ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಯುಗಾಂತರಗಳು
೧೫೯


ಸಾಂಖ್ಯ ಮತವನ್ನು ದೈತದರ್ಶನವೆಂದು ಕರೆಯುತ್ತಾರೆ. ಏಕೆಂದರೆ ಅದರ ರಚನ ಎರಡು ಮೂಲ ಹೇತುಗಳನ್ನು ಅವಲಂಬಿಸಿದೆ ; ಸದಾ ಚೈತನ್ಯಪೂರ್ಣವೂ, ವಿಪರ್ಯಾಸ ಸ್ವಭಾವದ್ದೂ ಆದ ಪ್ರಕೃತಿ ಅಥವ ಶಕ್ತಿ ಮತ್ತು ನಾಶರಹಿತ ಜೀವ ಅಥವ ಪುರುಷ, ಪುರುಷ ಅಥವ ಜೀವದ ಸಂಖ್ಯೆ ಅಸಂಖ್ಯಾತ, ಸ್ವತಃ ಚೈತನ್ಯರಹಿತವಾದ ಪುರುಷನ ಸಂಪರ್ಕದಿಂದ ಪ್ರಕೃತಿಯ ವಿಕಾಸವಾಗಿ ವಿಶ್ವದ ನಿರಂತರ ಸೃಷ್ಟಿಗೆ ಕಾರಣವಾಗುತ್ತದೆ. ಕಾರಣ ತತ್ತ್ವವನ್ನು ಒಪ್ಪುತ್ತದೆ ; ಆದರೆ ಕಾರ್ಯ ಕಾರಣದಲ್ಲಿಯೇ, ಅಡಗಿದೆ ಎಂದು ವಾದಿಸುತ್ತದೆ. ಕಾರ್ಯ ಕಾರಣ ಎರಡೂ ಒಂದೇ ವಸ್ತುವಿನ ವ್ಯಕ್ತಿ ಮತ್ತು ಅವ್ಯರೂಪಗಳಾಗುತ್ತವೆ. ನಮ್ಮ ವ್ಯವಹಾರ ದೃಷ್ಟಿಯಿಂದ ಕಾರ್ಯಕಾರಣಗಳೆರಡು ಪ್ರತ್ಯೇಕ ಮತ್ತು ಭಿನ್ನವಾದವು, ಆದರೆ ಮೂಲತಃ ಅವೆರಡೂ ಒಂದೇ.
ಈ ರೀತಿ ಚರ್ಚೆ ಮುಂದುವರಿದು ಅವ್ಯಕ್ತ ಪ್ರಕೃತಿ ಅಥವ ಶಕ್ತಿಯು ಪುರುಷ ಅಥವ ಚೈತನ್ಯ ವಸ್ತುವಿನ ಮತ್ತು ಕಾರ್ಯಕಾರಣ ಸಂಬಂಧದ ಪ್ರಭಾವದಿಂದ ಅಪಾರ ಜಟಿಲತೆಯಿಂದ, ವಿವಿಧ ಧಾತುಗಳಿಂದ ತುಂಬಿದ ನಿಸರ್ಗವು ಹೇಗೆ ಆವಿರ್ಭವಿಸಿದೆ ಮತ್ತು ಸದಾ ರೂಪಾಂತರ ಹೊಂದುತ್ತ ಮುಂದುವರಿಯುತ್ತಿದೆ ಎಂಬುದನ್ನು ತೋರಿಸಿದೆ. ಪ್ರಪಂಚದಲ್ಲಿ ಅಣುವಿನಿಂದ ಮೊದಲುಗೊಂಡು ಮಹದ್ವಸ್ತುವಿನವರೆಗೆ ಒಂದು ಅವಿಚ್ಛಿನ್ನತೆ ಮತ್ತು ಅಭಿನ್ನತೆ ಇದೆ. ಈ ಭಾವನೆ ಎಲ್ಲವೂ ತಾತ್ವಿಕವಾದದ್ದು. ಕೆಲವು ಪ್ರಾಕೃಮೇಯಗಳ ಆಧಾರದ ಮೇಲೆ ಹೂಡಿದ ವಾದವು ದೀರ್ಘವೂ, ಜಟಿಲವೂ ತರ್ಕಪೂರ್ಣವೂ ಇದೆ.
ಪತಂಜಲಿಯ ಯೋಗದರ್ಶನವು ಮುಖ್ಯವಾಗಿ ದೈಹಿಕ ಮತ್ತು ಮಾನಸಿಕ ಶಿಕ್ಷಣದ ಮೂಲಕ ಆಧ್ಯಾತ್ಮಿಕ ಮತ್ತು ವಿಷಯಕ ಶಿಕ್ಷಣವನ್ನು ಕೊಡುವ ಮಾರ್ಗ, ಪತಂಜಲಿಯು ಈ ಪ್ರಾಚೀನ ದರ್ಶನ ಪಂಥವನ್ನು ಕ್ರೋಢೀಕರಿಸಿದ್ದು ಮಾತ್ರವಲ್ಲ, ಆತನು ಪಾಣಿನಿಯ ಸಂಸ್ಕೃತ ವ್ಯಾಕರಣಕ್ಕೆ ಒಂದು ಪ್ರಸಿದ್ದವಾದ ವ್ಯಾಖ್ಯಾನವನ್ನೂ ಬರೆದು ಇರುತ್ತಾನೆ. “ ಮಹಾಭಾಷ್ಯ” ಎಂಬ ಈ ಟೀಕಾ ಗ್ರಂಥವು ಪಾಣಿನಿಯ ಗ್ರಂಥದಷ್ಟೆ ಶ್ರೇಷ್ಠ ಕಾವ್ಯವಾಗಿದೆ. “ ಭಾರತದ ಆದರ್ಶ ವೈಜ್ಞಾನಿಕ ಗ್ರಂಥವೆಂದರೆ ಪತಂಜಲಿಯ ಮಹಾಭಾಷ್ಯದೊಂದಿಗೆ ಪಾಣಿನಿಯ ವ್ಯಾಕರಣ” ಎಂದು ಲೇನಿನ್ ಗ್ರಾಡಿನ ಪ್ರೊಫೆ ಸರ್ ಫೆರ್‌ ಬಾಟ್ಲಿ ಹೇಳಿದ್ದಾನೆ.
