ಪುಟ:ಭಾರತ ದರ್ಶನ.djvu/೩೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೊನೆಯ ಅಂಕ ೨

೩೪೩

ಜನಾಬ್ ಮಹಮ್ಮದ್ ಆಲಿ ಜಿನ್ನಾ ಭಾರತದ ರಾಜಕೀಯದಿಂದ ನಿವೃತ್ತಿಯಾಗಿ ಭಾರತ ಸಹ ಬಿಟ್ಟು ಇಂಗ್ಲೆಂಡಿನಲ್ಲಿ ನೆಲಸಹೋದನು.

೧೯೩೦ ರಲ್ಲಿ ನಡೆದ ಎರಡನೆಯ ಅಸಹಕಾರ ಚಳುವಳಿಯಲ್ಲಿ ೧೯೨೦-೨೩ ರಷ್ಟು ಅಲ್ಲದಿದ್ದರೂ ಮುಸ್ಲಿಮರ ಪಾತ್ರವು ಮಹತ್ವದ್ದಾಗಿಯೇ ಇತ್ತು. ಏನಿಲ್ಲೆಂದರೂ ಹತ್ತು ಸಾವಿರ ಜನರು ಸೆರೆಮನೆಗೆ ಬಂದಿದ್ದರು. ಶೇಕಡ ೯೫ರಷ್ಟು ಜನ ಮುಸ್ಲಿಮರೇ ಇರುವ ವಾಯವ್ಯ ಪ್ರಾಂತ್ಯವು ಈ ಚಳುವಳಿಯಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸಿತು. ಆ ಪ್ರಾಂತ್ಯದ ಪಠಾಣರ ಏಕೈಕ ನೆಚ್ಚಿನ ನಾಯಕಖಾನ್ ಅಬ್ದುಲ್ ಗಫಾರ್ ಖಾನರ ವ್ಯಕ್ತಿತ್ವವೂ ಮತ್ತು ಆತನ ಅದ್ಭುತ ಕಾರವೂ ಅದಕ್ಕೆ ಮುಖ್ಯ ಕಾರಣ, ಸದಾ ಕಲಹ ಪ್ರಿಯರೂ, ಕೋಪಿಷ್ಟರೂ ಅದ ಪಠಾನರನ್ನು ಶಾಂತಯುತ ರಾಜಕೀಯ ಮಾರ್ಗದಲ್ಲಿ ತಿರುಗಿಸಿ ಅಪಾರ ಕಷ್ಟ ಸಹಿಷ್ಣುಗಳನ್ನಾಗಿ ಮಾರ್ಪಡಿಸಿದ ಖಾನ್ ಅಬ್ದುಲ್ ಗಫಾರ ಖಾನರ ಕಾರ್ಯವು ಇತ್ತೀಚಿನ ಅದ್ಭುತ ಘಟನೆಗಳಲ್ಲಿ ಅತಿ ಮುಖ್ಯವಾದುದು. ಅವರು ಅನುಭವಿಸಿದ ಸಂಕಟವೂ ಅಸಹನೀಯವಿತ್ತು. ನೆನಸಿಕೊಂಡರೆ ಮೈನವಿರೇಳುತ್ತದೆ. ಆದರೂ ಸರಕಾರದ ಸೈನ್ಯದ ಮೇಲಾಗಲಿ, ಸರಕಾರಕ್ಕೆ ಬೆಂಬಲರಾಗಿ ನಿಂತ ಇತರರ ಮೇಲಾಗಲಿ ಈ ಪಠಾನರು ಯಾವ ಹಿಂಸಾಕೃತ್ಯವನ್ನೂ ನಡಸದೆ ಅದ್ಭುತ ಶಿಸ್ತನ್ನೂ ಆತ್ಮಸಂಯಮವನ್ನೂ ತೋರಿದರು. ಪಠಾನನಿಗೆ ತನ್ನ ಸಹೋದರನಿಗಿಂತ ತುಪಾಕಿಯ ಮೇಲೆ ಮಮತೆ ಹೆಚ್ಚು. ಉದ್ರೇಕಗೊಳ್ಳುವುದು ಸುಲಭ, ಸ್ವಲ್ಪ ಸಿಟ್ಟಿಗೆದ್ದರೆ ಸಾವೇ ಸಿದ್ದ ಎಂಬುದನ್ನು ಜ್ಞಾಪಿಸಿಕೊಂಡರೆ ಈ ಪರಿವರ್ತನೆ ಮತ್ತು ಸಂಯಮ ಒಂದು ವಿಚಿತ್ರ ಆಶ್ಚರ್ಯವೇ ಸರಿ.

