________________
ಭಾರತೀಯರ ವೈಶಿಪ್ಪವು.' ೧೫೬ ರಾಯ ವಿಶೇಷ ವ. ಭಾರತೀಯ ಕಾಲದ ಜನರಲ್ಲಿ ಅತಿಥಿ ಪೂಜೆಯ ಮಹ ತ್ವವು ಎಷ್ಟು ಮನದಟ್ಟಾಗಿ ನೆಟ್ಟಿತೆಂಬುದಕ್ಕೆ ಭಾರತದೊಳಗೆ ಮಿಂಚು ತಿರುವ ಮುoಗಲಿಯ ಕಥೆಯೂ, ಕಪೋ ತಪ ಯ ಕಥೆಯ ಉಜ್ವಲ ಆದರ್ಶ ಭೂತಗಳಾಗಿವೆ; (ಒಟ್ಟಿನಮೇಲೆ ಭಾರತೀಯ ಧರ್ಮದ ರಹಸ್ಯ ವನ್ನು ಒಂದೇ ಮಾತಿನಲ್ಲಿ ಹೇಳಿ ಮುಗಿಸಬೇಕೆಂದರೆ, ಪ್ರಾಣವನ್ನು ಎತ್ತಿ ಕೊಟ್ಟಾದರೂ ಧರ್ಮವನ್ನು ಕಾಪಾಡಲಿಕ್ಕೆ ಬೇಕು. ನಾವು ಧರ್ಮ ವನ್ನು ಕಾಯ್ದರೆ, ಧರ್ಮವೂ ನಮ್ಮನ್ನು ಕಾಪಾಡಲಿಕ್ಕೆ ಕೈ ಕಟ್ಟಿ ಕೊಂಡು ನಿಂತಿರುತ್ತದೆ; ಆದುದರಿಂದ ಮನುಷ್ಯನಿಗೆ ಧರ್ಮವೇ ಗತಿ. ; ಭಾರತೀಯರ ವೈಶಿಷ್ಟ್ಯವು:- ಪ್ರಪ೦ಚದೊಳಗಿನ ಮಿಕ್ಕ ಜನಾ೦ಗದವರಿಗಿ೦ತ ಭಾರತೀಯರಲ್ಲಿ ವಿಶೇಷ ಮಹತ್ವವೇನಾದರೂ ಇದ್ದುದೇ ಆದರೆ, ತತ್ವಜ್ಞಾನವೊಂದೇ, ತತ್ವಜ್ಞಾನದಿಂದಲೇ ಭಾರತೀ ಯ ರ ಭಾರತೀಯ ತೈವು ಬಲವಾಗಿ ಬೆಳಗುತ್ತಿದೆ. ಈ ತತ್ವಜ್ಞಾನವೇ ವೇದಾಂತವೆಂಬ ಬೇರೆ ಹೆಸರಿನಿಂದ ಪ್ರಸಿದ್ಧವಿದೆ. ಗಹನವಾದ ಈ ವೇದಾ೦ತಜ್ಞಾನವನ್ನು ಮಹಾಭಾರತ ಕಾರರು ಎಲ್ಲರಿಗೂ ತಿಳಿಯುವಂತೆ ಸುಲಭವಾದ ವ್ಯವಹಾರದೊಳಗಿನ ಕಥೆಗಳನ್ನು ಹೇಳಿ ಸ್ಪಷ್ಟ ಗೊಳಿ ಸಿದ್ದಾರೆ. ತತ್ವಜ್ಞಾನದಿಂದೊಡಗೂಡಿ ವೇದಾಂತವನ್ನು ತಿಳಿಸುವಂಥ ಅನೇಕ ಮನೋರಂಜಕವಾದ ಕಥೆಗಳು ಭಾರತದಲ್ಲುಂಟು; ಆದರೂ ತಿಳಿದವರಿಗೆ ತಿಳಿವಿನ ಹುಚ್ಚು ಹಿಡಿಸುವಂಧ, ತತ್ವಜ್ಞಾನ ಪ್ರಧಾನವಾ ದಂಥ ಭಾರತದೊಳಗಿರುವ ಗ್ರ೦ಧವೆಂದರೆ ಶ್ರೀ ಭಗವದ್ಗೀತೆಯೇ ಸರಿ. ಅರ್ಯ ತತ್ವಜ್ಞಾನಪ್ರಧಾನಗಳಾದ ಗ್ರಂಥಗಳಲ್ಲಿ ಭಗವದ್ಗೀತೆಯು ಕಿರೀಟಪ್ರಾಯವಾಗಿದೆ. ಈ ತತ್ವಜ್ಞಾನಕ್ಕೆ ಪಂಚೇಂದ್ರಿಯಗಳು ಹಾಗೂ ಪಂಚಮ ಹಾ ಭೂತಗಳು ಇವೇ ಮೂಲಾಕ್ಷರಗಳು. ನೀರಿನ ಮೇಲಣ ಗುಳ್ಳೆಯಂತೆ, ಈ ಪಂಚಮ ಹಾ ಭೂತಾತ್ಮಕವಾದ ದೇಹವು ಕ್ಷಣಿಕ ವಿದ್ದು, ಅದರಲ್ಲಿಯ ಆತ್ಮನು ಇವೆಲ್ಲವುಗಳಿಂದ ಬೇರೆಯಾಗಿಯೂ, ಅವಿಕಾರಿಯಾಗಿಯೂ ಇರುತ್ತಾನೆಂದು ಆರ್ಯರ ತತ್ವಜ್ಞಾನದ ಸಿದ್ಧಾಂ ತವು. ಈ ಆತ್ಮನು ಸೃಷ್ಟಿಯ ಒಳ ಹೊರಗೆ ಹಾಸು ಹೊಕ್ಕಾಗಿ ವ್ಯಾಪಿಸಿ ಕೊ೦ಡಿರುವನೆಂದೂ, ಆತನ ಜ್ಞಾನವನ್ನು ಪಡೆದು ಪ್ರತಿಯೊಬ್ಬನು ಆತನ