ವಿಷಯಕ್ಕೆ ಹೋಗು

ಪುಟ:ಭವತೀ ಕಾತ್ಯಾಯನೀ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
-೧೨-

ದಲೇ ಸಕಲಪ್ರಾಣಿಗಳು ವಿಷಯಕಾರಗಳಲ್ಲಿ ಬಿದ್ದು ಅಲ್ಲಿಯೇ ಹೊರಳಾಡುತ್ತಲಿರುವದು

ಸಕಲರಿಗೂ ದೃಗ್ಗೋಚರವೇ ಇರುವದು. ಎಲ್ಲೆಲ್ಲಿ ನೋಡಿದರೂ ಯಾರನ್ನು ನೋಡಿದರೂ ವಿಷಯೋಪ ಭೋಗದಲ್ಲಿ ತೊಡಗಿದವರೇ ಕಣ್ಣಿಗೆ ಕಾಣುವರಲ್ಲದೆ, ವಿಷಯವರಾಙ್ಮುಖ ರಾದವರ, ತೋರವವೇ ಇಲ್ಲ. ಈ ಸಂಗತಿಯನ್ನರಿತ ವಿದ್ವಜ್ಜನರು “ವೇಧಾ ದ್ವೇಧಾ ಭ್ರಮಂಚಕ್ರೇ ಕಾಂತಾಸು ಕನಕೇ‍ಷ್ಚುಚ|ತಾಸುತೇಷ್ವಪ್ಯನಾಸಕ್ತಃಸಾಕ್ಷಾದ್ಭರ್ಗೋ ನರಾ ಕೃತಿಃ।” ಅಂದರೆ ಸೃಷ್ಟಿಕರ್ತನಾದ ಬ್ರಹ್ಮದೇವನು ಸೃಷ್ಟಿಮಾಡುವಾಗಲೇ ಪುರುಷರ ಉದ್ದೇಶವಾಗಿ ಕಾಂತಾ-ಕನಕ(ಸುವರ್ಣ)ಗಳೆಂಬ ಎರಡು ಸ್ಥಳಗಳಲ್ಲಿ ಮೋಹವನ್ನಿಟ್ಟನು; ಆದರೆ ಅವೆರಡರಲ್ಲಿಯೂ ಆಸಕ್ತಿಯಿಲ್ಲದ ಪುರುಷನು ಮನುಷ್ಯದೇಹವನ್ನು ಧರಿಸಿದ್ದರೂ ಸಾಕ್ಷಾತ್ ಪರಮೇಶ್ವರನೇ ಎಂದು ಹೇಳಬೇಕೆಂದು ಹೇಳಿರುವರು. ಸಾರಾಂಶ, ಜಗತ್ತಿ ನಲ್ಲಿ ವಿಷಯಾಸಕ್ತನಾಗದಿರುವ ಪುರುಷನೇ ದುರ್ಲಭನೆಂಬ ತಾತ್ಪರ್ಯವು.

