ಪುಟ:ಭವತೀ ಕಾತ್ಯಾಯನೀ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



-೧೧-

ಇತರ ಇಂದ್ರಿಯಗಳು ಈ ದೇಹದ ಒಂದೊಂದು ಪ್ರದೇಶದಲ್ಲಿರುವದರಿಂದ, ಇವುಗ ಳೊಳಗೆ ಒಂದೊಂದರ ನಾಶವಾದರೆ ಅಷ್ಟೊಂದು ಹಾನಿಯಾಗುವದಿಲ್ಲ. ಆಯಾ ಇಂದ್ರಿ ಯಗಳಿಂದ ಆಗತಕ್ಕ ವಿಷಯಜ್ಞಾನವು ಮಾತ್ರ ಆಗುವದಿಲ್ಲ . ನೇಂದ್ರಿಯವಿಲ್ಲದಿ ದ್ದರೆ ಅಥವಾ ಶ್ರೋತ್ರೇಂದಿಯವಿಲ್ಲದಿದ್ದರೆ ಆ ದ್ವಾರಗಳಿಂದಾಗುವ ಸತ್ಯಕ್ಕೆ ಹಾನಿಯಾಗಿ, ಮನುಷ್ಯನು ಇಹ-ಪರಗಳೆರಡಕ್ಕೂ ದೂರಾಗುತ್ತಾನೆ . ಇಷ್ಟೊಂದು ಇಂದ್ರಿಯಗಳ ಮಹತ್ವವಿರುತ್ತದೆ. ತೇಜಸ್ಸೆಂಬ ಭೂತದ ಸೂಕ್ಷ್ಮಾಂಶವೆನಿಸುವ ನೇತ್ರಂದ್ರಿಯವು, ಹೊರಗಿನ ಸೂರ್ಯ ಮುಂತಾದ ವಸ್ತುಗಳ ಪ್ರಕಾಶವನ್ನು ಗ್ರಹಿಸಿ ಒಳಗೆ ಒಯ್ಯು ತದೆ. ಈ ಪ್ರಕಾಶವು ಒಳಗೆ ಹೋಗಿ ಅಂತಃಪ್ರಕಾಶದಲ್ಲಿ ಕೂಡಿ ರಕ್ತವಾಹಿನಿಗಳ ಲ್ಲೆಲ್ಲ ಸಂಚರಿಸುತ್ತ, ಅಲ್ಲಿರುವ ಸಣ್ಣ ಸಣ್ಣ ದುಷ್ಟ ಕೃಮಿ-ಕೀಟಾದಿಗಳನ್ನು ನಾಶಗೊ ಳಿಸಿ ಒಂದು ಪ್ರಕಾರದ ಪುಷ್ಟಿಯನ್ನೂ, ಸುಖವನ್ನೂ, ಸಾಮರ್ಥ್ಯವನ್ನೂ ಸಂಪಾದಿಸಿ ಕೊಡುವದಲ್ಲದೆ ಮನುಷ್ಯನನ್ನು ಸತೇಜನನ್ನಾಗಿಯೂ , ಕರ್ತವ್ಯಕ್ಷಮನನ್ನಾಗಿಯೂ ಮಾಡುತ್ತದೆ. ಈ ಹೊರಗಿನಪ್ರಕಾಶವುನಮಗೆ ಸರ್ವಥಾ ತಗಲದಿದ್ದರೆ ನಾವು ಉಳಿ ಯುವ ಸಂಭವವೇ ಇಲ್ಲ. ಕತ್ತಲೆಕೋಣೆಯ ಶಿಕ್ಷೆಯು ಎಷ್ಟು ಕಠಿಣವಾದದ್ದೆಂಬದನ್ನು ನಾವುಬರೆಯುವ ಕಾರಣವಿಲ್ಲ. ಸೂರ್ಯನ ಪ್ರಕಾಶವು ತಾಪಕಾರಕವಾಗಿದ್ದರೂ, ನೇತ್ರ ದ್ವಾರದಿಂದ ಒಳಗೆ ಹೋದರೆ ಸೌಮ್ಯವಾಗುತ್ತದೆ. ಇನ್ನು ಹೊರಗಿನ ಶಬ್ದವು ನಮ್ಮ ಶ್ರವಣೇಂದ್ರಿಯಕ್ಕೆ ಬೀಳದೆ ಹೋದರೆ ನಮಗೆ ವ್ಯವಹಾರಜ್ಞಾನವೇನೂ ಆಗದೆ, ನಾವು ಮೂಕರಾಗಿಹೋಗುತ್ತೇವೆ. ನಾವು ಇದ್ದೂ ಇಲ್ಲದಂತಾಗುತ್ತೇವೆಂಬುವದು ಗೊತ್ತಿದ್ದ ಸಂಗತಿಯಾಗಿರುವದು . ನಮ್ಮ ಘ್ರಾಣೇಂದ್ರಿಯವು ಗಂಧವನ್ನು ಗ್ರಹಿಸದಿದ್ದರೆ ನಮಗೆ ಕೆಟ್ಟದ್ದು, ಕೊಳತದ್ದು, ಹಳಸಿದ್ದು, ಯಾವದೂ ತಿಳಿಯದೆ ಸಿಕ್ಕ ಸಿಕ್ಕ ಪದಾ ರ್ಥಗಳನ್ನು ತಿಂದು ನಮ್ಮ ದೇಹದ ಹಾನಿಯನ್ನು ನಾವೇ ಮಾಡಿಕೊಳ್ಳುವ ಪ್ರಸಂಗವು ಬಂದೀತು. ರಸನೇಂದ್ರಿಯದ ಮಾತೂ ಹಾಗೆಯೇ ಸರಿ. ಇದರಂತೆ ಪಂಚಕರ್ಮೇ೦ ದ್ರಿಯಗಳಲ್ಲಿಯ ಯಾವದೊಂದು ಇಂದ್ರಿಯದ ನಾಶವಾದರೆ, ಆ ಇಂದ್ರಿಯದ ವ್ಯಾಪಾ ರವು ನಿಂತು ಹೋಗಿ ದೇಹಕ್ಕೆ ಅಪಾಯವು ತಟ್ಟುವದು .

೯ ನೇ ಪ್ರಕರಣ - ವಿಷಯಗಳು,

याज्यं सुखं विषयसंगमजन्म पुंसाम् ।

ಅಂದರೆ ವಿಷಯಗಳು ಪ್ರಾಣಿಗಳನ್ನು ಬಂಧಿಸುವ ವಸ್ತುಗಳೆಂದು ಅರ್ಥವಾಗುತ್ತದೆ. ಈ ವಿಷಯಗಳು ಮನಸ್ಸಿನಿಂದೊಡಗೂಡಿದ ಇಂದ್ರಿಯಗಳಿಗೆ ಗೋಚರವಾದರೆ ಸಾಕು, ಪ್ರಾಣಿಗಳನ್ನು ಎಳೆದೇ ಬಿಡುತ್ತವೆ. ಆಗ ಸಹಸಾ ಇವನ್ನು ಉಪಭೋಗಿಸಲೇಬೇಕೆಂಬ ಇಚ್ಛೆಯು ಪ್ರಾಣಿಮಾತ್ರಕ್ಕೆ ಹುಟ್ಟುತ್ತದೆ. ವಿಷಯಗಳಲ್ಲಿ ದೇವರು ಒಂದು ವಿಲಕ್ಷಣವಾದ ಆಕರ್ಷಣಶಕ್ತಿಯನ್ನಿಟ್ಟಿರುವನು. ಇದರಿಂ