ಪುಟ:ಭಾರತ ದರ್ಶನ.djvu/೩೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೊನೆಯ ಅಂಕ ೨

೩೫೯

ನಮ್ಮಲ್ಲಿ ಕೆಲವರು ಬಂಡವಾಳವು ಸಹ ಸಮಾಜವಾದ ತತ್ವದಂತೆ ಬರಬೇಕೆಂದೆವು. ಬ್ಯಾಂಕುಗಳನ್ನು ವಿಮಾ ಕಂಪನಿಗಳನ್ನು ರಾಷ್ಟ್ರೀಕರಣ ಮಾಡಲಾಗದಿದ್ದರೆ ಬಂಡವಾಳ ಮತ್ತು ಸಾಲಗಳಾದರೂ ರಾಷ್ಟ್ರ ನಿಬಂಧನೆಯಂತೆ ರಾಷ್ಟ್ರದ ನಿಯಂತ್ರಣದೊಳಗೆ ಇರಬೇಕೆಂದೆವು. ಆಮದು ರಫ್ತು ವಿದೇಶವ್ಯಾಪಾರದ ನಿಯಂತ್ರಣ ಅವಶ್ಯವಿತ್ತು. ಈ ರೀತಿ ವ್ಯವಸಾಯ ಮತ್ತು ಕೈಗಾರಿಕೆ ಎರಡರ ಮೇಲೂ ಬೇರೆ ಬೇರೆ ರೀತಿಯಲ್ಲಿ ರಾಷ್ಟ್ರದ ನಿಯಂತ್ರಣವಿರಬೇಕೆಂದೂ, ಕೆಲವು ಸಂದರ್ಭ ಅದನ್ನು ವ್ಯತ್ಯಾಸಗೊಳಿಸಬಹುದೆಂದೂ, ಒಂದು ಮಿತಿಯಲ್ಲಿನ ಸ್ವಪ್ರಯತ್ನಕ್ಕೂ ಅವಕಾಶವಿರಬೇಕೆಂದೂ ತೀರ್ಮಾನಿಸಿದೆವು.

ಈ ರೀತಿ ವಿಶೇಷ ಸಮಸ್ಯೆಗಳನ್ನೇ ಆಲೋಚಿಸಿ ಕ್ರಮೇಣ ನಮ್ಮ ಸಾಮಾಜಿಕ ಗುರಿಯನ್ನೂ ಮತ್ತು ನೀತಿಯನ್ನೂ ರೂಪಿಸಿದೆವು. ಕೆಲವು ಕಡೆ ಅಪಾರ ಅಂತರ, ಅಸ್ಪಷ್ಟತೆ, ವಿರೋಧಾಭಾಸ ಇದ್ದವು. ತಾತ್ವಿಕ ದೃಷ್ಟಿಯಿಂದ ಸ್ವಯಂಪೂರ್ಣವಿರಲಿಲ್ಲ. ಆದರೆ ಸಮಿತಿಯಲ್ಲಿ ಭಿನ್ನಾಭಿಪ್ರಾಯದ ಸದಸ್ಯರೇ ಹೆಚ್ಚು ಇದ್ದರೂ ದೊರೆತ ಒಮ್ಮತ ಕಂಡು ನನಗೇ ಆಶ್ಚರ್ಯತೋರಿತು. ಬಂಡವಾಳಗಾರರ ಪ್ರತಿನಿಧಿಗಳೇ ಬಹಳ ಜನರಿದ್ದರು. ಅನೇಕ ವಿಷಯಗಳಲ್ಲಿ ಮುಖ್ಯವಾಗಿ ವ್ಯಾಪಾರ ಮತ್ತು ಹಣಕಾಸಿನ ವಿಷಯದಲ್ಲಿ ಅವರ ದೃಷ್ಟಿ ಎಲ್ಲ ಪ್ರತಿಗಾಮಿಯಾದುದು. ಆದರೂ ಬೇಗ ನಾವು ಪ್ರಗತಿಹೊಂದಬೇಕು ಎಂಬ ಕಾತರತೆ ; ಆ ಪ್ರಗತಿಯಾದರೆ ಮಾತ್ರ ನಮ್ಮ ದೇಶದ ಬಡತನ ಮತ್ತು ನಿರುದ್ಯೋಗದ ಪರಿಹಾರ ಎಂಬ ಮನೋ ನಿಶ್ಚಯ. ಇವು ನಮ್ಮ ಕೊರಕಲು ದಾರಿಬಿಟ್ಟು ಹೊಸದಾರಿಯಲ್ಲಿ ಯೋಚಿಸುವಂತೆ ನಮ್ಮನ್ನು ಪ್ರೇರೇ ಪಿಸಿದವು. ತಾತ್ವಿಕ ಚರ್ಚೆ ನಾವು ಬಿಟ್ಟಿದ್ದೆವು; ಆದರೂ ಪ್ರತಿಯೊಂದು ಪ್ರತ್ಯೇಕ ಸಮಸ್ಯೆಯನ್ನೂ ಸಮಗ್ರ ದೃಷ್ಟಿಯಿಂದ ಪರಿಶೀಲಿಸಿದಾಗ ನಮಗೆ ಒಂದುದಾರಿ ದೊರಕಿತು. ಈ ಯೋಜನಾ ಸಮಿತಿಯ ಸದಸ್ಯರ ಸಹಕಾರ ಭಾವನೆಯಿಂದ ನಾನು ಬಹಳ ಸಂತೋಷಗೊಂಡೆ, ತೃಪ್ತಿಗೊಂಡೆ. ರಾಜಕೀಯದ ವ್ಯಾಜ್ಯ ಮತ್ತು ಅಂತಃ ಕಲಹಗಳಿಗೂ ಈ ಸಹಕಾರ ದೃಷ್ಟಿಗೂ ಅಜಗಜಾಂತರ. ನಮ್ಮ ಭಿನ್ನಾಭಿಪ್ರಾಯ ನಮಗೆ ತಿಳಿದೇ ಇದ್ದವು. ಆದರೂ ಪ್ರತಿಯೊಂದು ಅಭಿಪ್ರಾಯ ಚರ್ಚೆಮಾಡಿ ಸರ್ವಸಮ್ಮತವಾದ ಅಥವ ಬಹುಮಂದಿಗೆ ಸಮ್ಮತವಾದ ಒಂದು ತೀರ್ಮಾನಕ್ಕೆ ಬರಲು ಪ್ರಯತ್ನ ಮಾಡಿ ಬಹುಮಟ್ಟಿಗೆ ಯಶಸ್ವಿಯಾದೆವು.

ಆಗಿನ ನಮ್ಮ ಸಮಿತಿಯ ರಚನೆ ಮತ್ತು ಅಂದಿನ ಭಾರತದ ಪರಿಸ್ಥಿತಿಯಲ್ಲಿ ಸಮಾಜವಾದಿ ಯೋಜನೆ ರಚಿಸಲು ಸಾಧ್ಯವಾಗಲಿಲ್ಲ. ಆದರೂ ನಮ್ಮ ಯೋಜನೆ ಮುಂದುವರಿದಂತೆ ಕೆಲವು ಸಮಾಜವಾದದ ಮೂಲತತ್ವಗಳು ಅದರಲ್ಲಿ ಬರುವುದು ಅನಿವಾರವೆನಿಸಿತು. ಆ ಯೋಜನೆ ಸಮಾಜದಲ್ಲಿ ವ್ಯಕ್ತಿಯ ಸಂಗ್ರಹಣ ಶಕ್ತಿಯನ್ನು ಮಿತಿಗೊಳಿಸಿತು, ಸಮಾಜದ ಬೆಳೆವಣಿಗೆಗೆ ಇದ್ದ ಅಡಚಣೆಗಳನ್ನು ಕಿತ್ತೊಗೆಯಿತು. ಈ ರೀತಿ ಸಮಾಜರಚನೆಯನ್ನು ಬೇಗ ಹಿಗ್ಗಿಸಲು ಅನುಕೂಲವಾಯಿತು. ಸಾಮಾನ್ಯ ಮನುಷ್ಯನ ಕ್ಷೇಮ ಆತನ ಜೀವನಮಟ್ಟದ ಉನ್ನತಿ, ಆತನ ಪೂರ್ಣವಿಕಾಸಕ್ಕೆ ಅವಕಾಶ, ಆತನ ಅದ್ಭುತ ಸುಷುಪ್ತ ಬುದ್ದಿ ಮತ್ತು ಮನಸ್ಸಿನ ಶಕ್ತಿಯನ್ನು ಹೊರಗೆಡಹುವುದು ಇವೇ ಆ ಯೋಚನೆಯ ಮೂಲ ಉದ್ದೇಶ್ಯಗಳಾಗಿದ್ದವು. ಪ್ರಜಾ ಸ್ವಾತಂತ್ರದ ದೃಷ್ಟಿಯಿಂದ ಈ ಪ್ರಯತ್ನ ಅವಶ್ಯವಿತ್ತು. ಮತ್ತು ಸಾಮಾನ್ಯವಾಗಿ ಸಮಾಜವಾದಕ್ಕೆ ವಿರುದ್ದವಿರುವ ಕೆಲವು ಪಂಗಡಗಳ ಸಹಕಾರದಿಂದ ಅದನ್ನು ಸಾಧಿಸಬೇಕಾಗಿತ್ತು. ಈ ಸಹಕಾರ ಪಡೆಯಲು ನಮ್ಮ ಯೋಜನೆ ಕೆಲವು ವಿಷಯಗಳಲ್ಲಿ ಸಪ್ಪೆಯಾದರೂ ಒಳ್ಳೆಯದೆನಿಸಿತು. ಪ್ರಾಯಶಃ ನಾನು ಬಹಳ ಆಶಾವಾದಿ ಎಂದು ತೋರುತ್ತದೆ. ಆದರೆ ಸರಿಯಾದ ಮಾರ್ಗದಲ್ಲಿ ಒಂದು ದೊಡ್ಡ ಹೆಜ್ಜೆ ಯನ್ನಿಟ್ಟರೆ ಆ ವ್ಯತ್ಯಸ್ತ ಕಾರ್ಯ ಚಟುವಟಿಕೆಯೇ ಮುಂದಿನ ಪ್ರಗತಿಗೂ, ಪರಿವರ್ತನೆಗೂ ದಾರಿಯಾಗುತ್ತದೆ, ಸಂಘರ್ಷಣವೆ ಒದಗಿದರೆ ಅದನ್ನು ಎದುರಿಸಲೇ ಬೇಕು. ಆದರೆ ಸಂಘರ್ಷಣೆಯೇ ಇಲ್ಲದಂತೆ ಮಾಡಬಲ್ಲವಾದರೆ ಅಥವ ಅದನ್ನು ಆದಷ್ಟು ಕಡಮೆ ಮಾಡಿದರೆ ಅದೇ ದೊಡ್ಡ ಲಾಭ, ರಾಜಕೀಯದಂತ ಇಲ್ಲಿಯೂ ಬೇಕಾದಷ್ಟು ಘರ್ಷಣೆ ಇತ್ತು; ಮುಂದೆ ಅದರಿಂದ ಅಸ್ಥಿರ ಪರಿಸ್ಥಿತಿಯೊದಗಿದರೂ ಒದಗಬಹುದು. ಆದ್ದರಿಂದ ನಮ್ಮ ಯೋಜನೆಗೆ ಸಾಮಾನ್ಯ ಒಪ್ಪಿಗೆ ದೊರೆತರೆ ಉತ್ತಮವೆನಿಸಿತು. ತಾತ್ವಿಕ