲಕ ಆ ಭೂಮಿಯು ಈಗ ವಿದೀರ್ಣವಾಗುತ್ತಲಿದೆ! ನಾನು ಕುಮಾರನಿಗೋಸ್ಕರ- ಆತನ ಪ್ರೇಮಪ್ರಾಪ್ತಿಗೋಸ್ಕರ-ಭಿಕ್ಷುಕಿಯಾಗಿ ಹುಚ್ಚಿಯಂತೆ ದೇಶಾಂತರಗಳಲ್ಲಿ ಸಂಚರಿಸುತ್ತಲಿದ್ದೇನೆ ! ಲಲಿತೇ, ನನ್ನ ಪ್ರಾಣನಾಥ ನನ್ನು ಸೆಳೆದುಕೊಳ್ಳಬೇಡ; ನನ್ನ ಶಾಪವು ನಿನಗೆ ಹತ್ತದೆ ಎಂದೂ ಬಿಡಲಾರದು! ” ರಾಜಕುಮಾರಿಯಾದ ಲಲಿತೆಯು ಆ ಸ್ತ್ರೀಯ ಮಾತಿನಿಂದ ಚಕಿತಳಾಗಿದ್ದಳಾ ದರೂ ಅವಳ ಭಾಷಣದೊಳಗಿನ ಕೆಲವು ಸಂಗತಿಗಳು ಅಸ್ಪಷ್ಟವಾಗಿ ಆಕೆಗೆ ತಿಳಿಯ ಹತ್ತಿದುವು. ಆದರೂ ಆಶ್ಚರ್ಯಾತಿರೇಕದ ಮೂಲಕ ಲಲಿತೆಯ ಬಾಯಿಂದ ಶಬ್ದ ಗಳು ಹೊರಡಲಿಲ್ಲ. ಕೆಲಹೊತ್ತಿನ ವರೆಗೆ ನೆಲನ್ನು ನೋಡುತ್ತ ಅವಳು ಸ್ತಬ್ಧಳಾಗಿ ದ್ದಳು. ಅಷ್ಟು ಅಲ್ಲಾವಕಾಶದಲ್ಲಿಯೇ ಅವಳ ಮನಸ್ಸಿನಲ್ಲಿ ಅನೇಕ ಪ್ರಕಾರದ ವಿಚಾರ ತರಂಗಗಳು ಉದ್ಗತವಾಗಿ ನಿಲಯಹೊಂದುತ್ತಿದ್ದುವು. ಸ್ವಲ್ಪ ವೇಳೆಯ ಮೇಲೆ ಎಚ್ಚರಗೊಂಡು ಲಲಿತೆಯು ಮೇಲಕ್ಕೆ ಮೊಗವೆತ್ತಿ ನೋಡಿದಳು. ಇನ್ನು ಮೇಲೆ ಈ ವಿಲಕ್ಷಣ ಸ್ತ್ರೀಗೆ ಸಲಿಗೆಯನ್ನು ಕೊಡುವುದು ತಕ್ಕು ದಲ್ಲ; ಅವಳಿಗೆ ತಕ್ಕ ಶಾಸನವನ್ನು ಮಾಡಿಬಿಡಬೇಕು; ಎಂಬುದಾಗಿ ಆಲೋಚಿಸಿ ಆಕೆಯ ಮುಖವನ್ನು ನೋಡಬೇಕೆಂದು ಲಲಿತೆಯು ದೃಷ್ಟಿಯನ್ನು ತಿರುಗಿಸುವಷ್ಟರ ಲ್ಲಿಯೇ ಆ ವಿಲಕ್ಷಣಸ್ತ್ರೀಯು ಅಲ್ಲಿ ಕಾಣಲೇ ಇಲ್ಲ ! ! ಎಲ್ಲಿಯೋ ಹೊರಟು ಹೋಗಿ ದ್ದಳು !!! ಆಕಸ್ಮಿಕವಾದ ರೀತಿಯಿಂದ ಅವಳು ಹೇಗೆ ಅಲ್ಲಿ ಬಂದಿದ್ದಳೋ ಅದೇ ರೀತಿಯಿಂದಲೇ ಮಾಯವಾದಳು !!!