ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೪೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೧೪.
ಭಾರತೀಯರ ಇತಿಹಾಸವು.

ನಾಡಿನಿಂದಲೂ ಬಂದವರಲ್ಲ; ಅವರು ಇಲ್ಲಿಯವರೇ! ಅವರು ಉಸಿರಾಡಿಸುವ ವಾಸಿಸುವ, ಹಾಗೂ ಓಡಾಡುವ ನಾಡು "ಏಳು ಹೊಳೆಗಳ ನಾಡೇ” ಆಗಿರುತ್ತದೆಂದು ಶ್ರೀ. ದಾಸರು ಹೇಳಿದ ಸಿದ್ಧಾಂತವನ್ನು ನಾವು ಒಪ್ಪಿಕೊಂಡರೆ ನಮ್ಮ ಪರಂಪರಾಗತವಾದ ಗೌರವಕ್ಕೆ ಕಳೆ ಕಟ್ಟುತ್ತದೆ; ಮತ್ತೆ ಇದಕ್ಕೆ ಋಗ್ವೇದಾದಿಗಳಲ್ಲಿ ಬಲವಾದ ಆಧಾರಗಳೂ ಉಂಟು. ಅರ್ವಾಚೀನ ಇತಿಹಾಸಕಾರರಾದ ಶ್ರೀ. ದಾಸರು, ದುರ್ಗಮವಾದ ವೇದಗ್ರಂಥಗಳಲ್ಲಿ ಒಳಹೊಕ್ಕು, ಪ್ರಾಚೀನ ಚರಿತ್ರೆಯನ್ನು ಪರಿಶೋಧಿಸಿ, ಖಗೋದಕಾಲಕ್ಕೆ ಸಪ್ತಸಿ೦ಧುವಿನ ದೇಶಕ್ಕೂ ದಕ್ಷಿಣದೇಶಕ್ಕೂ ನಡುವೆ ರಜ ಪೂತಾನದ ಸಮುದ್ರವಿದ್ದುದರಿಂದ ಯಾವ ಬಗೆಯ ಹೊಕ್ಕಾ ಬಳಕೆಯ ಸಂಬಂಧವಿರಲಿಲ್ಲೆಂದೂ, ಸಪ್ತ ಸಿ೦ಧು ಪ್ರದೇಶದ ಸೀಮೆಯು ಉತ್ತರಕ್ಕೆ ಈಗಣ ಕಂದಹಾರ, ಪೂರ್ವ ತುರ್ಕಸ್ಥಾನ, ಹಾಗೂ ಬ್ಯಾಕ್ಟ್ರಿಯದ ವರೆಗೆ ಹಬ್ಬಿತ್ತೆಂದೂ ಸಿದ್ಧಗೊಳಿಸಿದ್ದಾರೆ; ಆದರೆ ಮುಂದೆ ಕಾಲಾಂತರದಿಂದ ಸೃಷ್ಟಿಯೊಳಗೆ ಉತ್ಪಾತ ವಿಪ್ಲವಗಳು ನಡೆದುದರಿ೦ದ ರಜಪುತಸ್ಥಾನದ ಸಮುದ್ರವು ಒಣಗಿ ಹೋಗಿ ಕೆಲವು ದಿವಸಗಳಾದ ನಂತರ, ಈ ಸ೦ಬ೦ಧವು ದಕ್ಷಿಣದವರೊಡನೆ ಬೆಳೆತೆ೦ದೂ ಸಿದ್ಧಗೊಳಿಸಿದ್ದಾರೆ.

ಆರ್ಯರ ತಿರುಗುವ ಸ್ಥಿತಿ:- ಸೃಷ್ಟಿಯ ಆರಂಭಕ್ಕೆ ಮನುಷ್ಯನು ಒಂದೆಡೆಯಲ್ಲಿ ನೆಲೆಯಾಗಿ ನಿಲ್ಲದೆ, ಅಲ್ಲಲ್ಲಿ ಗಡ್ಡೆ-ಗೆಣಸುಗಳನ್ನು ತಿ೦ದುಕೊ೦ಡು ವರಗಳ ಹೊದರಿನಲ್ಲಾಗಲಿ, ಗಿರಿಗವರದಲ್ಲಾಗಲಿ ವಾಸಿಸುತ್ತಿದ್ದನು; ಆದರೆ, ಕ್ರಮವಾಗಿ ಅವನ ಮನೊವಿಕಾಸವಾದಂತೆಲ್ಲ ಅವನು ಬೇಟೆಯಾಡಿ ಬೇಟೆಯಿಂದ ದೊರೆತ ಪ್ರಾಣಿಯ ಮಾಂಸದಿಂದಲೇ ತನ್ನ ಹಸಿವನ್ನು ಹಿಂಗಿಸಿಕೊಳ್ಳುತ್ತಿದ್ದನು; ಮು೦ದೆ ಈ ಸ್ಥಿತಿಯ ಮಾರ್ಪಟ್ಟು ಮನುಷ್ಯನು ಕುರುಬರ ವೃತ್ತಿಯಿಂದ ಕುರಿಗಳ ಸಹವಾಸದೊಳಗೇ ಅಲ್ಲಲ್ಲಿ ಗುಂಪು ಗಟ್ಟಿಕೊಂಡು ತಿರುಗಲಾರಂಭಿಸಿದನು; ಈ ಕುರುಬ ವೃತ್ತಿಯಲ್ಲಿ ಮನುಷ್ಯನು ತನ್ನ ಕುರಿಯ ಹಿ೦ಡಿಗೆ ಮೇವು ಮಿಡಚಿಯ, ತನಗೆ ಆಹಾರ ಸಾಮಗ್ರಿಯ ವಿಪುಲವಾಗಿ ಸಿಗುತ್ತಿರುವಲ್ಲಿಯೇ ತಳವೂರುತ್ತಿದ್ದನು. ತನಗೂ ತನ್ನ ಕುರಿಗಳಿಗೂ