ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯೋಗೀಶ್ವರ ಯಾಜ್ಞವಲ್ಕರು, 24 ra ರು ವಿ! ಚಿತ್ರವಿಟ್ಟು ಕೇಳು; ಹೇಳುವೆನು. ಚನ್ನಾಗಿ ಕೇಳಿಕೊ೦ಡ ಬಳಿಕ ಅದನ್ನೆ ಚಿ೦ತಿಸೆ೦ದು ಇನ್ಯಾಸ ಮಾಡಿ ತನ್ನ ಬೋಧನೆಗೆ ಮೊದಲು ಮಾಡಿದರು. ಗಂಡನು ಹೆಂಡತಿಗಾಗಿ ಹೆಂಡತಿಯನ್ನು ಪ್ರೀತಿ ಸುವದಿಲ್ಲ; ಆದರೆ ಆತ್ಮನಿಗಾಗಿ; ಹೆಂಡತಿಯು ಗಂಡನಿಗಾಗಿ ಗಂಡನನ್ನು ಪ್ರೀತಿಸುವದಿಲ್ಲ; ಆದರೆ ಆ ಗಂಡನಲ್ಲಿರುವ ಆತ್ಮನಿಗಾಗಿ; ಹೀಗೆ, ಹೆಂಡ ತಿಯಲ್ಲಿಯ, ಗಂಡನಲ್ಲಿಯ, ದುಡ್ಡಿನಲ್ಲಿ ನಮ್ಮ ಕಣ್ಣಿಗೆ ಕಾಣದೆ ಸುವ ಪ್ರತಿಯೊಂದು ದೃಶ್ಯ ವಸ್ತುಗಳಲ್ಲಿಯೂ ಕುಳಿತಿರುವ ಆ ಪರಮಾ ತ್ಮನಿಗಾಗಿ ನಾವು ಎಲ್ಲವನ್ನು ಪ್ರೀತಿಸುತ್ತೇವೆ. ಆ ಪರಮಾತ್ಮನು ಒಬ್ಬನೇ ಇದ್ದರೂ, ತನ್ನ ಲೀಲೆಗಾಗಿ ನಾನಾ ಬಗೆಯ ರೂಪಗಳನ್ನು ತೊಟ್ಟು ಆಡುತ್ತಿರುವನು. ಆದುದರಿಂದ ಎಲ್ಲ ವಸ್ತುಜಾ ತಗಳಲ್ಲಿ ಅವ ನನ್ನೇ ನೋಡು; ಅವನನ್ನೆ ಚಿ೦ತಿಸು; ಅವನ ನಿದಿಧ್ಯಾಸದಲ್ಲಿಯೇ ಇರು.” ಎಂದು ನುಡಿದರು.