ಪುಟ:ಭಾರತ ದರ್ಶನ.djvu/೩೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೊನೆಯ ಅಂಕ ೨

೩೪೭

ಹುಟ್ಟಿ ಬೆಳೆದವರು. ಈ ರೀತಿ ಭಾರತದಲ್ಲಿ ಅನೇಕ ಪ್ರತಿಗಾಮಿ ಪಾಳೆಯಗಾರಿಕೆಯ ಶಕ್ತಿಗಳು ಇರುವುದು ಸ್ಪಷ್ಟವಾಯಿತು. ಅವರ ಸಂಖ್ಯೆ ಅಲ್ಪವಿದ್ದರೂ ಅವರಿಗೆ ಬ್ರಿಟಿಷರ ಪ್ರೋತ್ಸಾಹವಿತ್ತು.

ಮುಸ್ಲಿಂಲೀಗ್ ಅಲ್ಲದೆ ಮುಸ್ಲಿಮರಲ್ಲೇ ಅನೇಕ ಸಂಸ್ಥೆಗಳು ಹುಟ್ಟಿದವು. ಅವುಗಳಲ್ಲಿ ಭಾರತಾದ್ಯಂತ ಧರ್ಮಗುರುಗಳೂ, ಸಂಪ್ರದಾಯ ಶಿಷ್ಟ ಪಂಡಿತರೂ ಇದ್ದ ಜಮಾಯತ್-ಉಲ್-ಉಲೇಮ ಬಹಳ ಹಳೆಯದು ಮತ್ತು ಪ್ರಾಮುಖ್ಯವಾದುದು. ಅದರ ದೃಷ್ಟಿ ಸಾಂಪ್ರದಾಯಕವೂ ಧಾರ್ಮಿಕವೂ ಇದ್ದರೂ ರಾಜಕೀಯದಲ್ಲಿ ಮಾತ್ರ ಸಾಮ್ರಾಜ್ಯ ವಿರೋಧಿ ಮತ್ತು ಪ್ರಗತಿಪರ, ರಾಜಕೀಯದಲ್ಲಿ ಅನೇಕ ವೇಳೆ ಕಾಂಗ್ರೆಸ್ಸಿನೊಡನೆ ಸಹಕರಿಸಿತು. ಅವರಲ್ಲಿ ಅನೇಕರು ಕಾಂಗ್ರೆಸ್ ಸದಸ್ಯರೂ ಆಗಿ ಕಾಂಗ್ರೆಸ್ಸಿನಲ್ಲೇ ಕೆಲಸಮಾಡಿದರು. ಅಲ್ತಾರ್ ಸಂಸ್ಥೆ ಅನಂತರ ಹುಟ್ಟಿದರೂ ಪಂಜಾಬದಲ್ಲಿ ಪ್ರಬಲ ಸಂಸ್ಥೆಯಾಗಿತ್ತು, ಅವರೆಲ್ಲರೂ ಕಡಮೆ ಮಟ್ಟದ ಮಧ್ಯಮವರ್ಗದ ಮುಸ್ಲಿಮರಾದ್ದರಿಂದ ಮುಸ್ಲಿಂ ಜನತೆಯ ಬೆಂಬಲವಿತ್ತು, ನೇಕಾರರಾದ ಮೊಮಿನರು ಸಂಖ್ಯೆಯಲ್ಲಿ ಬಹಳ ಇದ್ದರೂ ತೀರ ಬಡವರೂ, ಹಿಂದುಳಿದವರೂ ಆದ ಕಾರಣ ಅವರು ಸುಸಂಘಟಿತರಿರಲಿಲ್ಲ. ಆದರೆ ಅವರೆಲ್ಲರೂ ಲೀಗ್ ವಿರೋಧಿಗಳು ಮತ್ತು ಕಾಂಗ್ರೆಸ್ ಪ್ರೇಮಿಗಳು. ಶಕ್ತಿ ಇಲ್ಲದ್ದರಿಂದ ರಾಜಕೀಯದಿಂದ ದೂರವಿದ್ದರು. ಬಂಗಾಲದಲ್ಲಿ ಕೃಷಿಕ ಸಭೆ ಇತ್ತು. ಜಮಾಯತ್ -ಉಲ್-ಉಲೇಮಾ ಮತ್ತು ಆಹ್ಮಾರ್ ಸದಸ್ಯರು ಅನೇಕಬಾರಿ ಕಾಂಗ್ರೆಸ್ ಕೆಲಸದಲ್ಲಿ ಚಳವಳಿಗಳಲ್ಲಿ ಸಹಕರಿಸಿ ಬ್ರಿಟಿಷ್ ಸರ್ಕಾರದೊಂದಿಗೆ ಹೋರಾಡಿ ಕಷ್ಟನಷ್ಟ ಅನುಭವಿಸಿದರು. ಮಾತಿನಲ್ಲಿ ಬಿಟ್ಟು ಬೇರೆ ಯಾವ ರೀತಿಯಲ್ಲೂ ಬ್ರಿಟಿಷರೊಂದಿಗೆ ಹೋರಾಡದ ಪ್ರಮುಖ ಮುಸ್ಲಿಂ ಸಂಸ್ಥೆ ಎಂದರೆ ಮುಸ್ಲಿಂ ಲೀಗ್ ಒಂದೇ. ಮೊದಲಿನಿಂದ ಕೊನೆಯವರೆಗೆ ಎಲ್ಲ ಸಮಯ ಸಂದರ್ಭಗಳಲ್ಲಿ ಮತ್ತು ಅದರ ಸದಸ್ಯ ಸಂಖ್ಯೆ ವಿಶೇಷ ಬೆಳೆದಾಗ ಸಹ ಅದರ ನಾಯಕತ್ವ ಮಾತ್ರ ಶ್ರೀಮಂತರ ಕೈಯಲ್ಲೇ ಇತ್ತು.

