ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೩೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಕೊನೆಯ ಅಂಕ ೨
೩೪೯

ಲೀಗ್ ಮುಖಂಡನೂ ಅದನ್ನು ಖಂಡಿಸಲಿಲ್ಲ. ಅದಕ್ಕೆ ಪ್ರತಿಯಾಗಿ ಆತನಿಗೆ ಅವರ ಮೆಚ್ಚಿಗೆ ದೊರೆ ಯಿತು; ಇತರ ಹಿಂಸಾತ್ಮಕ ಪ್ರದರ್ಶನಗಳೂ ಹೆಚ್ಚಿದವು.

ಈ ಎಲ್ಲ ಘಟನೆಗಳಿಂನ ನನಗೆ ಬಹಳ ದುಃಖವಾಯಿತು, ನಮ್ಮ ಸಾರ್ವಜನಿಕ ನೀತಿಯು ಈ ರೀತಿ ಅಧೋಗತಿಗೆ ಇಳಿಯುವುದನ್ನು ಕಂಡು ಬೇಸರವಾಯಿತು. ಹಿಂಸೆ, ಅಸಭ್ಯ ವರ್ತನೆ, ಮತ್ತು ಬೇಜವಾಬ್ದಾರಿ ಅಧಿಕವಾಗುತ್ತಿತ್ತು. ಮುಸ್ಲಿಂಲೀಗಿನ ಪ್ರಮುಖ ವ್ಯಕ್ತಿಗಳು ಇದಕ್ಕೆ ಪ್ರೋತ್ಸಾಹಕೊಡುವಂತೆ ಕಂಡಿತು. ಈ ಅಧೋಗತಿ ತಡೆಗಟ್ಟರೆಂದು ಕೆಲವು ಮುಸ್ಲಿಂ ನಾಯಕರಿಗೆ ನಾನು ಪತ್ರಬರೆದು ಕೇಳಿದೆ; ಆದರೆ ಅದರಿಂದ ಯಾವ ಫಲಿತಾಂಶವೂ ಆಗಲಿಲ್ಲ. ಕಾಂಗ್ರೆಸ್ ಸರಕಾರಗಳು ಪ್ರತಿಯೊಂದು ಅಲ್ಪಸಂಖ್ಯಾತ ಪಂಗಡವನ್ನೂ ಒಲಿಸಿಕೊಳ್ಳಲು ವಿಶ್ವ ಪ್ರಯತ್ನ ಮಾಡಿದವು. ಇತರ ಅಲ್ಪಸಂಖ್ಯಾತರನ್ನು ಅಲಕ್ಷ್ಯಮಾಡಿ ಮುಸ್ಲಿಂಲೀಗಿಗೆ ಪಕ್ಷಪಾತನಾಡುತ್ತಿದ್ದಾರೆಂಬ ದೂರು ಸಹ ಬಂದಿತು. ಯಾವುದಾದರೂ ನಿರ್ದಿಷ್ಟವಾದ ತೊಂದರೆಯಾದರೆ, ಅಥವಾ ಯಾವುದಾದರೂ ನಿರ್ದಿಷ್ಟ ವಿಷಯದ ಕಾರಣಬದ್ದ ಪಲ್ಯಾ ಲೋಚನೆಯಾದರೆ ಸರಿ. ಆದರೆ ಮುಸ್ಲಿಮರಿಗೆ ಏನೋ ಅನಾಹುತವಾಗುತ್ತಿದೆ ಎಂದೂ, ಅದಕ್ಕೆ ಕಾಂಗ್ರೆಸ್ಸೇ ಕಾರಣವೆಂದೂ ಮುಸ್ಲಿಮರಲ್ಲಿ ಒಂದು ಭಯೋತ್ಪಾದನೆ ಮಾಡುವುದೇ ಮುಸ್ಲಿಂಲೀಗ್ ಸದಸ್ಯರ ಗುರಿಯಾಗಿತ್ತು. ಆ ಅನಾಹುತ ಏನೆಂದು ಯಾರೂ ಹೇಳಲು ಸಿದ್ಧರಿರಲಿಲ್ಲ. ಆದರೆ ಇಲ್ಲಿ ಅಲ್ಲದಿದ್ದರೆ ಎಲ್ಲಾದರೂ ಈ ಕೂಗು ಮತ್ತು ದೂಷಣೆಯ ಹಿಂದೆ ಏನಾದರೂ ಉದ್ದೇಶ ಇರಬೇಕು. ಉಪಚು ನಾವಣೆಗಳಲ್ಲಿ “ಇಸ್ಲಾಂ ಧರ್ಮಕ್ಕೆ ಗಂಡಾಂತರ” ಎಂಬ ಕೂಗು ಎದ್ದಿತು. ಮುಸ್ಲಿಂಲೀಗ್ ಉಮೇದು ವಾರರಿಗೇ ಮತಕೊಡಬೇಕೆಂದು “ಖುರಾನ್” ಹಿಡಿದು ಪ್ರಮಾಣಮಾಡಿಸಿದರು.

