ಆದ್ದರಿಂದ ಇಂದಿನ ಜೀವನದಲ್ಲಿ ಸಮರಸತೆಯನ್ನು ಕಾಣಲು ಸಾಧ್ಯವಾಗಬೇಕಾದರೆ ಪ್ರಪಂಚದಲ್ಲೆಲ್ಲ ಒಂದು ಬಗೆಯ ಸಾಮಾಜಿಕ ಸಮರಸತೆಯ ಬೆಂಬಲವಿರಬೇಕು.
ಇತರ ದೇಶಗಳಿಗಿಂತ ಭಾರತದಲ್ಲಿ ಸಮಾಜರಚನೆಯಲ್ಲಿ ಸನಾತನ ಭಾವನೆಯ ಮತ್ತು ಅದಕ್ಕೆ ತಳಹದಿಯಾದ ಜೀವನದರ್ಶನವೂ ಈಗಲೂ ಸ್ವಲ್ಪ ಮಟ್ಟಿಗೆ ಜೀವಂತ ಇವೆ. ಸಮಾಜಕ್ಕೊಂದು ಭದ್ರತೆ ಕೊಟ್ಟು ಜೀವನ ರೀತಿಗನುಗುಣವಾಗಿದ್ದ ಯಾವುದೋ ಒಂದು ವಿಶೇಷ ಸದ್ದು ಣವು ಇರದಿ ದ್ದರೆ ಅದು ಸಾಧ್ಯವಾಗುತ್ತಿರಲಿಲ್ಲ, ಸಮಾಜರಚನೆಯಲ್ಲಿನ ದುರ್ಗುಣವು ಸದ್ಗುಣವನ್ನು ನಾಶಮಾಡ ದಿದ್ದರೆ ಅಂತ್ಯದಲ್ಲಿ ಖಿಲವಾಗುತ್ತಿರಲಿಲ್ಲ ಮತ್ತು ಆ ರಚನೆಯು ಜೀವನದಿಂದ ದೂರವಾದ ಒಂದು ಹೊಗೆಯಾಗಿ ಜೀವನ ವಿಕಾಸಕ್ಕೆ ಆತಂಕವಾಗುತ್ತಿರಲಿಲ್ಲ. ಏನೇ ಆಗಲಿ ಈಗ ಅವುಗಳನ್ನು ಪ್ರತ್ಯೇಕ ಘಟನೆಗಳೆಂದು ಕಾಣಲು ಸಾಧ್ಯವಿಲ್ಲ. ವಿಶ್ವದ ಪರಿಸ್ಥಿತಿಯೊಡನೆ ತುಲನಮಾಡಿ ವಿಶ್ವದೊಂದಿಗೆ ಸಮ ರಸವಾಗಿರುವಂತೆ ಮಾಡಬೇಕಾಗಿದೆ.
"ಭಾರತದಲ್ಲಿ ಧರ್ಮವು ಕೇವಲ ಒಂದು ಸಿದ್ಧಾಂತವಲ್ಲ. ವಿವಿಧ ಧಾರ್ಮಿಕ ಬೆಳವಣಿಗೆಯ ಮಟ್ಟದ ಮತ್ತು ವಿವಿಧ ಜೀವನ ಮಟ್ಟದ ದಿನಚರ್ಯೆಗೆ ಒಂದು ಕಾರ್ಯಕ್ರಮದ ವೇಳಾ ಪತ್ರಿಕೆ. ಧರ್ಮವು ಜೀವನದಿಂದ ದೂರವಿರುವ ಒಂದು ಸಿದ್ದಾಂತವೆಂದು ನಂಬಿರುವುದು ಒಂದು ಬಗೆ. ಆದರೆ ಮಾನವನ ನಡತೆಗೆ ನಿರ್ಣಿತವಾದ ಕಾರ್ಯವಿಧಾನ ಎನ್ನುವುದಾದರೆ ಜೀವನಕ್ಕನುಗುಣವಾಗಿದ್ದು ಜೀವನವನ್ನು ಪೋಷಿಸಬೇಕು. ಇಲ್ಲವಾದರೆ ಜೀವನವನ್ನು ಸಂಕುಚಿತಗೊಳಿಸುತ್ತದೆ. ಈ ಕಾರ ವಿಧಾನದ ಮೂಲ ಉದ್ದೇಶವು ಅದರ ಕಾಯಶಕ್ತತೆ, ಜೀವನಾನುಸರಣೆಯ ಪರಿಸ್ಥಿತಿಗನುಗುಣವಾದ ಪರಿವರ್ತನ ಶಕ್ತಿಯು ಎಲ್ಲಿಯವರೆಗೆ ಇದ್ದು ಸಾಧ್ಯವೋ ಅಲ್ಲಿಯವರೆಗೆ ಅದರ ಉಪಯೋಗ ; ಮತ್ತು ಅದು ತನ್ನ ನಿಯಮಿತ ಕರ್ತವ್ಯ ಪಾಲನೆಯನ್ನೂ ಮಾಡುತ್ತದೆ. ಜೀವನ ಪಥವನ್ನು ಬಿಟ್ಟು ಅಡ್ಡ ದಾರಿ ಹಿಡಿದೊಡನೆ ಸಾಮಾಜಿಕ ಅವಶ್ಯಕತೆಗಳಿಂದ ದೂರವಾಗುತ್ತದೆ ; ಜೀವನಕ್ಕೂ ಅದಕ್ಕೂ ಮಧ್ಯೆ ಅಂತರವು ಹೆಚ್ಚುತ್ತದೆ ; ಅದರ ಅಂತಸ್ಸತ್ವವೂ ಮತ್ತು ಪ್ರಾಮುಖ್ಯತೆಯೂ ಮಾಯವಾಗುತ್ತದೆ.
