ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಯುಗಾಂತರಗಳು
೧೫೬

ಏಕತ್ವವಾದವಿದೆ, ದೇವತ್ವವನ್ನೇ ಪೂರ್ಣವಾಗಿ ನಿರಾಕರಿಸಿ ವಿಕಾಸವಾದ ತಳಹದಿಯ ಮೇಲೆ ಕಟ್ಟಿದ ದರ್ಶನವೂ ಇದೆ. ಭಾವವಾದವೂ ಇದೆ, ವಾಸ್ತವವಾದವೂ ಇದೆ. ಬಹು ಜಟಿಲವೂ, ಸರ್ವ ಸಮಾ ವೇಶಕವೂ ಆದ ಭಾರತೀಯ ಮನಸ್ಸಿನ ವಿವಿಧ ಮುಖಗಳು ಪ್ರತ್ಯೇಕವಾಗಿಯೂ ಸಮಗ್ರವಾಗಿಯೂ ಇಲ್ಲಿ ಕಾಣುತ್ತವೆ. ಈ ಎರಡು ವಿಷಯಗಳನ್ನೂ ತೋರಿಸಿದ ಮಾಕ್ಸ್ ಮುಲ್ಲರ್, “........ ಈ ಆರು ದರ್ಶನಗಳ ವೈವಿಧ್ಯತೆಯ ಹಿಂದೆ ಸಾಮಾನ್ಯ ಜನತೆಯ ರಾಷ್ಟ್ರೀಯ ದರ್ಶನವೆಂದು ಹೇಳಬಹುದಾದ ಒಂದು ಅಪಾರ ನಿಧಿ ಇದೆ....... ಇದರಿಂದ ಪ್ರತಿಯೊಬ್ಬ ದಾರ್ಶನಿಕನೂ ತನಗೆ ಬೇಕಾದ ರತ್ನಗಳನ್ನು ಆಯ್ದು ಕೊಂಡನು” ಎಂದಿದ್ದಾನೆ.
ಇವೆಲ್ಲಕ್ಕೂ ಮೂಲ ಪೂರ್ವ ಭಾವನೆಗಳು ಒಂದೇ, ಸೃಷ್ಟಿ ಯಲ್ಲಿ ಒಂದು ನಿಯಮ ರಚನೆ ಇದೆ; ಆ ಸೃಷ್ಟಿ ಯು ನಿಯಮಕ್ಕನುಸಾರವಾಗಿ ಮುಂದುವರಿಯುತ್ತಿದೆ, ಮತ್ತು ಅದು ಲಯಬದ್ದವಿದೆ. ಇಂತಹ ಭಾವನೆಯು ಅತ್ಯವಶ್ಯಕ, ಏಕೆಂದರೆ ಅದಿಲ್ಲದೆ ಸೃಷ್ಟಿಯನ್ನು ವಿವರಿಸಲು ಯಾವ ದರ್ಶನವನ್ನೂ ರಚಿ ಸಲು ಸಾಧ್ಯವಾಗುವುದಿಲ್ಲ, ಕಾರ್ಯಕಾರಣ ಸಂಬಂಧದ ಹೇತುವಾದವು ಅನಿವಾರ್ಯವಾದರೂ ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಗತಿಯನ್ನು ತಾನು ರೂಪಿಸಿಕೊಳ್ಳಲು ತಕ್ಕಷ್ಟು ಸ್ವಾತಂತ್ರವಿದೆ. ಪುನರ್ಜ ನ್ಯದಲ್ಲಿ ನಂಬಿಕೆಯಿದೆ. ನಿಸ್ವಾರ್ಥ ಪ್ರೇಮ ಮತ್ತು ನಿಷ್ಕಾಮ ಕರ್ಮಕ್ಕೆ ಪ್ರಾಧಾನ್ಯತೆ ದೊರೆತಿದೆ. ತರ್ಕ ಮತ್ತು ನಿಮಿತ್ತ ಆಧಾರದ ಮೇಲೆ ಪರಿಣಾಮಕಾರಿಯಾದ ವಾದವಿವಾದಗಳು ನಡೆದಿವೆ. ಆದರೆ ಇವೆರಡಕ್ಕಿಂತ ಆತ್ಮ ಪ್ರೇರಣೆ ಮುಖ್ಯವೆಂದು ಗಣಿಸಲಾಗಿದೆ. ಹೊರಗಿನ ವಿಷಯಗಳಿಗೆ ಎಷ್ಟರಮಟ್ಟಿಗೆ ಸಾಧ್ಯವೋ ಅಷ್ಟರಮಟ್ಟಿಗೆ ಸಕಾರಣವಾಗಿ ಸಾಮಾನ್ಯ ಚರ್ಚೆ ಎಲ್ಲವೂ ಕಾರಣ ಬದ್ಧವಾಗಿ ನಡೆದಿದೆ. ಷಡ್ಡ ರ್ಶನಗಳು ಶಾಸ್ತ್ರೀಯ ನಿಜ, ವೇದ ಪ್ರಾಮಾಣ್ಯವನ್ನು ಒಪ್ಪುತ್ತವೆ; ಆದರೆ ಜೀವನದ ಸಮಸ್ಯೆಗೆಳನ್ನು ಮಾನವೀಯತೆಯ ಮಾರ್ಗದಿಂದ ಚರ್ಚಿಸುತ್ತವೆ. ನಿರ್ಣಿತ ಸಿದ್ಧಾಂತಗಳಿಗೆ ಪಾವಿತ್ರತೆಯನ್ನು ಕೊಡುವುದರ ವಿನಾ ನಿತ್ಯ ಉಪಯುಕ್ತ ಕಾರಗಳಿಗೂ ವೇದಗಳು ಸಹಾಯಕವಾಗಿವೆ. ಆ ಸಿದ್ಧಾಂತಕ್ಕೆ ಬರುವುದರಲ್ಲಿ ಅನೇಕವೇಳೆ ವೇದಗಳಿಂದ ಯಾವ ಸಹಾಯವೂ ದೊರೆತಿಲ್ಲ ಮತ್ತು ಅದರ ಮೂಲ ತತ್ವಕ್ಕೂ ಆ ಸಿದ್ಧಾಂತಕ್ಕೂ ಯಾವ ಸಾಮರಸ್ಯವೂ ಇಲ್ಲ.

