ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೩೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಕೊನೆಯ ಅಂಕ ೨
೩೫೧

ಹಿಂದೂಸ್ಥಾನದಲ್ಲಿ ಉತ್ತಮ ವರ್ಗದ ಸುಸಂಸ್ಕೃತ ಮುಸ್ಲಿಮರೆಲ್ಲ ಹಳೆಯ ಕಂದಾಚಾರ ಪದ್ಧತಿ ಮತ್ತು ಜಮೀನುದಾರಿಕೆಗೆ ಅಂಟಿಕೊಂಡವರು. ಈಚೆಗೆ ಬಹಳ ಬದಲಾವಣೆಯಾಗಿದೆ. ಭಾರತೀಯ ಮುಸ್ಲಿ ಮರಲ್ಲೂ ಹೊಸ ಮಧ್ಯಮವರ್ಗವು ಬೇಗ ಬೆಳೆಯುತ್ತಿದೆ; ಆದರೂ ವಿಜ್ಞಾನ ಮತ್ತು ಕೈಗಾರಿಕೆಯಲ್ಲಿ ಹಿಂದೂಗಳಿಗಿಂತ ಅವರು ಬಹಳ ಹಿಂದೆ ಇದ್ದಾರೆ. ಹಿಂದೂಗಳು ಸಹ ಬಹಳ ಹಿಂದೆ ಬಿದ್ದಿದಾರೆ. ಕೆಲವು ಸಂದರ್ಭದಲ್ಲಿ ಮುಸ್ಲಿಮರಿಗಿಂತ ಹಿಂದೂಗಳು ಹೆಚ್ಚು ಸಂಪ್ರದಾಯ ಶರಣರು, ಆಚಾರ ನಿಷ್ಠರು. ಆದರೂ ಕೈಗಾರಿಕೆ ವಿಜ್ಞಾನ ಮತ್ತು ಇತರ ಕ್ಷೇತ್ರಗಳಲ್ಲಿ ಹಿಂದೂಗಳಲ್ಲಿ ಉನ್ನತ ವ್ಯಕ್ತಿಗಳು ಹುಟ್ಟಿದಾರೆ. ಚಿಕ್ಕ ಪಾರ್ಸಿಪಂಗಡದಲ್ಲಿ ಆಧುನಿಕ ಕೈಗಾರಿಕೋದ್ಯಮದಲ್ಲಿ ಅತ್ಯುನ್ನತ ವ್ಯಕ್ತಿಗಳು ಹುಟ್ಟಿದ್ದಾರೆ. ಜಿನ್ನಾ ಮೊದಲು ಹಿಂದೂ ಮನೆತನದಿಂದ ಬಂದವನು.

ಹಿಂದೂ ಮುಸಲ್ಮಾನ್ ಇಬ್ಬರಿಗೂ ಸರ್ಕಾರಿನೌಕರಿಯೇ ಹೆಚ್ಚು ಆಕರ್ಷಕವಿದ್ದುದರಿಂದ ಬುದ್ದಿವಂತರೂ ದಕ್ಷರೂ ಸರ್ಕಾರಿನೌಕರಿಯನ್ನೇ ಮೋಹಿಸಿದರು. ಸ್ವಾತಂತ್ರ್ಯಕ್ಕಾಗಿ ರಾಜಕೀಯ ಹೋರಾಟ ಆರಂಭವಾದ ಒಡನೆ ಆ ಮೋಹ ಕಡಮೆಯಾಗಿ ದಕ್ಷರೂ, ಧೈರ್ಯಶಾಲಿಗಳೂ, ಮನಸ್ಥೆರ್ಯಉಳ್ಳವರೂ ರಾಜಕೀಯದ ಕಡೆ ತಿರುಗಿದರು. ಮುಸ್ಲಿಮರಲ್ಲೂ ಅನೇಕ ಶ್ರೇಷ್ಠ ವ್ಯಕ್ತಿಗಳು ಕಾಂಗ್ರೆಸ್ಸನ್ನು ಸೇರಿದರು. ಈಚೆಗೆ ಕೆಲವು ಮುಸ್ಲಿಂ ಯುವಕರು ಸಮಾಜವಾದಿಗಳೂ ಸಮತಾವಾದಿಗಳೂ ಆಗಿದ್ದಾರೆ. ಈ ಉತ್ಸಾಹಿ ಪ್ರಗತಿಪರ ವ್ಯಕ್ತಿಗಳನ್ನು ಬಿಟ್ಟರೆ ಮುಸ್ಲಿಂ ಮುಖಂಡರು ಉಳಿದವರು ಯಾರೂ ಉನ್ನತ ವ್ಯಕ್ತಿಗಳು ಇರಲಿಲ್ಲ. ಮತ್ತು ಸರ್ಕಾರಿನೌಕರಿ ಇಂದಲೇ ತಮ್ಮ ಅಭಿವೃದ್ಧಿ ಎಂದರು. ಆದರೆ ಜಿನ್ನಾನ ರೀತಿಯೇ ಬೇರೆ ಇತ್ತು. ದಕನೂ, ಶಕ್ತನೂ ಮಾತ್ರವಲ್ಲದೆ ಆತನಿಗೆ ಇತರರಂತೆ ಅಧಿಕಾರದ ಆಸೆ ಇರಲಿಲ್ಲ. ಆದ್ದರಿಂದ ಮುಸ್ಲಿಂ ಲೀಗಿನಲ್ಲಿ ಆತನ ಸ್ಥಾನಗೌರವ ಅತ್ಯುನ್ನತವಿತ್ತು. ಇತರರು ಯಾರಿಗೂ ಇಲ್ಲದ ಗೌರವ ಆತನಿಗೆ ಲಭಿಸಿತು. ಆದರೆ ಹಟಮಾರಿತನದಿಂದ ಹೊಸಭಾವನೆಗಳು ಆತನ ತಲೆಯೊಳಗೆ ಹೋಗಲು ಅವಕಾಶವೇ ಇರಲಿಲ್ಲ. ತನ್ನ ಸಂಸ್ಥೆಯ ಸ್ಥಾನಬಲದಿಂದ ಭಿನ್ನಾಭಿಪ್ರಾಯ ವ್ಯಕ್ತಗೊಳಿಸಿದ ವ್ಯಕ್ತಿಗಳನ್ನಾಗಲಿ, ಸಂಸ್ಥೆಗಳನ್ನಾಗಲಿ ಸಹಿಸುವುದು ಆತನಿಗೆ ಅಸಾಧ್ಯವಾಯಿತು. ಮುಸ್ಲಿಂಲೀಗ್ ಎಂದರೆ ಆತನೇ ಆದ, ಆದರೆ ಮುಸ್ಲಿಂ ಲೀಗ್ ಈಗ ಮುಸ್ಲಿ೦ ಜನತೆಯ ಸಂಸ್ಥೆ ಯಾಗುತ್ತ ಬಂದಕಾರಣ ಕಂದಾಚಾರದ ಅಭಿಪ್ರಾಯದ ಆತನ ನವಾಬಗಿರಿ ಇನ್ನೆಷ್ಟು ದಿನ ನಡೆಯುವುದೋ ನೋಡಬೇಕು.

