ವಾಗ್ಯೂಷಣ, • ೧M+++++++++++++++++++++ ಐದನೆಯ ಪರಿಚ್ಛೇದ. e ಭೈರವಿ. ಲಲಿತೆಯ ಅಚ್ಚರಿಯು ಈಗ ಕಡಿಮೆಯಾಯಿತು. ಪ್ರಿಯಕರನ ದರ್ಶನದಿಂದ ಅವಳ ಹೃದಯವೇನೋ ಉಲ್ಲಸಿತವಾಗಿತ್ತು, ಆದರೆ ತದನಂತರದ ಸಂಘಟನೆಯಿಂದ ಅಂದರೆ ಆ ಅಜ್ಞಾತಳಾದ ವಿಲಕ್ಷಣ ಸ್ತ್ರೀಯ ಸಂದರ್ಶನದಿಂದ ಲಲಿತೆಯ ಹೃದಯವು ವಿಷಣ ವಾಯಿತು. ಆಕೆಗೆ ಯಾವುದೂ ತೋಚದಾಯಿತು ! - ದುರ್ಗದ ಮೇಲೆ ತಾನು ನಿಂತುಕೊಂಡಿದ್ದ ಸ್ಥಳದಿಂದ ಲಲಿತೆಯು ಖಿನ್ನ ಹೃದ ಯದಿಂದ ಕೆಳಗಿಳಿದು ತನ್ನ ಮಂದಿರಕ್ಕೆ ಬಂದಳು. ಇದೇ ಈಗ ಬಂದು ಅದೃಶ್ಯಳಾದ ಆ ವಿಲಕ್ಷಣ ಸ್ತ್ರೀಸಂಬಂಧವಾದ ವಿಚಾರಗಳ ತಾಕಲಾಟವು ಅವಳ ಮನಸ್ಸಿನಲ್ಲಿ ನಡೆ ದಿತ್ತು. ಮಂದಿರದಲ್ಲಿ ಬಂದೊಡನೆಯೇ ಒಬ್ಬ ದಾಸಿಯು ಅವಳಿಗೆ ಭೆಟ್ಟಯಾದಳು. ಇಲ್ಲಿಂದ ಹಾದು ಹೋಗುವಾಗ ಆ ವಿಲಕ್ಷಣ ಸ್ತ್ರೀಯು ಪ್ರಾಯಶಃ ಈ ದಾಸಿಗೆ ಗೋಚ ರವಾಗಿರಬಹುದೆಂದು ತಿಳಿದು ಲಲಿತೆಯು ಅವಳನ್ನು ಕುರಿತು ಪ್ರಶ್ನೆ ಮಾಡಿದಳು. « ಮೋಹನೇ, ದುರ್ಗದ ಮೇಲಿನಿಂದ ಯಾವಳಾದರೂ ಒಬ್ಬ ಹೆಂಗಸು ಕೆಳಗಿಳಿದು ಹೋಗುವುದನ್ನು ನೀನು ನೋಡಿದೆಯಾ? ” ( ಅಮ್ಮನವರೇ, ಯಾವಾಗ ? ” * ಸುಮಾರು ಅರ್ಧ ಗಂಟೆಗೆ ಮೊದಲು. ೨ ( ಇಲ್ಲ; ಅಮ್ಮನವರೇ! ನನಗಂತೂ ಯಾರೂ ಕಾಣಿಸಲಿಲ್ಲ. ” ಮೊಹನೆಯು ಇಲ್ಲವೆಂದು ಹೇಳಿದುದನ್ನು ಕೇಳಿ ಲಲಿತೆಗೆ ಅತ್ಯಂತ ಆಶ್ಚರ್ಯ ವಾಯಿತು. ಆ ಸ್ತ್ರೀಯ ವಿಷಯಕವಾದ ಜಿಜ್ಞಾಸೆಯು ಅತ್ಯಂತವಾಗಿ ಬೆಳೆಯಿತು. ಮಂದಿರದ ಬಳಿಯಲ್ಲಿದ್ದ ಪಹರೆಯವನನ್ನು ಕರೆದು, ಆ ಸ್ತ್ರೀಯ ವಿಷಯವನ್ನು ಕೇಳಿ ದಳು, ಪಾಪ! ಅವನೂ ಆ ಸ್ತ್ರೀಯನ್ನು ನೋಡಿಯೇ ಇರಲಿಲ್ಲ ! ಅಂದಮೇಲೆ ಅವ ನಾದರೂ ಏನು ಹೇಳಬಲ್ಲನು ? ಈಗ ಮಾತ್ರ ಲಲಿತೆಗೆ ಅತಿಶಯವಾದ ಚಿಂತೆಯು ಉತ್ಪನ್ನ ವಾಯಿತು. ರಾಜಕ ನೈಯು ಸ್ವಾಭಾವಿಕವಾಗಿಯೇ ನಿರ್ಭಯಹೃದಯದವಳಾಗಿದ್ದುದೇನೋ ನಿಜ; ಆದರೂ ಈ ಸಂದರ್ಭದಲ್ಲಿ ಅವಳ ಹೃದಯದಲ್ಲಿ ಭೀತಿಯು ಉತ್ಪನ್ನವಾಯಿತು. ಆ ಹೆಂಗಸು ಯಾರು ? ನನಗೂ ಕುಮಾರನಿಗೂ ಪರಸ್ಪರವಾಗಿದ್ದ ಪ್ರೇಮವು ಅವ ಳಿಗೆ ಹೇಗೆ ಗೊತ್ತಾಯಿತು ? ಕುಮಾರನ ಮೇಲೆ ಪ್ರೀತಿಯನ್ನಿಡಬೇಡವೆಂದೂ, ಆತನ ದರ್ಶನಕ್ಕೋಸ್ಕರವಾಗಿ ಸಹ ಪ್ರಯತ್ನ ಮಾಡಬೇಡವೆಂದೂ ಅಧಿಕಾರಯುಕ್ತವಾದ
ಪುಟ:ಪ್ರೇಮ ಮಂದಿರ.djvu/೩೯
ಗೋಚರ