LO* ವಾಗ್ಯೂಷಣ, vywwwwwwwwYw vvvvvvvvvvvvvvvvvvvvv
- ಪಾಪಿಷ್ಟನಾದ ಭೀಮಸಿಂಹನಿಂದ ನಡೆದ ಸಂಗತಿಯೆಲ್ಲವೂ ಅಕಬರನಿಗೆ ವಿದಿತ ವಾಯಿತು. ಅದನ್ನು ಕೇಳಿ ಅಕಬರನು ಸಂತಪ್ತನಾದನು. ಬಳಿಯಲ್ಲಿಯೇ ಆತನ ಶರೀ ರರಕ್ಷಕರಾದ ಮೊಗಲ ಶಿಪಾಯಿಗಳು ನಿಂತುಕೊಂಡಿದ್ದರು. ಅಕಬರಬಾದಶಹನು ಕೂಡಲೇ ಆ ಶಿಪಾಯರಿಗೆ ಅಪ್ರಣೆ ಮಾಡಿದನು. ( ಈ ಚಾಂಡಾಲರೆಲ್ಲರನ್ನೂ ಈಗಿಂದೀ ಗಲೇ ಸೆರೆಹಿಡಿಯಿರಿ. ಯಾವ ಪಾಷಾಣಹೃದಯನು ನನ್ನ ಪ್ರಿಯ ಕರುಣನ ಪ್ರಾಣಾಪ ಹರಣಕ್ಕೆ ಕಾರಣನೋ, ಹೊಟ್ಟೆಯಲ್ಲಿ ಹುಟ್ಟಿದ ಮಗಳ ಸತ್ಯನಾಶವನ್ನು ಮಾಡುವುದಕ್ಕೆ ಕೂಡ ಯಾವ ದುರಾತ್ಮನು ಹೇಸಲಿಲ್ಲವೋ ಅಂತಹ ನರಾಧಮನಿಗೆ ಯೋಗ್ಯವಾದ ಶಿಕ್ಷೆಯಾವುದೆಂಬುದು ಈಗ ನನಗೆ ತಿಳಿಯುವುದಿಲ್ಲ. ಇವರೆಲ್ಲರನ್ನೂ ನನ್ನ ಶಿಬಿರಕ್ಕೆ ಹಿಡಿದುಕೊಂಡು ಹೋಗಿರಿ, ನಾಳಿನ ದಿವಸ ಇವರ ವಿಚಾರಣೆ ಮಾಡುವೆನು. •
ಸೇನಾಪತಿಯಾದ ಅಸಸಖಾನನು ಕೂಡಲೇ ಬಾದಶಹನ ಅಪ್ಪಣೆಯಂತ ಆಚರಿ ಸಿದನು. ಭೀಮಸಿಂಹ ಮೊದಲಾದವರೆಲ್ಲರೂ ಸೆರೆಹಿಡಿಯಲ್ಪಟ್ಟರು. ಬಳಿಕ ದಿಲೀಪ ತಿಯು ಅಸಫಖಾನನಿಗೆ ಹೇಳಿದನು. (( ಅಸಸಖಾನ, ನಿಮಗೆ ಇನ್ನೊಂದು ಕೆಲಸವನ್ನು ಹೇಳುತ್ತೇನೆ. ಹದಿನೈದು ದಿವಸಗಳೊಳಗಾಗಿ ಈ ದುಷ್ಕ ಭೀಮಸಿಂಹನ ದುರ್ಗವನ್ನೆಲ್ಲ ಉಧ್ಯಸ್ತ 'ಮಾರಿ ನೆಲಸಮ ಮಾಡಿಬಿಡಬೇಕು. ದುರ್ಗದೊಳಗಿನ ಬೆಲೆಯುಳ್ಳ ಒಡವೆ ಗಳನ್ನೆಲ್ಲ. ಮಾರಿ ಬಂದ ಹಣದಿಂದ ಇದೇ ಸ್ಥಳದಲ್ಲೊಂದು ಭವ್ಯವಾದ ಮಂದಿರವನ್ನು ಕಟ್ಟುವಂತೆ ವ್ಯವಸ್ಥೆಯಾಗಬೇಕು. ಆ ಮಂದಿರಕ್ಕೆ « ಪ್ರೇಮಮಂದಿರ ”ವೆಂಬ ಹೆಸ ಇಟ್ಟು ಅದರಲ್ಲಿ ರತ್ನಖಚಿತವಾದೊಂದು ಮಂಟಪದಲ್ಲಿ ಸಂಗಮವರೀ ಕಲ್ಲಿಂದ ನಿರ್ಮಿ ತವಾದ ಈ ಪ್ರೇಮಿಯುಗದ ಪ್ರತಿಮಾದ್ವಯವನ್ನು ಸ್ಥಾಪಿಸಬೇಕು. ಇವರಿಬ್ಬರ ವಿಮಲಪ್ರೇಮದ ಸೃತಿಯು ಚಿರಸ್ಥಾಯಿಯಾಗುವಂತೆ ಮಾಡಲು ಬೇರೆ ಉಪಾಯವು ನನಗೆ ತೋಚಲೊಲ್ಲದು. ” ಆ ಸಮಯದಲ್ಲಿ ಸೂರ್ಯನು ಅಸ್ತಾಚಲದ ಕಡೆಗೆ ನಡೆದಿದ್ದನು, ಆಕಾಶದ ನಾಲ್ಕೂ ಕಡೆಗಳಲ್ಲಿಯೂ ಖಿನ್ನತೆಯೂ ಮಲಿನತೆಯೂ ತುಂಬಿಕೊಂಡ್ಡಿದ್ದುವು. ಅದನ್ನು ನೋಡಿದರೆ ಲಲಿತಕರುಣರ ವಿರಹದಿಂದ ಪ್ರಕೃತಿಯು ಶೋಕಾಕುಲವಾಗಿದೆಯೋ ಎಂಬಂತೆ ತೋರುತ್ತಿತ್ತು ! - ಚಂದ್ರಚೂಡನು ಲಲಿತಾಕರಣಸಿಂಹರ ದೇಹಗಳನ್ನು ಶೂನ್ಯದೃಷ್ಟಿಯಿಂದ ನೋಡುತ್ತ ನಿಂತುಕೊಂಡಿದ್ದನು. ಅಕಬರನು ಒಂದು ದೀರ್ಘ ವಿಶ್ವಾಸವನ್ನು ಬಿಟ್ಟು ಚಂದ್ರಚೂಡನನ್ನುದ್ದೇಶಿಸಿ ಮಾತನಾಡಿದನು. ( ಸಾಧುವರ್ಯರೇ ನಡೆಯಿರಿ. ಈ ವಿವಾದ ಪೂರ್ಣವಾದ ದೃಶ್ಯವನ್ನು ಎಷ್ಟು ಹೊತ್ತಿನವರೆಗೆ ನೋಡುತ್ತ ನಿಂತುಕೊಂಡರೂ, ಸ್ವರ್ಗ ಲೋಕದಲ್ಲಿ ಅನಂದದಿಂದ ವಿಹರಿಸುತ್ತಿರುವ ಈ ಪ್ರೇಮಿದ್ವಂದ್ವವು ಹತಭಾಗಿಗಳಾದ ನನಗೆ ಬಂದು ಭೆಟ್ಟಿಯಾಗುವಂತಿಲ್ಲ! ಹಾಯ! ಹಾಯ ! ಕರುಣಸಿಂಹನು ನನಗೆ ಬೆನಿ