ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅಹಮದ್ ನಗರದ ಕೋಟೆ
೧೩

ಚ್ಯುತಿಯಿಲ್ಲದ ಆತ್ಮವೊಂದಿರಬಹುದು. ಅಂತಿಮ ಕಾರಣವನ್ನೇ ಯೋಚಿಸುವುದಾದರೆ ಸ್ವಲ್ಪ ತೊಡಕುಗಳು ತೋರಿದಾಗ್ಯೂ ಕಾಠ್ಯ ಕಾರಣವಾದದಿಂದ ನಮ್ಮ ಜೀವನ ಬದ್ದ ಎನ್ನುವುದೂ ಸರಿಯೆಂದು ತೋರುತ್ತದೆ. ಆತ್ಮವಿದೆ ಎಂದು ನಂಬಿದರೆ ಪುನರ್ಜನ್ಮ ಸಿದ್ಧಾಂತದಲ್ಲಿಯೂ ಸ್ವಲ್ಪ ಪಥ್ಯ ವಿರುವಂತಿದೆ.

ಆದರೆ ಧರ್ಮಶ್ರದ್ದೆಯೆಂದು ಅದನ್ನೇ ಆಗಲಿ, ಬೇರೆ ಸಿದ್ದಾಂತ ಅಥವ ಪ್ರಮೇಯಗಳಲ್ಲಿ ಆಗಲಿ ನಾನು ನಂಬುವುದಿಲ್ಲ. ಅವು ನಮಗೆ ಏನೂ ತಿಳಿಯದ ಅಜ್ಞೇಯ ಪ್ರಪಂಚದಲ್ಲಿ ನಮ್ಮ ಬೌದ್ಧಿಕ ಮೀಮಾಂಸೆ ಮಾತ್ರ. ಅವು ನನ್ನ ಜೀವನದ ಮೇಲೆ ಯಾವ ಪರಿಣಾಮವನ್ನೂ ಮಾಡಿಲ್ಲ. ಕ್ರಮೇಣ ಅದು ಸರಿ ಅಥವ ತಪ್ಪು ಎಂದು ನಿರ್ಧರವಾದರೂ ಅದರಿಂದ ನನಗೆ ಏನೂ ವ್ಯತ್ಯಾಸವಾಗುವುದಿಲ್ಲ. ಜನ್ಮಾಂತರದ ಗುಟ್ಟನ್ನರಿಯುವುದು, ಭೌತಾತೀತ ಅದ್ಭುತಗಳ ಶೋಧನೆ ಎಂದು ಹೇಳುವ ಪ್ರೇತವಾದ ಮತ್ತು ಅದರ ಕೂಟಗಳು ಮತ್ತು ಪ್ರೇತಗಳ ಪ್ರತ್ಯಕ್ಷ ಸಂದರ್ಶನ ಮುಂತಾದವುಗಳೆಲ್ಲ ಅವಿವೇಕ, ಉದ್ಧ ತಮಾರ್ಗ ಎಂದು ನನ್ನ ಭಾವನೆ. ಪ್ರಾಯಶಃ ಇನ್ನೂ ಕೀಳುಮಟ್ಟದ್ದಿರಬಹುದು. ಯಾವುದೋ ಮನೋವ್ಯಾಧಿಯಿಂದ ಸ್ವಲ್ಪ ಬಿಡುಗಡೆ ಅಥವ ಪರಿಹಾರ ಪಡೆಯೋಣವೆಂದು ಬರುವ ಮೂಢರ ನಂಬುಗೆಯ ದುರುಪಯೋಗ. ಈ ಭಾವಾತೀತ ಅದ್ಭುತಗಳಲ್ಲಿ ಸತ್ಯದ ಮೂಲ ಸ್ವಲ್ಪವಿರಬಹುದು ಎಂದು ನಾನು ಒಪ್ಪದಿಲ್ಲ. ಆದರೆ ವಿಷಯದಲ್ಲಿ ಪ್ರವೇಶಿಸುತ್ತಿರುವ ರೀತಿಯೇ ತಪ್ಪು, ಅಲ್ಲಿ ಇಲ್ಲಿ ಚೂರು ಪ್ರಮಾಣಗಳಿ೦ದ ನಿರ್ಣಯಿಸಿದ ಸಿದ್ದಾಂತ ತಪ್ಪು ಎಂದು ತೋರುತ್ತದೆ,

ಈ ಪ್ರಪಂಚ ವೀಕ್ಷಣೆ ಮಾಡಿದ ಅನೇಕ ವೇಳೆ ಅಳೆಯಲಾರದ ಆಳದ ಗೂಢ ರಹಸ್ಯಗಳ ಭಾವನೆ ಮೂಡಿದೆ, ಅದನ್ನು ಅರ್ಥಮಾಡಿಕೊಳ್ಳುವ ಆಸಕ್ತಿಯೂ ನನಗೆ ಬರುತ್ತದೆ ಅದರೊಂದಿಗೆ ಲೀನವಾಗಿ, ಅದರ ಪೂರ್ಣಾನುಭವ ಪಡೆಯಬೇಕೆಂದು, ನಿಜವಾದ ಪ್ರತ್ಯಕಪ್ರಮಾಣವೆಂಬುದು ಇಲ್ಲವೆಂದು ನಾನು ಅರಿತಿದ್ದರೂ, ಆ ಗೂಡಾರ್ಥವನ್ನು ಗ್ರಹಿಸಲು ಪ್ರತ್ಯಕ್ಷ ಪ್ರಮಾಣದ ಮಾರ್ಗವಾದ ವಿಜ್ಞಾನದ ದಾರಿಯೊಂದೇ ಎಂದು ನನ್ನ ಭಾವನೆ. ಕಾಲ್ಪನಿಕ ದೃಷ್ಟಿ ಅನಿವಾಯ್ಯ, ಅತ್ಯವಶ್ಯವೆನ್ನುವುದಾದರೆ ಅದಕ್ಕೂ ಸಾಧ್ಯವಾದಷ್ಟು ವೈಜ್ಞಾನಿಕ ರೀತಿಯ ಮಿತಿ ಇರಬೇಕು.

