ರಾಜಕೀಯದಲ್ಲಿ ಒಂದು ಹೆಜ್ಜೆ ಮುಂದೆ ಇಟ್ಟಾಗಲೇ ಆತ ಕ್ರಾಂಗ್ರೆಸ್ಸನ್ನು ಬಿಟ್ಟಿದ್ದು, ಕಾಂಗ್ರೆಸ್ ತನ್ನ ಆರ್ಥಿಕ ನೀತಿಯನ್ನು ಮುಂದುವರಿಸಿ ಜನತೆಯ ಸಂಸ್ಥೆ ಆದಂತೆಲ್ಲ ಈ ಅಂತರ ಇನ್ನೂ ಹೆಚ್ಚುತ್ತ ಬಂದಿತು. ಆದರೆ ಜಿನ್ನಾ ಮಾತ್ರ ಒಂದು ತಲೆಮಾರಿಗೆ ಮುಂಚೆ ಎಲ್ಲಿದ್ದನೋ ಅಲ್ಲಿಯೇ ನಿಂತ. ನಿಜವೆಂದರೆ ಇನ್ನೂ ಒಂದು ಹೆಜ್ಜೆ ಹಿಂದೆ ಹೋಗಿದ್ದ. ಏಕೆಂದರೆ ಈಗ ಆತನು ಭಾರತದ ಐಕ್ಯತೆಯನ್ನೂ ವಿರೋಧಿಸಿದ, ಪ್ರಜಾ ಸ್ವಾತಂತ್ರವನ್ನೂ ವಿರೋಧಿಸಿದ. “ಪಾಶ್ಚಿಮಾತ್ಯ ಪ್ರಜಾಪ್ರಭುತ್ವದ ತಿಳಿಗೇಡಿತನದ ಆಧಾರದ ಮೇಲೆ ರಚಿತವಾದ ಯಾವ ಸರ್ಕಾರ ಪದ್ದತಿಯಲ್ಲೂ ನಾವು ಜೀವಿಸಲು ಒಪ್ಪುವುದಿಲ್ಲ” ಎಂದು ಹೇಳಿದ. ಅದುವರೆಗೆ ಯಾವ ತತ್ರ್ಯಕ್ಕಾಗಿ ನಿಂತು ತನ್ನ ಜೀವನದ ಬಹುಭಾಗ ಸವೆಸಿದ್ದನೋ ಅದೆಲ್ಲ ವ್ಯರ್ಥವೆಂದು ತಿಳಿದುಕೊಳ್ಳಲು ಬಹುಕಾಲ ಬೇಕಾಯಿತು.
ಮುಸ್ಲಿಂ ಲೀಗಿನಲ್ಲೂ ಜಿನ್ನಾ ಏಕಾಂಗಿ; ಆತನ ಅತ್ಯಂತ ಸಮಿಾಸ ಸಹೋದ್ಯೋಗಿಗಳು ಸಹ ದೂರವಿದ್ದು ಗೌರವಿಸುತ್ತಾರೆ ; ಪ್ರೀತಿಗಿಂತ ಹೆಚ್ಚು ಆತನಿಗೆ ಹೆದರುತ್ತಾರೆ. ರಾಜಕೀಯ ನೈಪುಣ್ಯತೆಯಲ್ಲಿ ಅತಿ ಶ್ರೇಷ್ಠನೆನ್ನುವುದರಲ್ಲಿ ಸಂಶಯವಿಲ್ಲ ; ಆದರೆ ಆ ನೈಪುಣ್ಯವೆಲ್ಲ ಭಾರತದಲ್ಲಿನ ಇಂದಿನ ಬ್ರಿಟಿಷ್ ಅಧಿಕಾರದೊಂದಿಗೆ ಹೆಣೆದುಕೊಂಡಿದೆ. ಆತನ ರಾಜಕೀಯ ನೈಪುಣ್ಯತೆಯಲ್ಲಿ ನ್ಯಾಯವಾದಿತ್ವ ಬೆರೆತು ಇದೆ, ಚಲನಚಾತುರವಿದೆ ; ರಾಷ್ಟ್ರೀಯ ಭಾರತಕ್ಕೂ ಬ್ರಿಟಿಷ್ ಆಡಳಿತಕ್ಕೂ ತಾನು ಮಧ್ಯಸ್ಥಗಾರನೆಂದು ತಿಳಿದಿದ್ದಾನೆ. ಪರಿಸ್ಥಿತಿ ಬದಲಾಯಿಸಿ, ನಿಜವಾದ ರಾಜಕೀಯ ಮತ್ತು ಆರ್ಥಿಕ ಸಮಸ್ಯೆಗಳನ್ನು ಎದುರಿಸ ಬೇಕಾಗಿ ಬಂದರೆ ಆತನ ಸಾಮರ್ಥ್ಯ ಏನಿದೆಯೋ ಹೇಳಲು ಸಾಧ್ಯವಿಲ್ಲ. ಸ್ವಾಭಿಮಾನ ಬೇಕಾದಷ್ಟಿದ್ದರೂ ತನ್ನಲ್ಲಿ ತನಗೇ ಸಂಶಯವಿರುವಂತೆ ತೋರುತ್ತದೆ. ಪ್ರಾಯಶಃ ಇರುವಂತೆ ಇರಲಿ, ಎಂಬ ಮನೋಭಾವಕ್ಕೆ ಮತ್ತು ಭಿನ್ನಾಭಿಪ್ರಾಯವುಳ್ಳವರೆದುರು ಕುಳಿತು, ಶಾಂತಿಯಿಂದ ಕೂಲಂಕಷ ಚರ್ಚೆ ಮಾಡಲು ಒಪ್ಪದಿರುವ ಮನೋಭಾವಕ್ಕೆ ಆ ಸಂಶಯವೇ ಮುಖ್ಯ ಕಾರಣವೋ ಏನೋ. ಈಗಿನ ಚೌಕಟ್ಟಿನಲ್ಲಿ ಹೊಂದಿಕೊಂಡಿರುವುದೇನೋ ನಿಜ ; ಬೇರೊಂದು ಚೌಕಟ್ಟಿನಲ್ಲಿ ಆತನಾಗಲಿ, ಆತನ ಅನುಯಾಯಿಗಳಾಗಲಿ ಹೊಂದಿಕೊಳ್ಳುವರೋ ಇಲ್ಲವೋ ಹೇಳುವುದು ಕಷ್ಟ. ಆತನ ರೀತಿಗೆ ಕಾರಣವಾದ ಅನುರಕ್ತಿಯಾದರೂ ಏನು ? ಗುರಿ ಏನು ? ಅಥವ ರಾಜಕೀಯ ಚದುರಂಗ ದಾಟದಲ್ಲಿ ತಡೆಗಟ್ಟುವ ಅವಕಾಶ ದೊರೆತರೆ ಸಾಕೆಂಬ ತೃಪ್ತಿಯ ಹೊರತು ಬೇರೆ ಉನ್ನತ ಭಾವನೆಯೇ ಇಲ್ಲವೇ? ವಯಸ್ಸಾದಂತೆಲ್ಲ ಕಾಂಗ್ರೆಸ್ಸಿನ ಮೇಲೆ ಆತನ ದ್ವೇಷವೂ ಬೆಳೆಯುತ್ತಿದೆ. ಆತನಿಗೆ ಅಸಹ ನೀಯವಾದುದು, ಬೇಡವಾದುದು, ಏನೆಂದು ಎಲ್ಲರಿಗೂ ಗೊತ್ತು, ಆದರೆ ಬೇಕಾದುದು ಏನು ? ಆತನ ಶಕ್ತಿ ಮತ್ತು ಹಟಮಾರಿತನ ಏನೇ ಇದ್ದರೂ ಆತನ ಭಾವನೆ ಎಲ್ಲ ಶೂನ್ಯ ಭಾವನೆ. ಆತನನ್ನು ' ಶೂನ್ಯ ಪುರುಷ ' ನೆಂದರೆ ಒಪ್ಪುತ್ತದೆ. ಆತನ ವಾಸ್ತವಿಕಭಾವನೆ ಅರ್ಥಮಾಡಿಕೊಳ್ಳಲು ಮಾಡಿದ ಪ್ರಯತ್ನವೆಲ್ಲವೂ ವ್ಯರ್ಥವಾಗಿದೆ; ಕೈಗೇ ಸಿಲುಕುವುದಿಲ್ಲ.
