ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೩೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೪೮
ಭಾರತ ದರ್ಶನ

ಮಾಡಿ ಯಾವ ಒಪ್ಪಂದಕ್ಕೂ ಅವಕಾಶ ಕೊಡಲಿಲ್ಲ. ಕಾಂಗ್ರೆಸ್ಸಿಗೆ ವಿರೋಧವಾಗಿ ಈ ಕೋಮುವಾರು ಸಂಸ್ಥೆಗಳಿಗೆ ಪ್ರಾಮುಖ್ಯತೆ ಕೊಟ್ಟು ಪ್ರೋತ್ಸಾಹಿಸಿ ಭಿನ್ನತೆ ಬೆಳೆಸುವುದೇ ಬ್ರಿಟಿಷ್‌ ನೀತಿಯಾಯಿತು.

ಯಾವುದೇ ಪಂಗಡ ಅಥವ ಪಕ್ಷದ ಪ್ರಾಮುಖ್ಯತೆ ಅಥವ ಜನ ಬೆಂಬಲ ಕಂಡು ಹಿಡಿಯಲು ಚುನಾವಣೆಗಳೇ ಪರಮೋಪಾಯ, ೧೯೩೭ ರ ಸಾರ್ವತ್ರಿಕ ಚುನಾವಣೆಗಳಲ್ಲಿ ಹಿಂದೂ ಮಹಾಸಭೆಗೆ ಯಾವ ಬೆಂಬಲವೂ ದೊರೆಯಲಿಲ್ಲ. ಮುಸ್ಲಿಂ ಲೀಗ್ ಅದಕ್ಕಿಂತ ಸ್ವಲ್ಪ ಉತ್ತಮವಾದರೂ ಮುಸ್ಲಿಮರೇ ಬಹು ಸಂಖ್ಯಾಕರಿದ್ದ ಪ್ರಾಂತ್ಯಗಳಲ್ಲಿ ಅದಕ್ಕೆ ಬೆಂಬಲ ಸಿಗಲಿಲ್ಲ. ಪಂಜಾಬ್ ಮತ್ತು ಸಿಂಧ ಪ್ರಾಂತ್ಯಗಳಲ್ಲಿ ಅದಕ್ಕೆ ಪೂರ್ಣ ಸೋಲಾಯಿತು ; ಬಂಗಾಲದಲ್ಲಿ ಕೆಲ ಮಟ್ಟಿಗೆ ಜಯ ಪಡೆಯಿತು. ವಾಯವ್ಯ ಪ್ರಾಂತ್ಯದಲ್ಲಿ ಸ್ವಲ್ಪ ಕಾಲಾನಂತರ ಕಾಂಗ್ರೆಸ್ ಮಂತ್ರಿಮಂಡಲವೇರ್ಪಟ್ಟಿತು. ಮುಸ್ಲಿಮರು ಅಲ್ಪ ಸಂಖ್ಯಾತರಿದ್ದ ಪ್ರಾಂತ್ಯಗಳಲ್ಲಿ ಹೆಚ್ಚಿನ ಜಯ ದೊರಕಿತು. ಆದರೆ ಅಲ್ಲಿಯೂ ಲೀಗ್ ಮುಸ್ಲಿಂರಲ್ಲದೆ ಸ್ವತಂತ್ರ ಮುಸ್ಲಿ ಮರೂ ಕಾಂಗ್ರೆಸ್ ಮುಸ್ಲಿಮರೂ ಜಯಪಡೆದರು.

