ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೧೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೯೪
ಭಾರತ ವರ್ತನ

೨೧. ಉನ್ನತಿ ಮತ್ತು ಅವನತಿ

ಕ್ರಿಸ್ತಶಕೆಯ ಆರಂಭದ ಒಂದು ಸಾವಿರ ವರ್ಷಗಳಲ್ಲಿ ಭಾರತದಲ್ಲಿ ಅನೇಕ ಉಬ್ಬರವಿಳಿತಗಳಾಗಿವೆ. ದಂಡಯಾತ್ರೆ ಬಂದ ಅನೇಕರೊಡನೆ ಘರ್ಷಣೆಗಳೂ ದೇಶದಲ್ಲಿ ಅ೦ತಃ ಕೋಭೆಗಳೂ ಆಗಿವೆ. ಆದರೂ ಅದು ಉತ್ಕಟ ರಾಷ್ಟ್ರೀಯ ಜೀವನದ ಕಾಲ, ರಾಷ್ಟ ಶಕ್ತಿಯು ಉಕ್ಕೇರಿ ಹರಿದು ಹಬ್ಬಿದ ಕಾಲ, ಸರ್ವತೋಮುಖ ಪ್ರಗತಿಯ ಕಾಲ. ಸಂಸ್ಕೃತಿಯು ಒಂದು ಸರ್ವಸಂಪದ್ಯುಕ್ತ ನಾಗರಿಕತೆಯಾಗಿ ವಿಕಾಸಗೊಂಡು ತತ್ತ್ವ ಶಾಸ್ತ್ರ, ಸಾಹಿತ್ಯ, ನಾಟಕ, ಕಲೆ, ವಿಜ್ಞಾನ ಮತ್ತು ಗಣಿತ ಶಾಸ್ತ್ರಗಳಲ್ಲಿ ಪ್ರಫುಲ್ಲಿತವಾದ ಕಾಲ. ಭಾರತದ ಆರ್ಥಿಕ ನೀತಿಯು ವಿಶಾಲಗೊಳ್ಳುತ್ತದೆ. ಭಾರತದ ದಿಗಂತವು ಬಹು ದೂರ ಸಾಗಿ ಅನೇಕ ದೇಶಗಳು ಅದರ ದೊಡ್ಡ ಮಡಿಲಲ್ಲಿ ಸೇರುತ್ತವೆ. ಇರಾಣ, ಚೀನ, ಹೆಲನಿಕ್ ಪ್ರಪಂಚ, ಮಧ್ಯ ಏಷ್ಯ ಇವುಗಳೊಂದಿಗೆ ಸಂಪರ್ಕ ಬೆಳೆಯುತ್ತದೆ. ಎಲ್ಲಕ್ಕೂ ಮಿಗಿಲಾಗಿ ಪೂರ್ವ ಸಮುದ್ರಗಳ ಮೇಲಿನ ಮಮತೆಯು ಹೆಚ್ಚಿ ಭಾರತೀಯ ವಲಸೆ ರಾಷ್ಟ್ರಗಳ ಸ್ಥಾಪನೆಗೆ ಕಾರಣವಾಗುತ್ತದೆ ; ಭಾರತೀಯ ಸಂಸ್ಕೃತಿಯು ಭಾರತದ ಗಡಿಯಾಚೆ ಬಹುದೂರ ಹರಡುತ್ತದೆ. ಈ ಯುಗದ ಮಧ್ಯಕಾಲದಲ್ಲಿ ನಾಲ್ಕನೆಯ ಶತಮಾನದ ಆದಿಯಿಂದ ೬ನೆಯ ಶತಮಾನದ ವರೆಗೆ ಗುಪ್ತ ಸಾಮ್ರಾಜ್ಯವು ಉಚ್ಛಾಯ ಸ್ಥಿತಿಗೆ ಬಂದು ಮಾನಸಿಕ ಮತ್ತು ಕಲಾ ವಿಕಾಸಕ್ಕೆ ಪೋಷಕವಾಗುತ್ತದೆ, ಸಂಕೇತವೂ ಆಗುತ್ತದೆ. ಈ ಕಾಲವನ್ನು ಭಾರತದ ಸುವರ್ಣಯುಗ ಅಥವ ಶ್ರೇಷ್ಠ ಯುಗವೆಂದು ಕರೆದಿದ್ದಾರೆ. ಆ ಕಾಲದ ಗ್ರಂಥಗಳು ಸಂಸ್ಕೃತ ಸಾಹಿತ್ಯದ ಮಹಾಕಾವ್ಯಗಳು. ಅವುಗಳಲ್ಲಿ ಒಂದು ಗಂಭೀರ ಶಾಂತಮುದ್ರೆ ಇದೆ. ಆತ್ಮವಿಶ್ವಾಸವಿದೆ, ಆ ನಾಗರಿಕತೆಯ ಬೆಳಸಿನಲ್ಲಿ ಬಾಳುವುದೊಂದು ಗೌರವ, ವೈಶಿಷ್ಟ್ಯ ಎಂಬ ಹೆಮ್ಮೆ ಇದೆ ; ಮತ್ತು ಇದರೊಂದಿಗೆ ಅವರ ಅದ್ಭುತ ಬುದ್ಧಿಶಕ್ತಿಯನ್ನೂ ಕಲಾಪ್ರೌಢಿಮೆಯನ್ನೂ ಸಾಧ್ಯವಿರುವಮಟ್ಟಿಗೆ ಉಪಯೋಗಿಸಬೇಕೆಂಬ ಕುತೂ ಹಲವಿದೆ.