ತಾತ್ವಿಕ ಸಿದ್ಧಾಂತಗಳ ಮತ್ತು ಕಲ್ಪನೆಗಳ ವಿಚಾರ ಸರಣಿಯಲ್ಲಿ ನಿತ್ಯ ಪರಿವರ್ತನವಾಗುತ್ತಿರುವ ಜೀವನದ ತಿರುಳಿಗೆ ಎಡೆಯಿಲ್ಲ; ಆದರೆ ಅದರ ಹಿಂದೆ ಇರುವ ಅ೦ಥದು ಇದ್ದರೆ ಶಾಶ್ವತ ಸತ್ಯಕ್ಕೆ, ಆದ್ದರಿಂದ ತಾತ್ವಿಕ ಸಿದ್ದಾಂತಗಳಲ್ಲಿ ಕಲ್ಪನೆಗಳಲ್ಲಿ ಬಾಹ್ಯ ಪರಿವರ್ತನಗಳಿಂದ ವ್ಯತ್ಯಸ್ತವಾಗದ ಒಂದು ಸತ್ಯತೆ ಇದೆ. ಆದರೆ ಅವುಗಳ ವಿಕಾಸವು ಅವುಗಳ ಸನ್ನಿವೇಶದ ಫಲ, ಮತ್ತು ಅದು ಯಾವ ಮನಸ್ಸಿನ ಆ ಕಲ್ಪನೆಯೋ ಆ ಮನಸ್ಸಿನ ವಿಕಸನಮಟ್ಟದ ಫಲ, ಅದರ ಪ್ರತಿಭೆ ಬೀರದಂತೆ ಜನ ಸಾಮಾನ್ಯದ ಜೀವನದರ್ಶನವೂ ಪರಿವರ್ತನವಾಗುತ್ತದೆ. ಭಾರತದಲ್ಲಿ ತತ್ವಶಾಸ್ತ್ರವು ಅಲ್ಪಸಂಖ್ಯೆಯ ಮಹಾ ಜ್ಞಾನಿಗಳ ಸ್ವತ್ತಾದರೂ, ಇತರ ದೇಶಗಳಿಗಿಂತ ಹೆಚ್ಚು ಪ್ರಭಾವಕಾರಿಯಾಗಿದೆ. ರಾಷ್ಟ್ರ ದೃಷ್ಟಿಯನ್ನು ರೂಪುಗೊಳಿಸುವುದರಲ್ಲಿ ಮತ್ತು ಮನಸ್ಸಿಗೊಂದು ವಿಶಿಷ್ಟ ಭಾವನಾ ನಿಲುವನ್ನು ಕೊಡು ವುದರಲ್ಲಿ ಬಹಳ ಪರಿಣಾಮಕಾರಿಯಾಗಿದೆ.
ಈ ಕಾರ್ಯದಲ್ಲಿ ಬೌದ್ಧ ದರ್ಶನವು ಬಹಳ ಪ್ರಮುಖಪಾತ್ರವನ್ನು ವಹಿಸಿತು, ಮತ್ತು ಮಧ್ಯ ಯುಗದಲ್ಲಿ ಇಸ್ಲಾಂ ಧರ್ಮವು ಹಿಂದೂ ಧರ್ಮದ ಮತ್ತು ಇಸ್ಲಾಂ ಧರ್ಮದ ಸಾಮಾಜಿಕ ಮತ್ತು ಧಾರ್ಮಿಕ ಬುನಾದಿಯನ್ನು ಒಂದುಗೂಡಿಸುವ ಪ್ರಯತ್ನದ ಫಲವಾಗಿ ಹುಟ್ಟಿದ ಹೊಸ ಮತಗಳ ಮೂಲಕ ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ರಾಷ್ಟ್ರದೃಷ್ಟಿಯ ಮೇಲೆ ತನ್ನ ಪ್ರಭಾವವನ್ನು ಬೀರಿತು. ಆದರೂ ಈ ರೀತಿ ರಾಷ್ಟ್ರೀಯ ಪ್ರಭಾವವನ್ನು ೦ಟುಮಾಡಿರುವದರಲ್ಲಿ ಅತಿ ಮುಖ್ಯವಾದು ವೆಂದರೆ “ ಭಾರತೀಯ ಷಡರ್ಶನಗಳು” ಎಂಬ ಆರು ದರ್ಶನ ಪಂಥಗಳು. ಈ ದರ್ಶನಗಳಲ್ಲಿ ಕೆಲವು ಬೌದ್ಧ ದರ್ಶನದ ಪ್ರಭಾವಕ್ಕೆ ಒಳಗಾದವು. ಇವೆಲ್ಲವನ್ನೂ ಶಾಸ್ತ್ರ ಸಮ್ಮತವೆಂದು ಹೇಳುತ್ತಾರೆ. ಎಲ್ಲಕ್ಕೂ ಮೂಲಪ್ರತ್ಯಯಗಳನೇಕವಿದ್ದರೂ ಒಂದೊಂದೂ ತನ್ನ ವಿಷಯ ಪ್ರವೇಶದಲ್ಲಿ ಮತ್ತು ನಿರ್ಣಯದಲ್ಲಿ ಭಿನ್ನವಾಗಿದೆ. ಬಹುದೇವತಾವಾದವಿದೆ. ವ್ಯಕ್ತಿ ದೇವತೆಯ ದೇವತಾವಾದವಿದೆ, ಶುದ್ಧ
ಪುಟ:ಭಾರತ ದರ್ಶನ.djvu/೧೬೧
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
೧೫೬
ಭಾರತ ದರ್ಶನ