ಶೈವಸಿದ್ಧಾಂತದವರು "ಪಶು-ಪಾಶ-ಪರಮೇಶ್ವರ'ರೆಂಬ ಈಮೂರೇ ಪದಾರ್ಥಗಳು

ಜಗತ್ತಿನಲ್ಲಿ ಇರುವವು. ಇವುಗಳಹೊರತು ಮತ್ತೊಂದು ಪದಾರ್ಥವೇ ಇಲ್ಲ. ಈ ಮೂರೇ ಪದಾರ್ಥಗಳಿಂದೇ ಜಗತ್ತು ತುಂಬಿರುವದು . ನಮ್ಮನ್ನು ಹಿಡಿದುಕೊಂಡು ದೇವತೆಗಳ ವರೆಗೆ ಇರುವ ಪ್ರಾಣಿಗಳೆಲ್ಲ ಪಶುಗಳೆನಿಸುವವು. ಪಾಶವೆಂದರೆ ಇವರು ಉಪಭೋಗಿ ಸುವ ವಿಷಯಗಳೇ. ಪರಮೇಶ್ವರನೆಂದರೆ ಪಾಶಗಳಲ್ಲಿ ತೊಡಗಿದ ಪಶುಗಳನ್ನುದ್ಧರಿಸುವ ದೇವರು. ಕಣ್ಣಿಯಿಂದ ಕಟ್ಟ ಹಾಕಿದ್ದರಿಂದ ಮಲ-ಮೂತ್ರಗಳನ್ನು ಕಟ್ಟದ ಸ್ಥಳದ ಲ್ಲಿಯೇ ಮಾಡಿಕೊಂಡು, ಹಸಿವಾದರೆ ಅಲ್ಲಿಯೇ ಇದ್ದು ಮೇಯುತ್ತ, ನಿದ್ರೆ ಬಂದರೆ ಅದೇ ಹೊಲಸಿನಲ್ಲಿಯೇ ಮಲಗಿ ನಿದ್ರೆಮಾಡುತ್ತ, ಮೈಯೆಲ್ಲ ಹೊಲಸು ಮಾಡಿಕೊಂಡು, ದುರ್ಗಂಧವನ್ನು ಅನುಭೋಗಿಸುತ್ತ, ಬೇಜಾರಗೊಂಡಿರುವ ದನಗಳನ್ನು ಬೆಳಗಿನ ಝುವ ದಲ್ಲಿ ಪರಮಕಾರುಣಿಕನಾದ ಗೋಪಾಲಕನು ಹೇಗೆ ಕಣ್ಣಿಯನ್ನುಚ್ಚಿಬಿಡುವನೋ, ಹಾಗೆ ಪರಮಕಾರುಣಿಕನಾದ ಪರಮೇಶ್ವರನು, ವಿಷಯಾಸಕ್ತರಾಗಿ ಸಂಸಾರದಲ್ಲಿ ಹೊರ ಳಾಡುತ್ತ ಅನೇಕ ಯಾತನೆಗಳನ್ನು ಅನುಭೋಗಿಸುತ್ತ ಪಾರಗಾಣದೆ ಪ್ರಾಂತ- ಲ್ಲಿವೈರಾಗ್ಯ ಹೊಂದಿತನ್ನನ್ನು ಸ್ಮರಿಸುವ ನಮ್ಮನ್ನು ಸದ್ಗುರುರೂಪವನ್ನು ಧರಿಸಿ ಪ್ರತ್ಯಕ್ಷವಾಗಿ ಬಂದು ವಿವೇಕೋಪದೇಶದಿಂದ ಪಾಶಗಳೆನಿಸುವ ವಿಷಯಗಳಿಂದ ದೂರಮಾಡುವನು. ಆದ್ದರಿಂ ದಲೇ ಪರಮೇಶ್ವರನಿಗೆ("ಪಶುಪತಿ")ಯೆಂಬ ಹೆಸರುಂಟಾಗಿರುವದು. ನಾವೆಲ್ಲ ಪಶುಗಳು, ವಿಷಯಗಳೇ ಪಾಶಗಳು ಅಂದರೆ ಕಣ್ಣಿಗಳು, ನಾವೆಲ್ಲರೂ ವಿಷಯಾಸಕ್ತರಾಗಿರುವದ ರಿಂದ ನಮಗೆ ಪಶು ಎಂಬ ಹೆಸರು ಬಂದಿದೆ. ಈ ಅಭಿಪ್ರಾಯವನ್ನು "ಶಿವಕಲ್ಪವಲ್ಲಿ" ಎಂಬ ಗ್ರಂಥದಲ್ಲಿ “ಶಿಪಿವಿಷ್ಟ” ಎಂಬ ನಾಮದ ಅರ್ಥವನ್ನು ಮಾಡುವಾಗ "ಪಶವಃ ಪರಮಾತ್ಮನಿ ಧೀವಿರಹಾತ್ ದ್ವಿಪದಾಶ್ಚ, ನರಾಶ್ಚ ಸುರಾಃ ಪಶವಃ|ತದನುಗ್ರಹ ಕೃದ್ದ ದಯಂ ಪ್ರವಿಶನ್ ಪ್ರಥಿತೋSಸಿ ವಿಭೋ ಶಿಪಿವಿಷ,ಇತಿ||” ಪರಮಾತ್ಮನ ವಿಷಯವಾದ ಜ್ಞಾನವಿಲ್ಲದ ರಿಂದ ಎರಡು ಕಾಲುಗಳುಳ್ಳ ಮನುಷ್ಯರೂ, ದೇವತೆಗಳೂ ಕೂಡ ಪಶುಗ ಳೆನಿಸುವರು. ನಾಲ್ಕು ಕಾಲುಗಳುಳ್ಳ ದನ-ಕರಗಳಿಗೂ,ಮನುಷ್ಯರಿಗೂ,ದೇವತೆಗಳಿಗೂ