ಅರ್ಥ ತಿಳಿಯದಿದ್ದರೂ ಯೋಗಶಬ್ದವು ಈಗ ಯೂರೋಪ್ ಮತ್ತು ಅಮೆರಿಕೆಗಳಿಗೆ ತುಂಬ ಪರಿಚುಯವಾಗಿದೆ. ಬುದ್ಧನಂತೆ ಆಸನಾರೂಢನಾಗಿ ತನ್ನ ನಾಭಿಯನ್ನೂ ಮೂಗಿನ ತುದಿಯನ್ನೊ ನೆಟ್ಟ ದೃಷ್ಟಿಯಿಂದ ನೋಡುವುದರಲ್ಲಿ ಪಂಡಿತರಾದ ಕೆಲವರು ಕೆಲವು ವಿಶೇಷ ದೇಹಲಕ್ಷಣಗಳನ್ನು ತಿಳಿದುಕೊಂಡು ಪಾಶ್ಚಿಮಾತ್ಯರಲ್ಲಿ ಯೋಗಶಾಸ್ತ್ರ ಪಂಡಿತರೆಂಬ ನಂಬಿಕೆಯನ್ನು ಹುಟ್ಟಿಸಿ ಅಲ್ಪಜ್ಞರನ್ನೂ, ವಿಸ್ಮಯ ಕುತೂಹಲರನ್ನೂ ಮೋಸ ಮಾಡುತ್ತಾರೆ. ಆದರೆ ಈ ಪಂಥವು ಈ ಎಲ್ಲ ಯುಕ್ತಿಗಳಿಂದ ಹೆಚ್ಚಿನದು, ಮನಸ್ಸಿಗೆ ಸರಿಯಾದ ಶಿಕ್ಷಣವನ್ನು ಕೊಡುವುದರ ಮೂಲಕ ಆತ್ಮಜ್ಞಾನದ ಕೆಲವು ಉನ್ನತ ಮಟ್ಟಿಗಳನ್ನು ಮುಟ್ಟಬಹುದು ಎಂಬ ಮನಶ್ಯಾಸ್ತ್ರದ ಭಾವನೆಯ ಆಧಾರವನ್ನವಲಂಬಿಸಿದೆ. ಪ್ರಪಂಚದ ಅಥವ ಸತ್ಯದ ಪೂರ್ವಭಾವನೆಯ ತತ್ವ ಸಿದ್ಧಾಂತಕ್ಕೆ ಪ್ರತಿಯಾಗಿ ಆತ್ಮಾನ್ವೇ ಷಣೆಯಿಂದ ಆತ್ಮಜ್ಞಾನವನ್ನು ಪಡೆಯುವ ಮಾರ್ಗ. ಆದ್ದರಿಂದ ಇದು ಪ್ರಾಯೋಗಿಕ ; ಮತ್ತು ಪ್ರಯೋಗ ನಡೆಸಲು ಅವಶ್ಯವಾದ ಯೋಗ್ಯ ಸನ್ನಿವೇಶಗಳೇನೆಂಬುದನ್ನೂ ತಿಳಿಸುತ್ತದೆ. ಆದ್ದರಿಂದ ಯಾವ ದರ್ಶನ ಪಂಥವೇ ಆಗಲಿ ಅದರ ದಾರ್ಶನಿಕ ದೃಷ್ಟಿ ಏನೆ ಇರಲಿ ಯೋಗವನ್ನೂ ಒಂದು ಮಾರ್ಗವನ್ನಾಗಿ ಉಪಯೋಗಿಸಬಹುದು. ಇದರಿಂದ ನಿರೀಶ್ವರವಾದಿಗಳಾದ ಸಾಂಖ್ಯದಶರ್ದನ ಪಂಥದವರೂ ಇದನ್ನು ಉಪಯೋಗಮಾಡಿಕೊಳ್ಳಬಹುದು. ಬೌದ್ಧ ಮತವು ಸಹ ತನ್ನದೇ ಒಂದು ಯೋಗಶಾಸ್ತ್ರವನ್ನು ಕಂಡು ಹಿಡಿಯಿತು. ಅದು ಕೆಲವು ಸಂದರ್ಭದಲ್ಲಿ ಷಡರ್ಶನಗಳ ಯೋಗಗಳ ಯೋಗಶಾಸ್ತ್ರಕ್ಕೆ ಅನುಗುಣವಾಗಿದೆ, ಇನ್ನು ಕೆಲವು ವೇಳೆ ಭಿನ್ನ ವಿದೆ. ಆದ್ದರಿಂದ ಪತಂಜಲಿಯ ಯೋಗ ಶಾಸ್ತ್ರದ ಸಿದ್ಧಾಂತ ಭಾಗಗಳು ಅಷ್ಟು ಪ್ರಾಮುಖ್ಯವಲ್ಲ. ಅದರ ರೀತಿ ಮುಖ್ಯ. ದೇವರಲ್ಲಿ