ಈ ಎಲ್ಲ ಕಾರ್ಯಕ್ರಮಗಳು ಮುಸ್ಲಿಂ ಜನತೆಯ ಮೇಲೆ ತುಂಬ ದುಷ್ಪರಿಣಾಮ ಮಾಡಿದವು. ಆದರೂ ಅನೇಕರು ಈ ಬಲೆಗೆ ಬೀಳಲಿಲ್ಲ. ಉಪಚುನಾವಣೆಗಳಲ್ಲಿ ಲೀಗಿಗೆ ಹೆಚ್ಚು ಜಯ ದೊರೆತರೂ ಕೆಲವು ಕಡೆ ಸೋತರು. ಅವರು ಗೆದ್ದ ಕಡೆಗಳಲ್ಲೂ ಕಾಂಗ್ರೆಸ್ಸಿನ ರೈತ ಚಳವಳಿಯಿಂದ ಮುಸ್ಲಿಂ ಲೀಗಿಗೆ ವಿರೋಧ ಮತಕೊಟ್ಟವರು ಅಲ್ಪಸಂಖ್ಯಾತರಿದ್ದರೂ ಆ ಪ್ರಮಾಣ ಕಡಮೆ ಇರಲಿಲ್ಲ. ಆದರೆ ಮುಸ್ಲಿಂ ಲೀಗಿಗೆ ಜನತೆಯ ಬೆಂಬಲ ದೊರೆತು ಮುಸ್ಲಿಂ ಸಾಮಾನ್ಯರ ಸಂಸ್ಥೆ ಯಾಗಲು ಇದೇ ಆರಂಭ, ಇದುವರೆಗಿನ ಅದರ ನೀತಿ ನನಗೆ ಸರಿಬೀಳದಿದ್ದರೂ, ಇನ್ನು ಮೇಲಾದರೂ ಪ್ರತಿಗಾಮಿ ಶ್ರೀಮಂತರ ಕೈವಾಡತಪ್ಪಿ ಪ್ರಗತಿ ಪರ ವ್ಯಕ್ತಿಗಳ ನಾಯಕತ್ವದಲ್ಲಿ ಲೀಗು ಮುಂದುವರಿಯಬಹುದೆಂದು ಈ ಪರಿವರ್ತನೆಯನ್ನು ಸ್ವಾಗತಿಸಿದೆ. ಮುಸ್ಲಿಮರು ರಾಜಕೀಯ ಮತ್ತು ಸಾಮಾಜಿಕ ದೃಷ್ಟಿಯಿಂದ ಬಹಳ ಹಿಂದೆಬಿದ್ದಿದ್ದರಿಂದ ಪ್ರತಿಗಾಮಿ ವ್ಯಕ್ತಿಗಳು ಅವರನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದುದೇ ದೊಡ್ಡ ತೊಂದರೆಯಾಗಿತ್ತು.