ಆದರೂ ಆ ಸುವರ್ಣ ಯುಗದ ಸಂಜೆಯಾಗುವುದರ ಒಳಗೆ ದೌರ್ಬಲ್ಯವೂ, ಕ್ಷೀಣದೆಶೆಯೂ ತಲೆ ಎತ್ತುತ್ತವೆ. ವಾಯವ್ಯದಿಂದ ಶ್ವೇತಹೂಣರು ಮೇಲಿಂದ ಮೇಲೆ ದಂಡೆತ್ತಿ ಬರುತ್ತಾರೆ. ಅವರನ್ನು ಹಿಮ್ಮೆಟ್ಟಲಾಗುತ್ತದೆ. ಆದರೂ ಬಂದೇ ಬರುತ್ತಾರೆ, ಕ್ರಮೇಣ ಉತ್ತರ ಹಿಂದೂಸ್ಥಾನದಲ್ಲಿ ಕಾಲೂರು ತ್ತಾರೆ. ಉತ್ತರದಲ್ಲಿ ಸುಮಾರು ಐವತ್ತು ವರ್ಷಗಳ ಕಾಲ ಆಳಿದ ಒಂದು ರಾಜ್ಯವನ್ನು ಸಹ ಕಟ್ಟುತ್ತಾರೆ. ಆದರೆ ಗುಪ್ತ ಸಂತತಿಯ ಕೊನೆಯ ಚಕ್ರವರ್ತಿಯು ಮಹಾ ಪ್ರಯತ್ನ ಮಾಡಿ, ಮಧ್ಯ ಇಂಡಿಯದ ರಾಜನಾದ ಯಶೋವರ್ಮನೊಂದಿಗೆ ಸೇರಿಕೊಂಡು ಹೂಣರನ್ನು ಓಡಿಸುತ್ತಾನೆ. ಈ ಅನೇಕ ಕಾಲದ ಹೋರಾಟದಿಂದ ಭಾರತದ ರಾಜಕೀಯ ಮತ್ತು ಸೈನ್ಯಶಕ್ತಿ ಕುಂದಿತು ; ಮತ್ತು ಉತ್ತರ ಹಿಂದೂಸ್ಥಾನದಲ್ಲೆಲ್ಲ ಹೂಣರನೇಕರು ನೆಲಸಿದ್ದರಿಂದ ಜನರಲ್ಲಿ ಒಂದು ಆ೦ತರಿಕ ಬದಲಾ ವಣೆಯೂ ಆಯಿತು. ಉಳಿದ ವಿದೇಶೀಯರಂತೆ ಅವರೂ ಭಾರತೀಯರಾದರು. ಆದರೆ ಮೂಲ ಸಿಂಧೂ ಆರರ ಪ್ರಾಚೀನ ಆದರ್ಶಗಳು ಸಡಿಲಿದವು. ಹೂಣರ ಪೂರ್ವೆತಿಹಾಸವೆಲ್ಲ ವಿಶೇಷ ಕ್ಯಾಲ್ಯ ಮತ್ತು ಅಮಾನುಷ ಕೃತ್ಯಗಳಿಂದ ತುಂಬಿವೆ. ಇವು ಭಾರತೀಯ ಯುದ್ದ ನೀತಿಗೆ ಮತ್ತು ಆಡಳಿತ ನೀತಿಗೆ ತೀರ ವಿರುದ್ದವಾದವು.
ಏಳನೆಯ ಶತಮಾನದಲ್ಲಿ ಹರ್ಷನ ಕಾಲದಲ್ಲಿ ರಾಜಕೀಯ ಮತ್ತು ಸಾಂಸ್ಕೃತಿಕ ಪುನರುಜ್ಜ ವನವಾಯಿತು. ಗುಪ್ತರ ಕಾಲದ ವೈಭವಪೂರ್ಣ ರಾಜಧಾನಿಯಾದ ಉಜ್ಜಯಿನಿ ನಗರವು ಪುನಃ ಸಂಸ್ಕೃತಿ ಮತ್ತು ಕಲೆಗೆ ಮಾತೃ ಸ್ಥಾನವಾಗಿ ಪ್ರಬಲ ರಾಜ್ಯದ ಕೇಂದ್ರವಾಯಿತು. ಆದರೆ ಅನಂತರದ ಶತಮಾನಗಳಲ್ಲಿ ಇದೂ ಬಲಗುಂದಿ ಕ್ಷೀಣದೆಶೆಗೆ ಬರುತ್ತದೆ. ಒಂಭತ್ತನೆಯ ಶತಮಾನದಲ್ಲಿ ಗುಜ ರಾತದ ಮಿಹಿರಭೋಜನು ಕನೂಜ ಪಟ್ಟಣವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಉತ್ತರ ಭಾರತ ಮತ್ತು ಮಧ್ಯ ಭಾರತವನ್ನು ಒಂದುಗೂಡಿಸಿ ಏಕಚಕ್ರಾಧಿಪನಾಗುತ್ತಾನೆ. ಪುನಃ