ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೦೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಮ ಹ ಂದು ಪ್ರಚಂಡವಾದ ಕರೆಯು, ೧೭೫ ಯನ್ನಾಗಲಿ, ಮಾರ್ಪಡಿಸುವ೦ಧ ಕಾರ್ಯಗಳೆನೂ ಆಗಲಿಲ್ಲ. ಆರ್ಯ ಸಂಸ್ಕೃತಿ ವಿಕಾಸವಾಗುವ ಕಾರ್ಯಗಳೆನೂ ಈ ಕಾಲದಲ್ಲಿ ಒದಗ ದಿದ್ದರೂ, ಸಂಸ್ಕೃತವಿದ್ಯೆ ಪಾ೦ಡಿತ್ಯ, ಹಾಗೂ ಬ್ರಾಹ್ಮಣರ ವಿಚಾರ ಓಘಗಳು ಅಪ್ರತಿಹತವಾಗಿ ನಾ ಗಿದ್ದವು; ಎಲ್ಲಿ ನೋಡಿದರೂ, ಔಪ ನಿಷದ ವಿಚಾರಗಳೇ ಹಬ್ಬಿ ಹರಡಿಕೊಂಡು ಜನತೆಯ ಮನಸ್ಸಿನಲ್ಲಿ ಒಂದು ಬಗೆಯ ಬೌದ್ಧಿಕ- ಕ್ರಾಂತಿಯನ್ನು ಮಾಡ ತೊಡಗಿದ್ದರಿಂದ, ಈ ಕಾಲದ ಬೌದ್ಧಿಕ ಇತಿಹಾಸವೇ ಬಹು ಮಟ್ಟಿಗೆ ಸಿಗುತ್ತದೆಯೇ ಹೂ ರ್ತು ರಾಜಕೀಯ ಇತಿಹಾಸ-ಪೋಷಕವಾದ ಹೆಜ್ಜೆ ಗಳು ಸ್ಪಷ್ಟ ವಾಗಿ ಮೂಡಿರುವದಿಲ್ಲ. ಈ ಕಾಲದ ಚರಿತ್ರೆಯು ಜನಾ೦ಗಗಳೊಳಗೆ ನಡೆದ ಯುದ್ಧಗಳ ನೆತ್ತರದಿಂದ ಕೆ೦ಪು ಒಡೆಯದೆ, ಬುದ್ಧಿಯ ಬೆಳಿಗೆ ಯನ್ನು ತೊ (ರ್ಪಡಿಸುವಂಧ ಹೊಸ ಹೊಸ ಧಾರ್ಮಿಕ ವಿಚಾರ ಗಳಿ೦ದಲೂ, ನವೀನವಾದ ಸಂಪ್ರದಾಯಗಳಿಂದಲೂ, ಕಲಾ ಕೌಶಲ್ಯದ ಬೆಳುವಳಿಗೆಯ ಕ೦ಪಿನಿಂದಲೂ ಮನೋರಂಜಕವಾದ ಚಟುವಟಿಕೆ ಗಳಿ೦ದಲೂ ಪೆಂಪು ಒಡೆದಿದೆ. ಮತ್ತೊಂದು ಪ್ರಚಂಡವಾದ ತೆರೆಯು:- ಭಾರತೀಯುದ್ಧ ದಿ೦ದ ಬಹು ಕಾಲ ಜನಾ೦ಗದ ಸ್ಥಿತಿಯು ಕಕ್ಕಾಬಿಕ್ಕಿಯಾಗಿ ಹೈ ? ಇ೦ಧ ಸಮಾಜವನ್ನು ಒ೦ದೊ೦ದು ಬೇರೆ ಬೇರೆ ವಿಚಾರಗಳಿಂದ ಧರ್ಮದಲ್ಲಿ ಪ್ರವರ್ತಿಸುವ೦ಥದೊ೦ದು ಪ್ರಚ೦ಡ ಸ೦ಘಟನ ಕಾರ್ಯವು ಈ ಕಾಲದೊಳಗೆ ನಡೆಯಿತು. ಅದೇ ತಾನೇ ಮ ಹಾಭಾರತ ವೀರ ನಾದ ಭಗವಾನ್ ಶ್ರೀಕೃಷ್ಣನು ತನ್ನ ಅವತಾರ ಸಮಾಪ್ತಿ ಮಾಡಿ, ಜಗ. ತಿನ ರಂಗಸ್ಥಳದಿಂದ ಮಾಯವಾಗಿದ್ದನು; ಹಿಂದೂ ಧರ್ಮದೊಳಗೆ ಜ್ಞಾನಮಾರ್ಗ, ಭಕ್ತಿ ಮಾರ್ಗ ಅವೆರಡರಲ್ಲಿ ವಾದ ನಡೆದಿತ್ತು; ಇದು ವರೆಗೆ ಹಿಂದೂ ಧರ್ಮದೊಳಗೆ ಶ್ರೀಕೃಷ್ಣನಂಧ ಅವತಾರಿಕ ಪುರುಷ ರನ್ನು ಉಪಾಸ್ಯ- ದೇವತೆಯೆ೦ದಿಟ್ಟು ಕೊಂಡು ನಡೆಯುವ ಮತಗಳಾವೂ ಇರಲಿಲ್ಲ. ಜನರಲ್ಲಿ ಭಕ್ತಿಯಿತ್ತು; ಜ್ಞಾನವಿತ್ತು; ಆದರೂ ಒಬ್ಬ ವಿಭೂತಿಪುರುಷನನ್ನು ಆರಾಧ್ಯ ದೇವತೆಯನ್ನಾಗಿಟ್ಟು ಕೊಂಡಿರುವ ಸಂಪ್ರ ರಾಯ ಭೇದಗಳು ಇರಲಿಲ್ಲ; ಉಪನಿಷತ್ಕಾಲವು ಜ್ಞಾನಯುಗವು;