ಈಗ ಕಾಂಗ್ರೆಸ್ ಪ್ರಾಂತ ಸರಕಾರಗಳಮೇಲೆ ಮತ್ತು ಕಾಂಗ್ರೆಸ್ ಸಂಸ್ಥೆಯಮೇಲೆ ಮುಸ್ಲಿಂ ಲೀಗಿನ ವಿಚಿತ್ರ ದೋಷಾರೋಪಣೆ ಆರಂಭವಾಯಿತು. ಈ ಸರಕಾರಗಳು ಮುಸ್ಲಿಮರಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆಂದು ನಿತ್ಯನಿಂದೆ ಆರಂಭವಾಯಿತು. ಈ ಸರಕಾರಗಳಲ್ಲಿ ಮುಸಲ್ಮಾನ್ ಮಂತ್ರಿಗಳೂ ಇದ್ದರು, ಆದರೆ ಅವರು ಮುಸ್ಲಿಂ ಲೀಗಿನವರಾಗಿರಲಿಲ್ಲ. ಈ ದೌರ್ಜನ್ಯಗಳು ಏನೆಂದು ಯಾರೂ ಬಹಿರಂಗಪಡಿಸಲು ಸಿದ್ಧರಿರಲಿಲ್ಲ. ಸರಕಾರಕ್ಕೆ ಏನು ಸಂಬಂಧವಿಲ್ಲದ ಕೆಲವು ಸ್ಥಳೀಯ ಅಲ್ಪ ವಿಷಯಗಳನ್ನೇ ಬೆಟ್ಟದಷ್ಟು ಬೆಳೆಸುತ್ತಿದ್ದರು. ಕೆಲವು ಇಲಾಖೆಗಳ ಸಣ್ಣ ತಪ್ಪು ಸರಿಪಡಿಸಿದರೆ ಅವೂ ದೌರ್ಜನ್ಯಗಳಾಗಿ ಬಿಡುತ್ತಿದ್ದವು. ಕೆಲವುವೇಳೆ ಏನೂ ಆಧಾರವಿಲ್ಲದ ಸುಳ್ಳು ಆಪಾದನೆ ಮಾಡುತ್ತಿದ್ದರು. ಯಾವ ವಾಸ್ತವಿಕ ಅಂಶವೂ ಇಲ್ಲದ ಉತ್ಪಕ್ಷಿತ ವರದಿಯೂ ಒಂದು ಹೊರಬಿದ್ದಿತು. ಈ ಆಪಾದನೆ ಮಾಡಿದವರಿಗೆ ಕಾಂಗ್ರೆಸ್ ಸರಕಾರಗಳು ವಿಚಾರಣೆ ನಡೆಸಲು ಬಂದು ಸಹಾಯಮಾಡಿರೆಂದೂ, ಅಥವ ಸರಕಾರದ ಸಹಾಯ ಪಡೆದು ಅವರೇ ವಿಚಾರಮಾಡಬಹುದೆಂದೂ ಆಹ್ವಾನಿಸಿದವು. ಆದರೂ ಯಾರೂ ಈ ಅವಕಾಶ ಉಪಯೋಗಿಸಿಕೊಳ್ಳಲಿಲ್ಲ. ಆದರೆ ಅಪಪ್ರಚಾರ ಮಾತ್ರ ನಿಲ್ಲಲಿಲ್ಲ. ಕಾಂಗ್ರೆಸ್ ಮಂತ್ರಿಮಂಡಲಗಳು ರಾಜಿ ನಾಮಕೊಟ್ಟನಂತರ ಆಗ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಡಾಕ್ಟರ್ ರಾಜೇಂದ್ರ ಪ್ರಸಾದರು ಕಾಂಗ್ರೆಸ್ ಸರಕಾರಗಳ ಮೇಲಿನ ಆರೋಪಣೆಗಳನ್ನು ವಿಚಾರಣೆಮಾಡಿ ತೀರ್ಮಾನಕೊಡಲು ಫೆಡರಲ್ ನ್ಯಾಯಾಲಯದ ಮುಂದೆ ತರಬೇಕೆಂದು ಜನಾಬ್ ಜಿನ್ನಾ ರವರಿಗೆ ಪತ್ರಬರೆದು ಒಂದು ಬಹಿರಂಗ ಹೇಳಿಕೆ ಕೊಟ್ಟರು. ಜಿನ್ನಾ ಇದನ್ನು ನಿರಾಕರಿಸಿ ರಾಯಲ್ ಕಮಿಷನ್ ಒಂದು ನೇಮಕವಾಗಲಿದೆ ಎಂದರು. ಅದು ಬ್ರಿಟಿಷ್ ಸರಕಾರದಿಂದ ಮಾತ್ರ ಸಾಧ್ಯವಿತ್ತು. ಆದರೆ ಅಂತಹ ಸಮಿತಿಯ ನೇಮಕಕ್ಕೆ ಅವಕಾಶವೇ ಇರಲಿಲ್ಲ. ಕಾಂಗ್ರೆಸ್ ಸರಕಾರಗಳು ಅಧಿಕಾರದಲ್ಲಿದ್ದಾಗ ಕೆಲವು ಬ್ರಿಟಿಷ್ ಗವರ್ನರುಗಳೇ ಅಲ್ಲ ಸಂಖ್ಯಾತರ ವಿಷಯದಲ್ಲಿ ಕಾಂಗ್ರೆಸ್ ಸರಕಾರಗಳ ನಡತೆ ದೋಷಾತೀತವಿತ್ತೆಂದು ಬಹಿರಂಗವಾಗಿ ಸಾರಿದ್ದರು. ೧೯೩೫ನೆಯ ಭಾರತ ಸರಕಾರ ಶಾಸನದಂತೆ ಅವಶ್ಯವಿದ್ದರೆ ಅಲ್ಪಸಂಖ್ಯಾಕರ ರಕ್ಷಣೆಗೆಂದು ಅವರು ವಿಶೇಷ ಅಧಿಕಾರ ಉಪಯೋಗಿಸಬಹುದಾಗಿತ್ತು.

ಹಿಟ್ಲರ್ ಅಧಿಕಾರಕ್ಕೆ ಬಂದಂದಿನಿಂದ ನಾಜಿಗಳ ಪ್ರಚಾರನೀತಿಯನ್ನು ನಾನು ಸೂಕ್ಷ್ಮವಾಗಿ ಪರಿಶೀಲನೆಮಾಡಿದ್ದೆ. ಭಾರತದಲ್ಲಿನ ಮುಸ್ಲಿಂಲೀಗ್ ಚಳುವಳಿಗೂ ನಾಜಿ ಪ್ರಚಾರಕ್ಕೂ ಬಹಳ ಹೋಲಿಕೆ ಇತ್ತು. ಒಂದು ವರ್ಷದನಂತರ ೧೯೩೮ರಲ್ಲಿ ಜೆಕೊಸೊವೇಕಿಯಾದಲ್ಲಿ ಸುಡೆಟನ್‌ಲ್ಯಾಂಡ್ ಸಮಸ್ಯೆ ಒದಗಿದಾಗ ಮುಸ್ಲಿಂಲೀಗ್ ನಾಯಕರು ಆ ನಾಜಿಪ್ರಚಾರರೀತಿ ನೀತಿಯನ್ನು ಅಭ್ಯಾಸಮಾಡಿ ತಮ್ಮ ಮೆಚ್ಚುಗೆ ವ್ಯಕ್ತಗೊಳಿಸಿದರು. ಸುಡೆರ್ಟಲ್ಯಾಂಡಿನ ಜರ್ಮನರೊಂದಿಗೆ ಭಾರತೀಯ ಮುಸ್ಲಿಮರನ್ನು ಹೋಲಿಸಿದರು. ಭಾಷಣಗಳಲ್ಲಿ ಮತ್ತು ವರ್ತಮಾನ ಪತ್ರಿಕೆಗಳಲ್ಲಿ ಹಿಂಸೆಗೆ ಪ್ರೇರಣೆಯೂ ಚಿತಾವಣೆಯೂ ಅಧಿಕವಾಯಿತು, ಒಬ್ಬ-ಕಾಂಗ್ರೆಸ್ ಮುಸ್ಲಿಂ ಮಂತ್ರಿಯನ್ನು ಚೂರಿಯಿಂದ ತಿವಿದರೂ ಯಾವ ಮುಸ್ಲಿಂ