ನಾನು ಕಾಂಗ್ರೆಸ್ ಅಧ್ಯಕ್ಷನಾಗಿದ್ದಾಗ ಜನಾಬ್ ಜಿನ್ನಾಗೆ ಅನೇಕ ಬಾರಿ ಪತ್ರ ಬರೆದು “ನಾವು ಮಾಡಬೇಕಾದ್ದೇನು ತಿಳಿಸಿ" ಎಂದು ಕೇಳಿದೆ. ಲೀಗಿಗೆ ಬೇಕಾದುದೇನು, ಅದರ ನಿರ್ದಿಷ್ಟ ಧ್ಯೇಯಗಳೇನು ಎಂದು ಕೇಳಿದೆ; ಕಾಂಗ್ರೆಸ್ ಸರಕಾರಗಳಮೇಲೆ ಲೀಗಿನ ದೂರುಗಳೇನೆಂದು ತಿಳಿಸಲು ಹೇಳಿದೆ. ಮೊದಲು ಪತ್ರ ಮುಖೇನ ಸ್ಪಷ್ಟ ಮಾಡಿಕೊಂಡು ಅದರಲ್ಲಿ ಹೊರಬಿದ್ದ ಮುಖ್ಯ ವಿಷಯಗಳನ್ನು ಮುಖತಃ ಚರ್ಚಿಸಲು ಅನುಕೂಲವಾಗಲೆಂದು ಉದ್ದೇಶವಿತ್ತು. ಜಿನ್ನಾ ಉದ್ದುದ್ದನೆಯ ಉತ್ತರಗಳನ್ನೇನೋ ಕಳುಹಿಸಿದರೂ, ಅವುಗಳಿಂದ ನನಗೆ ಏನೂ ಅರ್ಥವಾಗಲಿಲ್ಲ. ಲೀಗಿನ ದೋಷಾರೋಪಣೆಗಳೇನು, ತನಗೆ ಬೇಕಾದುದೇನು ಎಂಬುದನ್ನು ನನಗಾಗಲಿ ಇತರರಿಗೆ ಆಗಲಿ ತಿಳಿಸಲು ತಪ್ಪಿಸಿಕೊಳ್ಳುತ್ತಿದ್ದುದೆ ಒಂದು ಆಶ್ಚರ್ಯ. ಮೇಲಿಂದ ಮೇಲೆ ಪತ್ರವ್ಯವಹಾರ ನಡೆಯಿತು; ಆದರೂ ಅದೇ ಅಸ್ಪಷ್ಟ ಅಪೂರ್ಣ ಉತ್ತರ; ನನಗಂತೂ ಯಾವ ಸ್ಪಷ್ಟ ಅಭಿಪ್ರಾಯವೂ ದೊರೆಯಲಿಲ್ಲ. ನಾನೇ ಆಶ್ಚರ್ಯಗೊಂಡು ನಿಸ್ಸಹಾಯಕನಾಗುತ್ತಿದ್ದೆ. ಯಾವ ನಿರ್ದಿಷ್ಟ ಅಭಿಪ್ರಾಯಕ್ಕೂ ಕಟ್ಟು ಬೀಳಬಾರದೆಂದೂ ಒಪ್ಪಂದಕ್ಕೂ ಸಿಕ್ಕ ಬಾರದೆಂದೂ ಜನಾಬ್ ಜೆನ್ನಾ ಅಭಿಮತವಿದ್ದಂತೆ ತೋರಿತು.

ಆಮೇಲೆ ಗಾಂಧಿಜಿ ಮತ್ತು ನಮ್ಮಲ್ಲಿ ಇತರರು ಅನೇಕಬಾರಿ ಜಿನ್ನಾನನ್ನು ನೋಡಿದರು. ಅನೇಕ ಗಂಟೆಗಳ ಕಾಲ ಮಾತನಾಡಿದರೂ ಪೀಠಿಕಾ ಪ್ರಕರಣದಲ್ಲೇ ಮುಗಿಯುತ್ತಿತ್ತು. ಕಾಂಗ್ರೆಸ್ ಮತ್ತು ಲೀಗ್ ಪ್ರತಿನಿಧಿಗಳು ಕಲೆತು ಚರ್ಚೆಮಾಡೋಣವೆಂದು ನಾವು ಸಲಹೆಮಾಡಿದೆವು. ಭಾರತದಲ್ಲಿ ಮುಸ್ಲಿಮರ ಏಕೈಕ ಪ್ರತಿನಿಧಿ ಸಂಸ್ಥೆ ಮುಸ್ಲಿಂ ಲೀಗ್ ಮಾತ್ರವೆಂದೂ, ಕಾಂಗ್ರೆಸ್ ಕೇವಲ ಹಿಂದೂ ಸಂಸ್ಥೆ ಎಂದೂ ಒಪ್ಪಿದರೆ ಮಾತ್ರ ಅದು ಸಾಧ್ಯವೆಂದು ಜನಾಬ್ ಜಿನ್ನಾರಿಂದ ಉತ್ತರಬಂದಿತು. ಅಡ್ಡ