ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಯುಗಾಂತರಗಳು
೧೯೫

ಮತ್ತೊಂದು ಸಾಹಿತ್ಯ ಪುನರುಜ್ಜಿವನವಾಗುತ್ತದೆ. ಅದರಲ್ಲಿ ರಾಜಶೇಖರನು ಪ್ರಮುಖ ಪಾತ್ರ ವಹಿ ಸುತ್ತಾನೆ. ಪುನಃ ಹನ್ನೊಂದನೆಯ ಶತಮಾನದಲ್ಲಿ ಉಜ್ಜಯಿನಿಯಲ್ಲಿ ಇನ್ನೂ ಬೃ ಭೋಜನು ಬಲಿಷ್ಠನಾಗಿ ಆದರ್ಶ ಪುರುಷನಾಗುತ್ತಾನೆ. ಈ ಭೋಜನು ಅನೇಕ ರೀತಿಯಲ್ಲಿ ಪ್ರತಿಭಾವಂತ ನಾದ ಮಹಾಪುರುಷ, ಆತನು ವೈಯಾಕರಣಿ, ಕೋಶ ನಿರ್ಮಾಪಕ, ವೈದ್ಯಶಾಸ್ತ್ರ ಮತ್ತು ಖಗೋಳ ಶಾಸ್ತ್ರಗಳಲ್ಲಿ ನಿಪುಣ, ಕಲೆ ಮತ್ತು ಸಾಹಿತ್ಯದ ಸೃಷ್ಟಿಕರ್ತ ಮತ್ತು ಪೋಷಕ ; ಸ್ವತಃ ಕವಿ. ಅನೇಕ ಗ್ರಂಥಗಳನ್ನು ಆತನೇ ಬರೆದನೆಂದು ಪ್ರತೀತಿ ಇದೆ. ಮಹೋನ್ನತಿ, ಪಾಂಡಿತ್ಯ, ಔದಾರ್ಯ ಇವುಗಳಿಗೆ ಆತನ ಹೆಸರು ಮನೆಮಾತಾಗಿದೆ. ಜನಪದಸಾಹಿತ್ಯದ ಇತಿಹಾಸದಲ್ಲಿ ಆತನ ಹೆಸರು ಒಂದು ಸಂಕೇತವಾಗಿದೆ.
ಇಷ್ಟೆಲ್ಲ ಜಾಜ್ವಲ್ಯತೆಯಿದ್ದರೂ, ಭಾರತವು ಒಂದು ಅಂತರ್ದೌಬ್ರಲ್ಯದಿಂದ ನರಳುತ್ತಿದ್ದಂತೆ ತೋರುತ್ತದೆ. ಅದರ ರಾಜಕೀಯ ಅಂತಸ್ತು ಮತ್ತು ರಚನಾತ್ಮಕ ಕಾರ ಶಕ್ತಿ ಕುಂದುತ್ತದೆ. ಈ ಕ್ಷಯ ರೋಗವು ಎಂದು ಆರಂಭವಾಯಿತೆಂದು ಹೇಳಲು ಸಾಧ್ಯವಿಲ್ಲ. ಇದು ನಿದಾನವಾಗಿ ಒಳಗೇ ಹುಟ್ಟ ಹರಿದು ಬಂದ ರೋಗ, ದಕ್ಷಿಣ ಭಾರತಕ್ಕಿಂತ ಮುಂಚೆಯೇ ಉತ್ತರ ಭಾರತವು ಈ ರೋಗಕ್ಕೆ ಆಹುತಿ ಯಾಯಿತು. ರಾಜಕೀಯ ಮತ್ತು ಸಂಸ್ಕೃತಿಯ ದೃಷ್ಟಿಯಿಂದ ದಕ್ಷಿಣ ಭಾರತವು ಬಹು