ಪುಟ:ಭಾರತ ದರ್ಶನ.djvu/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೫೮

ಭಾರತ ದರ್ಶನ

ಕ್ರಮದಲ್ಲಿ ಮುಖ್ಯ ಅಂಗವಾಗಿದೆ. ಸಾಂಪ್ರದಾಯಿಕ ಪದ್ಧತಿಯಂತ ಸಂಸ್ಕೃತ ಪಾಠ ನಡೆಯುವ ಶಾಲೆಗಳ ಹೊರತು, ಆಧುನಿಕ ಭಾರತೀಯ ಪದ್ಧತಿಯಲ್ಲಿ ಅದಕ್ಕೆ ಸ್ಥಾನವಿಲ್ಲ. ಸಂಸ್ಕೃತ ಶಾಲೆಗಳ ಪಠ್ಯ ಕ್ರಮದಲ್ಲಿ ನ್ಯಾಯ ಅತ್ಯವಶ್ಯಕವೆಂದು ಪ್ರಮುಖ ಸ್ಥಾನವನ್ನು ಕೊಡಲಾಗಿದೆ. ತತ್ವಶಾಸ್ತ್ರದ ಅಭ್ಯಾಸಕ್ಕೆ ಅದು ಅತ್ಯುಪಯುಕ್ತವಾದ ಸಾಧನ ಮಾರ್ಗವೆಂದು ಮಾತ್ರವಲ್ಲ, ಪ್ರತಿಯೊಬ್ಬ ವಿದ್ಯಾವಂತನಿಗೂ ಅತ್ಯವಶ್ಯ ಇರಬೇಕಾದ ಮಾನಸಿಕ ಶಿಕ್ಷೆ. ಯೂರೋಪಿನ ಶಿಕ್ಷಣ ಕ್ರಮದಲ್ಲಿ ಅರಿಸ್ಟಾಟಲಿನ ತರ್ಕ ಶಾಸ್ತ್ರಕ್ಕೆ ಇದ್ದ ಪ್ರಮುಖಸ್ಥಾನ ಭಾರತೀಯ ಸನಾತನ ಶಿಕ್ಷಣ ಪದ್ಧತಿಯಲ್ಲಿ ನ್ಯಾಯಕ್ಕೆ ದೊರೆತಿದೆ.
ರೀತಿ ಏನೋ ಆಧುನಿಕ ವಿಜ್ಞಾನ ಮಾರ್ಗದ ವಾಸ್ತವಿಕ ಪರೀಕ್ಷಾ ಕ್ರಮಕ್ಕಿಂತ ತೀರ ಭಿನ್ನವಾ ದುದು. ಆದರೂ ತನ್ನ ದೇ ಒಂದು ರೀತಿಯ ವಿಮರ್ಶನ ಮತ್ತು ವಿಜ್ಞಾನ ಪದ್ದತಿ ಇತ್ತು; ಕೇವಲ ನಂಬಿಕೆಯನ್ನೇ ಆಶ್ರಯಿಸದೆ ಜ್ಞಾನವಸ್ತುಗಳನ್ನು ವಿಮರ್ಶನ ಬುದ್ದಿ ಯಿಂದ ಪರೀಕ್ಷಿಸತೊಡಗಿತು. ತರ್ಕಬದ್ದ ಪ್ರಮಾಣ ಮಾರ್ಗದಿಂದ ಕ್ರಮಾನುಗತವಾಗಿ ಮುಂದುವರಿಯಿತು. ಅದರ ಹಿಂದೆ ಸ್ವಲ್ಪ ನಂಬಿಕೆಯೂ ಇತ್ತು. ತಾರ್ಕಿಕ ವಿಚಾರಕ್ಕೆ ಎಟುಕದ ಕೆಲವು ಮೂಲ ಭಾವನೆಗಳಿದ್ದವು. ಕೆಲವು ಮೂಲ ಸಿದ್ಧಾಂತಗಳನ್ನು ಒಪ್ಪಿಕೊಂಡು ಅವುಗಳ ಆಧಾರದ ಮೇಲೆ ಈ ಪದ್ದತಿಯ ರಚನೆಯಾ ಯಿತು. ದೇವರ ವ್ಯಕ್ತಿತ್ವದಲ್ಲಿ ನಂಬಿಕೆ ಇತ್ತು. ಪ್ರತಿ ವ್ಯಕ್ತಿಯ ಆತ್ಮಗಳಲ್ಲಿ, ಪರಮಾಣು ಪ್ರಪಂಚದಲ್ಲಿ ನಂಬಿಕೆ ಇತ್ತು. ವ್ಯಕ್ತಿಯು ಆತ್ಮವೂ ಅಲ್ಲ, ದೇಹವೂ ಅಲ್ಲ. ಎರಡರ ಸಮಾವೇಶದ ಫಲ. ಆತ್ಮಗಳ ಮತ್ತು ಪ್ರಕೃತಿಯ ಸಂಕೀರ್ಣವೇ ಸತ್ಯವೆಂದು ಭಾವಿಸಲಾಗಿತ್ತು.