ಮುಸ್ಲಿಂ ಲೀಗಿನ ಇತರ ಎಲ್ಲ ನಾಯಕರಿಗಿಂತ ಜನಾಬ್ ಜಿನ್ನಾ ತುಂಬ ಪ್ರಗತಿಪರ ವ್ಯಕ್ತಿ, ಅವರಲ್ಲರಿಗಿಂತ ಅತ್ಯುನ್ನತ ವ್ಯಕ್ತಿ, ಆದ್ದರಿಂದ ಆತನ ನಾಯಕತ್ವವಿಲ್ಲದೆ ಲೀಗ್ ಮುಂದುವರಿಯುವಂತೆ ಇರಲಿಲ್ಲ. ಅನೇಕವೇಳೆ ತನ್ನ ಸಹೋದ್ಯೋಗಿಗಳ ಸ್ವಾರ್ಥ ಮತ್ತು ಅಯೋಗ್ಯತೆಯನ್ನು ಅನೇಕ ಬಾರಿ ಬಹಿರಂಗ ಸಭೆಗಳಲ್ಲೇ ತಿಳಿಸಿದ್ದನು. ಮುಸ್ಲಿಮರಲ್ಲಿ ಪ್ರಗತಿಪರ ಮನೋಭಾವದ ನಿಃಸ್ವಾರ್ಥಿಗಳೂ, ಧೈರ್ಯ ಶಾಲಿಗಳೂ ಆದವರನೇಕರು ಕಾಂಗ್ರೆಸ್ ಸೇರಿ ಕೆಲಸ ಮಾಡುತ್ತಿದ್ದುದು ಆತನಿಗೆ ತಿಳಿದಿತ್ತು. ಆದರೂ, ಯಾವುದೋ ಅವ್ಯಕ್ತ ಶಕ್ತಿ ಅಥವ ಸನ್ನಿವೇಶವು ಯಾರ ಮೇಲೆ ಆತನಿಗೆ ಗೌರವವಿರಲಿಲ್ಲವೋ ಅವರಿಗೇ ಆತನನ್ನು ನಾಯಕನನ್ನಾಗಿ ಮಾಡಿತ್ತು. ಆತನು ಅವರ ನಾಯಕನಾದರೂ ಅವರ ಪ್ರತಿಗಾಮಿ ಭಾವನೆ ಗಳಿಗೆ ತಾನು ಬಲಿಯಾಗಿ ತಲೆ ತಗ್ಗಿಸಿ ಮಾತ್ರ ಅವರನ್ನು ಒಟ್ಟಿಗೆ ಹಿಡಿತದಲ್ಲಿಟ್ಟು ಕೊಳ್ಳಲು ಸಾಧ್ಯವಿತ್ತು. ಆರೀತಿ ಬಲಿಬಿದ್ದುದು ಆತನಿಗೆ ಇಷ್ಟವಿರಲಿಲ್ಲವೆಂದಲ್ಲ. ಹೊರಗಡೆ ಆತನು ಅತ್ಯಾಧುನಿಕ ವ್ಯಕ್ತಿಯಂತ ಕಂಡರೂ ಆತನ ಭಾವನೆಗಳೆಲ್ಲ ಆಧುನಿಕ ರಾಜಕೀಯ ಭಾವನೆಗಳಿಗೆ ಮತ್ತು ಪ್ರಗತಿಗೆ ದೂರವಾದ ಕಂದಾಚಾರದ ಭಾವನೆಗಳು, ಇಂದಿನ ಪ್ರಪಂಚವನ್ನೇ ಆವರಿಸಿದ ಆರ್ಥಿಕ ಸಮಸ್ಯೆಯ ಕಲ್ಪನೆ ಆತನಿಗೆ ತೀರ ಅಪರಿಚಿತವಿದ್ದಂತೆ ಕಂಡಿತು. ಮೊದಲನೆಯ ಪ್ರಪಂಚ ಯುದ್ಧದ ನಂತರ ಪ್ರಪಂಚದಲ್ಲಿ ಎಲ್ಲೆಡೆಯಲ್ಲೂ ಆದ ಅದ್ಭುತ ಪರಿವರ್ತನೆಗಳು ಆತನ ಮೇಲೆ ಯಾವ ಪರಿಣಾಮವನ್ನೂ ಮಾಡಲಿಲ್ಲ. ಕಾಂಗ್ರೆಸ್ಸು