ಷಿಯಾ ಮುಸ್ಲಿಮರದೇ ಪ್ರತ್ಯೇಕ ಸಂಸ್ಥೆ ಇತ್ತು. ಅದರ ಉದ್ದೇಶವು ರಾಜಕೀಯ ಬೇಡಿಕೆಗಳನ್ನು ಮುಂದಿಡುವುದೇ ಆಗಿತ್ತು. ಇಸ್ಲಾಮಿನ ಆರಂಭ ದಿನಗಳಲ್ಲಿ ಅರೇಬಿಯಾದಲ್ಲಿ ಖಿಲಾಫತ್ ಉತ್ತರಾಧಿ ಕಾರ ವಿಷಯ ದೊಡ್ಡ ವ್ಯಾಜ್ಯ ಹುಟ್ಟಿ ಸುನ್ನಿ ಮತ್ತು ಷಿಯಾ ಎಂದು ಎರಡು ಪಂಗಡಗಳಾದವು. ಈ ಒಡಕಿನಲ್ಲಿ ಈಗ ಬೇರೆ ರಾಜಕೀಯ ಯಾವುದೂ ಇಲ್ಲದಿದ್ದರೂ ಎರಡೂ ಪ್ರತ್ಯೇಕ ಉಳಿದಿವೆ. ಇರಾಣ ಬಿಟ್ಟರೆ ಭಾರತದಲ್ಲಿ ಮತ್ತು ಇತರ ಮುಸ್ಲಿಂ ರಾಷ್ಟ್ರಗಳಲ್ಲಿ ಸುನ್ನಿಗಳೇ ಬಹು ಸಂಖ್ಯಾಕರು, ಇರಾಣದಲ್ಲಿ ಷಿಯಾಗಳು ಬಹು ಸಂಖ್ಯಾಕರು. ಈ ಎರಡು ಪಂಗಡಗಳಿಗೂ ಹೊಡೆದಾಟಗಳಾಗಿವೆ. ಭಾರತದಲ್ಲಿ ಷಿಯಾ ಸಂಸ್ಥೆ ಲೀಗಿನಿಂದ ಭಿನ್ನಾಭಿಪ್ರಾಯ ಹೊಂದಿ ದೂರ ನಿಂತಿತು. ಸಂಯುಕ್ತ ಚುನಾವಣಾ ಪದ್ದತಿಗೆ ಅದು ಬೆಂಬಲಕೊಟ್ಟಿತು. ಆದರೆ ಲೀಗಿನಲ್ಲೂ ಕೆಲವರು ಪ್ರಮುಖ ಹಿಯಾಗಳಿದ್ದಾರೆ.