೧೪. ಷಡ್ಡ ರ್ಶನಗಳು


ಭಾರತೀಯ ದರ್ಶನ ಪಂಥಗಳ ಆರಂಭದ ದಿನಗಳಿಗೆ ಹೋಗಬೇಕಾದರೆ ಬೌದ್ಧ ಯುಗಕ್ಕಿಂತ ಹಿಂದೆ ಹೋಗಬೇಕು, ಬ್ರಾಹ್ಮಣ ದರ್ಶನಗಳು ಬೌದ್ಧ ದರ್ಶನಗಳ ಜೊತೆಗೆ ಅನೇಕವೇಳೆ ಪರಸ್ಪರ ಖಂಡನೆಮಾಡು, ಇನ್ನು ಅನೇಕ ವೇಳೆ ಒಂದರಿ೦ದೊ೦ದು ಲಾಭ ಹೊಂದುತ್ತ ಕ್ರಮ ಕ್ರಮವಾಗಿ ಮುಂದುವರಿಯುತ್ತವೆ. ಕ್ರೈಸ್ತ ಯುಗದ ಆರಂಭದ ಹೊತ್ತಿಗೆ ಇಂತಹ ಅನೇಕ ದರ್ಶನಗಳ ಗೊಂದಲ ದಿಂದ ಬ್ರಾಹ್ಮಣ ಮತದ ಷಡ್ಡರ್ಶನಗಳು ರೂಪುಗೊಂಡು ಘನೀಭೂತವಾಗಿದ್ದವು. ಒಂದೊಂದಕ್ಕೂ ಸ್ವತಂತ್ರವಾದ ಪ್ರವೇಶವಿದೆ. ಪ್ರತ್ಯೇಕವಾದ ಸಾಮರ್ಥ್ಯವಿದೆ; ಆದರೂ ಒಂದೊಂದೂ ಇನ್ನೊಂದರಿಂದ ಬಹಿಷ್ಮತವಲ್ಲ; ಎಲ್ಲವೂ ಒಂದು ಮಹಾ ಯೋಜನೆಯ ಬೇರೆ ಬೇರೆ ಭಾಗಗಳು,
(೧) ನ್ಯಾಯ (೨) ವೈಶೇಷಿಕ (೩) ಸಾಂಖ್ಯ (೪) ಯೋಗ (೫) ಮೀಮಾಂಸ ಮತ್ತು (೬) ವೇದಾಂತ- ಇವೇ ಆರು ದರ್ಶನಗಳು.
ನ್ಯಾಯಮಾರ್ಗ ವಿಶ್ಲೇಷಣ ಮತ್ತು ತರ್ಕದ ಮಾರ್ಗ, ನ್ಯಾಯವೆಂದರೆ ತರ್ಕ ಅಥವ ಯುಕ್ತ ರೀತಿ ವಿಚಾರಮಾಡುವ ವಿಜ್ಞಾನ, ಪರಸ್ಪರ ಮೂಲಭೇದಗಳು ಅನೇಕವಿದ್ದರೂ ಸ್ವಲ್ಪ ಮಟ್ಟಿಗೆ ಅರಿಸ್ಟಾಟಲ್‌ನ ಅನುಗಮನ ತರ್ಕಸರಣಿ (syllogism) ಯನ್ನು ಹೋಲುತ್ತದೆ. ನ್ಯಾಯ ತರ್ಕ ಸರಣಿಯ ಮೂಲ ತತ್ವಗಳನ್ನು ಇತರ ಎಲ್ಲ ದರ್ಶನ ಪಂಥಗಳವರೂ ಒಪ್ಪಿಯಾರು. ಮತ್ತು ಒಂದು ಬಗೆಯ ಮಾನಸಿಕ ಶಿಕ್ಷಣವಾಗಿ ಪ್ರಾಚೀನ ಯುಗದಲ್ಲಿ ಮತ್ತು ಮಧ್ಯ ಯುಗದಲ್ಲಿ ಅಲ್ಲದೆ ಈಗಲೂ ಸಹ ಎಲ್ಲ ಭಾರತೀಯ ಪಾಠ ಶಾಲೆಗಳಲ್ಲಿ ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ನ್ಯಾಯ ಶಾಸ್ತ್ರವು ಪಾಠ