ಭಾರತದಲ್ಲಿ ಬ್ರಿಟಿಷ್ ಆಡಳಿತ ಆರಂಭವಾದಮೇಲೆ ಮುಸ್ಲಿಮರಲ್ಲಿ ಆಧುನಿಕ ದೃಷ್ಟಿಯ ಪ್ರಮುಖ ವ್ಯಕ್ತಿಗಳು ಬಂದುದು ಅತಿ ವಿರಳ. ಕೆಲವರು ಪ್ರಸಿದ್ದ ಪುರುಷರೇನೋ ಬಂದರು. ಆದರೂ ಅವರೆಲ್ಲ ಆಧುನಿಕ ಪ್ರಪಂಚದ ರೀತಿ ನೀತಿಗೆ ದೂರ ಇದ್ದ ಹಳೆಯ ಸಂಸ್ಕೃತಿ ಮತ್ತು ಸಂಪ್ರದಾಯದವರು. ಕಾಲಗತಿಗನುಗುಣವಾಗಿ ಮುಂದುವರಿದು ಹೊಸ ಸನ್ನಿವೇಶಕ್ಕನುಗುಣವಾಗಿ ಸಂಸ್ಕೃತಿ ಮತ್ತು ಇತರ ವಿಷಯಗಳಲ್ಲಿ ಹೊಂದಿಕೊಳ್ಳದೆ ಇದ್ದುದಕ್ಕೆ ಕಾರಣ ಅವರ ಆಂತರಿಕ ದೌರ್ಬಲ್ಯವಲ್ಲ; ಆದರೆ ಕೆಲವು ಐತಿಹಾಸಿಕ ಘಟನೆಗಳು ಮಧ್ಯಮವರ್ಗ ಕೈಗಾರಿಕೋದ್ಯಮಿಗಳು ಬೆಳೆಯಲಿಲ್ಲ; ನವಾಬಗಿರಿಯ ಭಾವನೆಯೇ ಹೆಚ್ಚಾಗಿ ಉಳಿದು ಎಲ್ಲ ಪ್ರಗತಿಯ ಮಾರ್ಗಕ್ಕೂ ಅಡ್ಡಿ ಬಂದು ಜ್ಞಾನ ಪ್ರಚೋದನೆ ತಡೆಗಟ್ಟಿತು. ಬಂಗಾಲದಲ್ಲಂತೂ ಮುಸ್ಲಿಮರು ಬಹಳ ಅಧೋಗತಿಯಲ್ಲಿದ್ದರು. ಅದಕ್ಕೆ ಕಾರಣಗಳೆರಡು. ಬ್ರಿಟಿಷ್ ಆಡಳಿತದ ಆರಂಭದಲ್ಲಿ ಮುಸ್ಲಿಂ ಐಶ್ವರವಂತರನ್ನು ನಾಶಮಾಡಿದ್ದು ಮತ್ತು ಮುಸ್ಲಿಂ ಮತಕ್ಕೆ ಮತಾಂತರವಾದವರೆಲ್ಲ ಹಿಂದೂ ಧರ್ಮದಲ್ಲಿ ಯಾವ ಪ್ರಗತಿ ಮತ್ತು ಬೆಳವಣಿಗೆಗೆ ಅವಕಾಶವಿಲ್ಲದ ಅಸ್ಪೃಶ್ಯರಾಗಿದ್ದುದು, ಉತ್ತರ