ಮುಸ್ಲಿಂಲೀಗ್ ಒಂದನ್ನು ಬಿಟ್ಟು ಈ ಎಲ್ಲ ಸಂಸ್ಥೆಗಳು ಮತ್ತು ಇನ್ನು ಕೆಲವರು ಅಜಾದ್ ಮುಸ್ಲಿಂ ಸಮ್ಮೇಲನ ಸೇರಿಸಿ ಮುಸ್ಲಿಂ ಲೀಗಿಗೆ ವಿರೋಧ ಪಕ್ಷ ಒಂದನ್ನು ಕಟ್ಟಿದರು. ೧೯೪೦ ನೆಯ ಡಿಸೆಂಬರ್ ನಲ್ಲಿ ನಡೆದ ಅದರ ಪ್ರಥಮ ಸಮ್ಮೇಲನದಲ್ಲಿ ಒಳ್ಳೆಯ ಪ್ರಾತಿನಿಧ್ಯವಿದ್ದು ಅಧಿವೇಶನವು ತುಂಬ ಯಶಸ್ವಿಯಾಗಿ ಕೊನೆಗಂಡಿತು.

ಮುಸ್ಲಿಂ ಲೀಗಿಗೆ ಪ್ರತಿಯಾಗಿ ಹಿಂದೂಗಳ ಮುಖ್ಯ ಕೋಮುವಾರು ಸಂಸ್ಥೆ ಹಿಂದೂ ಮಹಾಸಭೆ, ಆದರೆ ಅದಕ್ಕೆ ಅಷ್ಟು ಪ್ರಾಮುಖ್ಯತೆ ಇಲ್ಲ. ಲೀಗಿನಂತೆ ಅದು ಸಹ ಉಗ್ರ ಕೋಮುವಾರು ಭಾವನೆಯ ಸಂಸ್ಥೆ. ಆದರೆ ತನ್ನ ಸಂಕುಚಿತ ಕೋಮುವಾರು ನೀತಿಗೆ ರಾಷ್ಟ್ರೀಯ ಸೋಗನ್ನು ಕೊಡಲು ಪ್ರಯತ್ನ ಮಾಡುತ್ತಿದೆ; ಅದರ ದೃಷ್ಟಿ ಎಲ್ಲ ಪ್ರಗತಿಗಿಂತ ಹೆಚ್ಚಾಗಿ ಪುನರುಜ್ಜಿವನದ ಕಡೆಗೆ ಮುಸ್ಲಿಂ ಲೀಗ್ ಮುಖಂಡರಂತೆ ಹಿಂದೂ ಮಹಾಸಭೆಯ ನಾಯಕರೂ ಜವಾಬ್ದಾರಿ ಇಲ್ಲದ ಆವೇಶಪೂರಿತ ಭಾಷಣ ಗಳನ್ನು ಮಾಡುತ್ತಿರುವುದು ಬಹು ಶೋಚನೀಯ. ಎರಡು ಕಡೆಯೂ ವಾಗ್ಯುದ್ದಗಳು; ಸದಾ ಜಗಳಕ್ಕೆ ಕಾಲುಕೆರೆಯುತ್ತಿವೆ. ಅದೇ ಒಂದು ಯುದ್ದವೂ ಆಗಿದೆ.

ಮುಸ್ಲಿಂ ಲೀಗಿನ ಕೋಮುವಾರು ನೀತಿಯು ಮೊದಲಿನಿಂದಲೂ ಮೊಂಡುತನದ್ದು.. ಆದರೆ ಹಿಂದೂ ಮಹಾಸಭೆ ಏನೂ ಕಡಮೆ ಇಲ್ಲ. ಪಂಜಾಬ್ ಮತ್ತು ಸಿಂಧ ಹಿಂದೂಗಳಿಗೆ ಮತ್ತು ಸೀಖರಿಗೆ ಚಿತಾವಣೆ