ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೪೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೧೫
ಆರ್ಯರು ಒಕ್ಕಲತನಕ್ಕೆ ಮೊದಲು ಮಾಡಿದುದು.

ಅನ್ನವಿಲ್ಲದಂತಾಯಿತೆಂದರೆ ಆ ಸ್ಥಳದಿಂದ ಬೇರೆ ಸ್ಥಳಕ್ಕೆ ಹೋಗುತ್ತಿದ್ದನು. ಈ ಮರೆಗೆ, ಈ ದಿನ ಈ ಊರು, ನಾಳೆ ಆ ಊರು ನಾಡಿದ್ದು ಒಂದು ಹಳ್ಳಿ, ಆಚೆಯ ನಾಡಿದ್ದು ಮತ್ತೊಂದು ಹಳ್ಳಿ ಹೀಗೆ ಅಡ್ಡಾಡುತ್ತಿರುವದೇ ಅವನ ಹೊರೆಯಾಗಿತ್ತು; ಒಂದೊಂದು ಸಲ ಅವನಿಗೆ ಶಾಕಾಹಾರವು ಸಿಗದಿದ್ದರೆ, ಮಾತ್ರ ಅವನು ಈಟೆ ಬರ್ಚಿಗಳಿಂದ ಬೇಟೆಯಾಡಿ, ಮಾಂಸಾದಿಗಳನ್ನು ಸೇವಿಸುತ್ತಿದ್ದನು; ಮತ್ತು ಮನುಷ್ಯನ ಪೂರ್ವಾವಸ್ಥೆಯಲ್ಲಿ ಹೀಗಿರುವದರ ಹೊರ್ತು ನಡೆಯುವದಿಲ್ಲ. ಆಗ್ಗೆ ಕೈಗೆ ಶಿಕುದ್ದನ್ನು ಮನಸು ಬಂದಲ್ಲಿಯೇ ಯಾವ ತರದ ವಿಧಿನಿಷೇಧಗಳ ಕಟ್ಟಿಲ್ಲದೆ ತಿನ್ನುತ್ತಿರುತ್ತಾನೆ. ಹೀಗಾಗಿ ಅವನ ನಾಲಿಗೆಯು ಆತನ ಪ್ರಕೃತಿ ಗುಣಗಳಗನುಸಾರವಾಗಿ ಯಾವುದೊ೦ದು ಆಹಾರಕ್ಕೆ ಮನ ಸೋತರಾಂತು ಆ ಪದಾರ್ಥವಿಲ್ಲದೆ ಅವನ ಕೆಲಸವೇ ನಾಗುವದಿಲ್ಲ; ಈಗಣ ಪ್ರಸ೦ಗದೊಳಗೆ ಮನುಷ್ಯನು ತನಗೆ ಇಷ್ಟವಿರುವ ವಸ್ತುಗಳನ್ನು "ಈ ಹೊತ್ತು ಬೇಕು, ನಾಳೆ ಬೇಕು” ಎಂದು ಮುಂದಾಲೋಚನೆಯಿ೦ದ ಶೇಖರಿಸಿಡಲಿಕ್ಕೆ ಮೊದಲು ಮಾಡುತ್ತಾನೆ. ಈ ಪ್ರಕಾರವಾಗಿ ಮನುಷ್ಯನಲ್ಲಿ ಹೊಸ ಹೊಸ ಬಯಕೆಗಳು ಮೂಡಿದ ಹಾಗೆಲ್ಲ ಅವನು ನಾನಾ ಬಗೆಯ ಸುಲಭವಾದ ಹಾಗೂ ಇಷ್ಟಾ ಪೂರ್ತಿಯ ಉಪಾಯಗಳನ್ನು ಕಂಡು ಹಿಡಿಯಲಿಕ್ಕೆ ಪ್ರಯತ್ನಿಸುತ್ತಾನೆ. ಇದು ಮನುಷ್ಯನ ನೈಸರ್ಗಿಕ ಸ್ವಭಾವವು; ಮತ್ತು ಮನುಷ್ಯನ ಮನಃ ಪ್ರವೃತ್ತಿಯು ಮಾರ್ಪಡುವ ವಿಷಯದಲ್ಲಿ ನಮಗೆ ಅಡಿಗಡಿಗೆ ಇದರ ಅನುಭವವು ಒಡೆದು ಕಾಣುತ್ತಿದೆ.

ಆರ್ಯರು ಒಕ್ಕಲತನಕ್ಕೆ ಮೊದಲುಮಾಡಿದುದು:-
ಗೋಪಾಲ ವೃತ್ತಿಯಿಂದ ಅಲ್ಲಲ್ಲಿ ಅಲೆದಾಡಿಕೊಂಡಿರುವ ಸ್ಥಿತಿಯ ಬೇಟೆಯಾಡುವದೂ ಆರ್ಯರಿಗೆ ತಲೆ ಬೇಸರಾಗಿ ಅವರ ಮನಸ್ಸು ವಿಕಾಸವಾಗಲಿಕ್ಕೆ ಈಗ ಮತ್ತೆ ಪ್ರಾರಂಭವಾಯಿತು; ಆದುದರಿಂದ ಈ ವೃತ್ತಿಯನ್ನು ತೊರೆದರೆ ಮತ್ತಾವುದೊಂದು ಕಸಬಿನಿಂದ ತಮ್ಮ ಜೀವನಕ್ಕೆ ಅನುವಾಗುವುದೇನೋ ಎಂದು ಯೋಚಿಸಿಕೊಂಡು ಕೆಲದಿನ ಕೆಲವರು ಆ ದೃಷ್ಟಿಯಿಂದ ಪ್ರಯತ್ನಿಸಿದರು; ಮು೦ದೆ ಸರಿ ಕ೦ಡ೦ತೆಲ್ಲ