ರ್ಖಾ ಅಬ್ದುಲ್ ಗಫಾರ್ ಖಾನರ ನೇತೃತ್ವದಲ್ಲಿ ವಾಯವ್ಯ ಪ್ರಾಂತ್ಯವೂ, ಇತರ ಕಡೆಗಳಲ್ಲಿ ರಾಜಕೀಯ ಜ್ಞಾನವುಳ್ಳ ಅನೇಕ ಮಧ್ಯಮ ವರ್ಗದ ಮುಸಲ್ಮಾನರೂ ಕಾಂಗ್ರೆಸ್ಸಿನಲ್ಲಿಯೇ ದೃಢವಾಗಿ ನಿಂತರು. ರೈತರಲ್ಲಿ ಮತ್ತು ಕೂಲಿಗಾರ ಮುಸ್ಲಿಮರಲ್ಲಿ ಕಾಂಗ್ರೆಸ್ ಪ್ರಭಾವವು ಹೆಚ್ಚು ಇತ್ತು, ಆದರೂ ಮುಸ್ಲಿಂ ಜನತೆಯಲ್ಲಿ ಬಹುಸಂಖ್ಯಾತರು ಹಿಂದೂಗಳಿಗಿಂತ ಹೆಚ್ಚಾಗಿ ತಾವೇ ಮುಸ್ಲಿಂ ಹಿತರಕ್ಷಕರೆಂದು ಬಂದ ತಮ್ಮ ಹಳೆಯ ಸ್ಥಳೀಯ ಮುಸ್ಲಿ೦ ಶ್ರೀಮಂತರ ನಾಯಕತ್ವದ ಕಡೆಗೇ ಒಲಿದರು.