ಗೂಢ ರಹಸ್ಯವೆಂದರೇನು ಎಂದು ನನಗೆ ತಿಳಿಯದು. ಅದನ್ನು ನಾನು ದೇವರು ಎನ್ನಲಾರೆ. ಏಕೆಂದರೆ ದೇವರು ಎಂದರೆ ನಾನು ನಂಬದಿರುವ ಅನೇಕ ವಿಷಯ ಅದರಲ್ಲಿ ಅಡಕವಾಗಿದೆ. ಯಾವ ದೇವರನ್ನೇ ಆಗಲಿ, ವಿಶ್ವ ಶಕ್ತಿಯನ್ನೇ ಆಗಲಿ ಮನುಷ್ಯತ್ವಾರೋಪಣದ ರೂಪಿನಲ್ಲಿ ಭಾವಿಸಲಾರೆ. ಅನೇಕರು ಮೇಲಿಂದ ಮೇಲೆ ಆ ರೀತಿ ಭಾವಿಸಿರುವುದು ನನಗೆ ಆಶ್ಚರ್ಯವನ್ನು ಂಟುಮಾಡಿದೆ. ದೇವರಿಗೊಂದು ವ್ಯಕ್ತಿತ್ವವಿದೆ ಎಂಬ ಭಾವನೆ ನನಗೆ ಸಮಂಜಸ ಕಾಣುವುದಿಲ್ಲ. ಬೌದ್ದಿಕ ದೃಷ್ಟಿ ಯಿಂದ ಏಕತ್ವವಾದ ಭಾವನೆಯನ್ನು ನಾನು ಸ್ವಲ್ಪ ಮಟ್ಟಿಗೆ ಮೆಚ್ಚಿದ್ದೇನೆ. ವೇದಾಂತದ ಅದ್ವಿತ ದರ್ಶನ- ನಾನು ಅದರ ಆಳ ಮತ್ತು ಜಟಿಲತೆಯನ್ನು ಅರ್ಥಮಾಡಿಕೊಂಡಿಲ್ಲವಾದರೂ ನನ್ನನ್ನು ಆಕರ್ಷಿಸಿದೆ. ಅಂತಹ ವಿಷಯಗಳಲ್ಲಿ ಕೇವಲ ಬೌದ್ದಿಕ ಮೆಚ್ಚುಗೆ ನನ್ನನ್ನು ಬಹುದೂರ ಕರೆ ದೊಯ್ಯಲಾರದು ಎಂದೂ ಅರಿತಿದ್ದೇನೆ. ಆದರೆ ವೇದಾಂತ ಮತ್ತು ಇತರ ಅದೇ ಬಗೆಯ ಪ್ರವೇಶಗಳು ಅನಂತದಲ್ಲಿನ ತಮ್ಮ ಅಸ್ಪಷ್ಟ ನಿರಾಕಾರ ದಾಳಿಗಳಿಂದ ನನಗೆ ಭಯೋತ್ಪಾದನೆಯನ್ನೂ ಮಾಡಿವೆ. ಪ್ರಕೃತಿಯ ವೈವಿಧ್ಯತೆ ಮತ್ತು ಪರಿಪೂರ್ಣತೆ ನನ್ನನ್ನು ಅನುಕ೦ಪಿಸಿ ಸ್ಫೂರ್ತಿಯ ಸಮರಸತೆಯನ್ನುಂಟುಮಾಡುತ್ತದೆ. ಪುರಾತನ ಭಾರತೀಯರ ಅಥವ ಗ್ರೀಕರ ಅಸಂಸ್ಕೃತ ವಿಶ್ವ ದೇವೈಕ್ಯ ವಾತಾವರಣದಲ್ಲಿ-ಆದರೆ ಅದರ ದೇವರು ಅಥವ ದೇವರುಗಳ ಭಾವನೆಯಿಲ್ಲದ ವಾತಾವರಣದಲ್ಲಿ ನಾನು ನಿರಾತಂಕವಾಗಿ ವಿರಮಿಸಿದ್ದೇನೆ.

ಜೀವನದಲ್ಲಿ, ತರ್ಕದೃಷ್ಟಿಯಿಂದ ದೃಢಪಡಿಸುವುದು ನನಗೆ ಕಷ್ಟವಾದರೂ ಒಂದು ಬಗೆಯ ನೈತಿಕಕಟ್ಟು ಅವಶ್ಯವೆಂದು ನನ್ನ ದೃಢನಂಬಿಕೆ, ಸನ್ಮಾರ್ಗದಲ್ಲಿ ಪ್ರವೃತ್ತರಾಗಿರೆಂದು ಗಾಂಧೀಜಿ ಒತ್ತಾಯಪಡಿಸುವುದು ನನಗೆ ಸಮ್ಮತವಿದೆ. ಪ್ರಾಯಶಃ ನಮ್ಮ ಸಾರ್ವಜನಿಕ ಜೀವನಕ್ಕೆ