ಪ್ರಾಮುಖ್ಯತೆ ಪಡೆಯುತ್ತದೆ. ಪ್ರಾಯಶಃ ಮೇಲಿಂದ ಮೇಲೆ ದಂಡೆತ್ತಿ ಬರುತ್ತಿದ್ದ ವಿದೇಶಿಯರ ಆಘಾತಕ್ಕೆ ಸಿಲುಕ ದಿದ್ದುದೇ ಕಾರಣವಿರಬಹುದು. ಪ್ರಾಯಶಃ ಉತ್ತರದೇಶದ ಅವ್ಯವಸ್ಥಿತ ಜೀವನದಿಂದ ತಪ್ಪಿಸಿಕೊಳ್ಳ ಲೆತ್ನಿ ಸಿ ಅನೇಕ ಗ್ರಂಥಕರ್ತರು, ಕಲಾವಿದರು, ಶಿಲ್ಪ ಕುಶಲಿಗಳು ದಕ್ಷಿಣ ದೇಶಕ್ಕೆ ಹೋಗಿ ನೆಲಸಿರ ಬಹುದು. ದಕ್ಷಿಣ ಭಾರತದ ಬಲಿಷ್ಠ ರಾಜ್ಯಗಳು ತಮ್ಮ ವೈಭವಯುಕ್ತ ರಾಜಾಸ್ಥಾನಗಳಲ್ಲಿ ಇವರಿಗೆ ಆಶ್ರಯ ಕೊಟ್ಟಿರಬಹುದು. ಬೇರೆಲ್ಲೂ ದೊರೆಯದ ಪ್ರೋತ್ಸಾಹವನ್ನು ಕೊಟ್ಟು ಅವರ ಕಲಾಭಿಜ್ಞತೆಯ ವಿಕಸನಕ್ಕೆ ಅವಕಾಶ ಕಲ್ಪಿಸಿರಬಹುದು,
ಹಿಂದಿನ ಕಾಲದಂತೆ ಉತ್ತರ ಹಿಂದೂಸ್ಥಾನಕ್ಕೆ ಭಾರತದಲ್ಲೆಲ್ಲಾ ಅಧಿಕಾರ ವ್ಯಾಪ್ತಿ ಇಲ್ಲದಿದ್ದರೂ ಮತ್ತು ಸಣ್ಣ ಸಣ್ಣ ರಾಜ್ಯಗಳಾಗಿ ಅದು ಒಡೆದು ಹೋಗಿದ್ದರೂ ಅಲ್ಲಿ ಇನ್ನೂ ಜೀವನ ಪರಿಪೂರ್ಣತೆಯು ಇತ್ತು. ಅನೇಕ ಸಂಸ್ಕೃತಿ ಮತ್ತು ದರ್ಶನ ಕೇಂದ್ರಗಳಿದ್ದವು. ಎಂದಿನಂತೆ ಕಾಶೀನಗರವು ಭಾರತದ ತಾತ್ವಿಕ ಮತ್ತು ದಾರ್ಶನಿಕ ವಿಚಾರಗಳಿಗೆ ಹೃದಯ ಪ್ರಾಯವಾಗಿತ್ತು. ನೂತನ ಸಿದ್ದಾಂತದ ಪ್ರತಿ ಪಾದಕನಾಗಲಿ, ಪ್ರಾಚೀನ ಸಿದ್ದಾಂತದ ನೂತನ ಟೀಕಾ ಕರ್ತೃವಾಗಲಿ ಕಾಶಿಗೆ ಬಂದೇ ತನ್ನ ಪ್ರತಿ ಪಾದನೆಗೆ ಸಮರ್ಥನೆ ಮತ್ತು ಮನ್ನಣೆ ಪಡೆಯಬೇಕಾಗಿತ್ತು. ಬಹುಕಾಲದವರೆಗೆ ಕಾಶ್ಮೀರದೇಶವು ಬೌದ್ದ ಮತ್ತು ಬ್ರಾಹ್ಮಣ ಮತಗಳ ಸಂಸ್ಕೃತಜ್ಞಾನಕ್ಕೆ ಮಹಾಕೇಂದ್ರವಾಗಿತ್ತು. ಅನೇಕ ವಿಶ್ವ ವಿದ್ಯಾನಿಲಯಗಳಿದ್ದವು. ಅವುಗಳಲ್ಲೆಲ್ಲ ದೊಡ್ಡ ದಾದ ನಲಂದ ವಿಶ್ವವಿದ್ಯಾನಿಲಯದ ವಿದ್ವತ್ತರಿ ಪೂರ್ಣತೆಗೆ ಭಾರತಾದ್ಯಂತವೂ ತುಂಬ ಗೌರವವಿತ್ತು. ನಲಂದದಲ್ಲಿ ಶಿಕ್ಷಣ ಪಡೆದವನೆಂದರೆ ಸುಸಂಸ್ಕೃತ ನೆಂಬ ಪ್ರತೀತಿ ಇತ್ತು, ಎಲ್ಲರಿಗೂ ಅಲ್ಲಿ ಪ್ರವೇಶವಿರುತ್ತಿರಲಿಲ್ಲ. ಉಚ್ಚ ಶಿಕ್ಷಣ ಪಡೆದು ಒಂದು ಜ್ಞಾನ ಮಟ್ಟವನ್ನು ಮುಟ್ಟಿದವರಿಗೆ ಮಾತ್ರ ಪ್ರವೇಶವಿತ್ತು. ಪಾಂಡಿತ್ಯ ಪಡೆದನಂತರ ಮಾತ್ರ ಅಲ್ಲಿ ಶಿಕ್ಷಣಕ್ಕೆ ಅವಕಾಶವಿತ್ತು. ಚೀಣ, ಜಪಾನ್, ಟಿಬೆಟ್ ಕೊರಿಯ, ಮಂಗೋಲಿಯಾ ಮತ್ತು ಬೊಖಾರದಿಂದ ಸಹ ವಿದ್ಯಾರ್ಥಿಗಳು ಬರುತ್ತಿದ್ದರು. ಬೌದ್ದ ಮತ್ತು ಬ್ರಾಹ್ಮಣ ಮತಗಳ ಧಾರ್ಮಿಕ ಮತ್ತು ತಾತ್ವಿಕ ವಿಚಾರಗಳಲ್ಲದೆ ತಾತ್ವಿಕ ವ್ಯಾವಹಾರಿಕ ವಿಷಯಗಳನ್ನೂ ಬೋಧಿಸುತ್ತಿದ್ದರು. ಕಲಾ ಶಾಲೆಯೂ, ಶಿಲ್ಪ ಕಲಾ ಶಾಲೆಯೂ ಇದ್ದವು. ವೈದ್ಯ ವಿದ್ಯೆ, ಕೃಷಿಕವಿದ್ಯೆ, ಗೋರಕ್ಷಣೆಗಳನ್ನು ಬೋಧಿ ಸಲು ಪ್ರತ್ಯೇಕ ಶಾಖೆಗಳಿದ್ದವು. ವಿಶ್ವವಿದ್ಯಾನಿಲಯದ ಬೌದ್ದಿ ಕಜೀವನದ ವಿಷಯವಾಗಿ ಚರ್ಚೆಗಳೂ ವಾದವಿವಾದಗಳೂ ಆಗುತ್ತಿದ್ದವು. ಪರದೇಶಗಳಲ್ಲಿ ಭಾರತದ ಸಂಸ್ಕೃತಿಯ ಪ್ರಚಾರಕ್ಕೆ ನಲಂದ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳೇ ಕಾರಣ ಪುರುಷರಾದರು.
ಬಿಹಾರದ ಇಂದಿನ ಭಾಗಲ್ಪುರದ ಬಳಿ ವಿಕ್ರಮಶಾಲೆ ವಿಶ್ವವಿದ್ಯಾನಿಲಯವೂ ಕಾಥೇವಾಡದಲ್ಲಿ