ವೈಶೇಷಿಕ ಪಂಥವು ಅನೇಕ ರೀತಿಯಲ್ಲಿ ನ್ಯಾಯ ಪಂಥವನ್ನೇ ಹೋಲುತ್ತದೆ, ಜೀವಭೇದ, ವಸ್ತು ಭೇದಗಳಿಗೆ ಪ್ರಾಮುಖ್ಯತೆ ಕೊಟ್ಟು ವಿಶ್ವವು ಪರಮಾಣುಮಯವೆಂಬ ಸಿದ್ಧಾಂತವನ್ನು ಪ್ರತಿಪಾದಿಸುತ್ತದೆ. ವಿಶ್ವವು ನೀತಿಧರ್ಮಕ್ಕಧೀನ ; ಸರ್ವವೂ ಅದಕ್ಕನುಗುಣವಾಗಿ ವರ್ತಿಸುತ್ತದೆ. ದೇವರು ಒಬ್ಬನಿದ್ದಾನೆ ಎಂಬ ತತ್ವವನ್ನು ಸ್ಪಷ್ಟವಾಗಿ ಒಪ್ಪಿಲ್ಲ. ನ್ಯಾಯ ಮತ್ತು ವೈಶೇಷಿಕ ದರ್ಶನಗಳಿಗೂ ಆರಂಭದ ಬೌದ್ಧ ದರ್ಶನಕ್ಕೂ ಅನೇಕ ವಿಷಯಗಳಲ್ಲಿ ಹೋಲಿಕೆ ಇದೆ. ಒಟ್ಟಿನಲ್ಲಿ ಅವುಗಳ ದೃಷ್ಟಿ ವಾಸ್ತವಿಕದೃಷ್ಟಿ,
ಕ್ರಿಸ್ತಪೂರ್ವ ಏಳನೆಯ ಶತಮಾನದಲ್ಲಿ ಕಪಿಲ ಮಹರ್ಷಿಯು ಬುದ್ಧನ ಕಾಲಕ್ಕಿಂತ ಹಿಂದಿನ ಅನೇಕ ಸನಾತನ ತಮ್ಮ ವಿಚಾರಗಳಿಂದ ಪ್ರತಿಪಾದಿಸಿದ ಸಾ೦ಖ್ಯದರ್ಶನ ಬಹಳ ಪ್ರೌಢವಾಗಿದೆ. “ಪ್ರಪಂಚದ ಇತಿಹಾಸದಲ್ಲಿ ಮೊಟ್ಟ ಮೊದಲು ಮಾನವ ಮನಸ್ಸಿನ ಪೂರ್ಣ ಸ್ವಾತಂತ್ರವನ್ನೂ ಸ್ವಾಧೀನತೆಯನ್ನೂ, ಮತ್ತು ಸ್ವಶಕ್ತಿಯಲ್ಲಿ ಪೂರ್ಣ ವಿಶ್ವಾಸವನ್ನೂ ವ್ಯಕ್ತಗೊಳಿಸಿರುವುದು ಕಪಿಲ ಋಷಿಯ ದರ್ಶನದಲ್ಲಿ ” ಎಂದು ರಿಚರ್ಡ್‌ಗಾರ್ಟ್ ಹೇಳಿದ್ದಾನೆ,