ಅಲ್ಪ ಸಂಖ್ಯಾಕರ ಬೇಡಿಕೆಗಳಿಗೆ ಮನ್ನಣೆಕೊಟ್ಟು ಬಹು ಸಂಖ್ಯಾತರ ಕಾರ ನೀತಿಯಿಂದ ರಕ್ಷಿಸುವುದೇ ಕೋಮುವಾರು ಪ್ರಶ್ನೆಯಾಯಿತು. ಭಾರತದಲ್ಲಿನ ಅಲ್ಪ ಸಂಖ್ಯಾತರು ಯೂರೋಪಿನಲ್ಲಿರುವಂತೆ ಭಿನ್ನ ಜನಾಂಗ ಅಥವ ರಾಷ್ಟ್ರದವರಲ್ಲ, ಭಿನ್ನ ಧರ್ಮದವರು. ಜನಾಂಗ ದೃಷ್ಟಿಯಿಂದ ಭಾರತದಲ್ಲಿ ವಿಚಿತ್ರ ಕುಲ ಬೆರಕೆಯಾಗಿದೆ. ಭಾರತದಲ್ಲಿ ಜನಾಂಗ ಪ್ರಶ್ನೆ ಯಾವಾಗಲೂ ಎದ್ದೂ ಇಲ್ಲ. ಏಳುವಂತೆಯೂ ಇಲ್ಲ. ಧರ್ಮವು ಜನಾಂಗಪ್ರಶ್ನೆಯನ್ನು ಮಾರಿದ್ದು, ಜನಾಂಗಗಳ ಬೆರಕೆಯಾಗಿ ಅದನ್ನು ಗುರುತಿಸುವುದು ಸಹ ಕಷ್ಟವಾಗಿದೆ. ಮತಾಂತರ ಆಗುತ್ತಲೇ ಇರುವುದರಿಂದ ಧರ್ಮದ ಬಂಧನ ಶಾಶ್ವತವಾದುದಲ್ಲ. ಮತಾಂತರ ಹೊಂದಿದ ಮಾತ್ರಕ್ಕೆ ಆ ವ್ಯಕ್ತಿಯು ತನ್ನ ಜನಾಂಗ ಸಂಸ್ಕೃತಿ ಅಥವ ಭಾಷಾಸಂಪತ್ತನ್ನು ಕಳೆದುಕೊಳ್ಳುವುದಿಲ್ಲ. ಧರ್ಮದ ಹೆಸರನ್ನು ಎತ್ತಿಕೊಂಡು ಬಹಳ ಉಪಯೋಗಿಸುತ್ತಿದ್ದರೂ ಈಚೆಗೆ ಭಾರತದ ರಾಜ ಕೀಯದಲ್ಲಿ ಧರ್ಮಕ್ಕೆ ಯಾವ ಪ್ರಾಮುಖ್ಯತೆಯೂ ದೊರೆತಿಲ್ಲ. ಪರಸ್ಪರ ಧರ್ಮ ಸಹಿಷ್ಣುತೆ ಇರುವುದರಿಂದ ಧರ್ಮಭಿನ್ನತೆಯಿಂದ ಯಾವ ತೊಂದರೆಯೂ ಆಗಿಲ್ಲ. ರಾಜಕೀಯ ವಿಷಯಗಳಲ್ಲಿ ಧರ್ಮದ ಸೋಗಿನಲ್ಲಿ ಕೋಮುವಾರು ಭಾವನೆ ಬೆಳೆಯುತ್ತಿದೆ. ರಾಜಕೀಯ ಅಧಿಕಾರ ಮತ್ತು ಆ ಮೂಲಕ ತನ್ನ ಪಂಗಡದವರಿಗೆ ಸಹಾಯ ಮಾಡಬೇಕೆಂಬ ಸಂಕುಚಿತ ಭಾವನೆ ಬೆಳೆಯುತ್ತಿದೆ.

ಸಂಬಂಧ ಪಟ್ಟ ಎಲ್ಲ ಪಂಗಡಗಳನ್ನೂ ಸೇರಿಸಿ ಅವರ ಸಮ್ಮತಿಯಿಂದ ಈ ಕೋಮುವಾರು ಪ್ರಶ್ನೆ ಬಿಡಿಸಲು ಕಾಂಗ್ರೆಸ್ನ ಮತ್ತು ಇತರ ಸಂಸ್ಥೆಗಳೂ ಮೇಲಿಂದ ಮೇಲೆ ಪ್ರಯತ್ನ ಮಾಡಿದವು. ಕೆಲವು ಬಾರಿ ಸ್ವಲ್ಪ ಯಶಸ್ಫೂ ದೊರೆಯಿತು. ಆದರೆ ಇದ್ದ ಮುಖ್ಯ ತೊಂದರೆ ಎಂದರೆ ಬ್ರಿಟಿಷ್ ಸರಕಾರ ಮತ್ತು ಅದರ ನೀತಿ, ರಾಜಕೀಯ ಚಳವಳಿಗೆ ಬೆಂಬಲ ಕೊಟ್ಟು ತಮ್ಮ ವಿರುದ್ಧವಾಗಿ ಜನಶಕ್ತಿ ಹೆಚ್ಚಿಸುವ ಯಾವ ಒಪ್ಪಂದವನ್ನೂ ಅವರು ಸಹಿಸದಾದರು. ಅದೊಂದು ತ್ರಿಕೋಣ ಸಮಸ್ಯೆಯಾಗಿ ಅನುಕೂಲ