ಬೌದ್ಧ ಧರ್ಮದ ಉನ್ನತಿಯ ಕಾಲದಲ್ಲಿ ಸಾಂಖ್ಯದರ್ಶನವು ಒಂದು ಸುಸಂಘಟಿತ ಪಂಥವಾಗಿತ್ತು. ಈ ಸಿದ್ಧಾಂತವು ಮಾನವ ಮನಸ್ಸಿನಿಂದ ಉದ್ರೂತವಾದ ಕೇವಲ ತಾತ್ವಿಕ ಮತ್ತು ದಾರ್ಶನಿಕ ಭಾವನೆಗಳಿಂದ ಕೂಡಿದ್ದು, ವಾಸ್ತವಿಕ ದೃಷ್ಟಿಗೂ ಅದಕ್ಕೂ ಯಾವ ಸಂಬಂಧವೂ ಇರಲಿಲ್ಲ. ಪ್ರತ್ಯಕ್ಷ ಪ್ರಮಾಣ ಅಸಾಧ್ಯವಿರುವ ಪ್ರಮೇಯಗಳಲ್ಲಿ ಪ್ರತ್ಯಕ್ಷ ಪ್ರಮಾಣ ಸಾಧ್ಯವೂ ಇರಲಿಲ್ಲ. ಬೌದ್ಧ ಮತದಂತೆ ಸಾಂಖ್ಯ ಮತವು ತಾರ್ಕಿಕ ಮಾರ್ಗದಲ್ಲಿ ವಿಚಾರಮಾಡತೊಡಗಿತು ಮತ್ತು ಬೌದ್ಧ ದರ್ಶನದ ವಾದವನ್ನು ಯಾವ ಪ್ರಾಮಾಣ್ಯದ ಸಹಾಯವನ್ನೂ ಪಡೆಯದೆ ಅದೇ ತರ್ಕಬದ್ದ ವಿಚಾರ ಸರಣಿಯಲ್ಲಿ ಎದುರಿಸಿತು. ಈ ತಾರ್ಕಿಕ ದೃಷ್ಟಿಯಲ್ಲಿ ದೇವರಿಗೆ ಸ್ಥಾನವಿಲ್ಲದಾಯಿತು. ಆದ್ದರಿಂದ ಸಾ೦ಖ್ಯದರ್ಶನದಲ್ಲಿ ವ್ಯಕ್ತಿಗತ ದೇವರೂ ಇಲ್ಲ. ವ್ಯಕ್ತಿರಹಿತ ದೇವರೂ ಇಲ್ಲ, ಏಕ ದೇವತಾ ವಾದವೂ ಇಲ್ಲ. ಏಕತ್ವವಾದವೂ ಇಲ್ಲ. ಅದರ ದೃಷ್ಟಿ ನಿರೀಶ್ವರ ವಾದದ ದೃಷ್ಟಿ, ನಿಸರ್ಗಾ ತಿರಿಕ್ತ ಧರ್ಮದ ತಳಹದಿಯನ್ನೆ ನಿರ್ಮೂಲಮಾಡಲು ಪ್ರಯತ್ನ ಪಟ್ಟವು. ವಿಶ್ವದ ಪುಷ್ಟಿ ಜೀವದಿಂದ ಆದುದಲ್ಲ; ಸತತವಾಗಿ ನಡೆದು ಬಂದ ವಿಕಾಸದಿಂದ ಆದುದು. ಜಡ ಮತ್ತು ಜೀವಗಳ ಪರಸ್ಪರ ಪರಿಣಾಮದ ಫಲ ; ಜಡವೂ ಸ್ವಭಾವತಃ ಶಕ್ತಿ ಸ್ವರೂಪ. ಈ ವಿಕಾಸ ನಿರಂತರವಾದುದು.