ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೩೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೮೪
ಭಾರತ ದರ್ಶನ

೧೯೩೯ನೆಯ ಸೆಪ್ಟೆಂಬರ್ ೧೪ನೆಯ ತಾರೀಖಿನ ದಿನ ದೀರ್ಘಕಾಲ ಪರ್ಯಾಲೋಚಿಸಿ ಕಾಂಗ್ರೆಸ್ ಕಾರ್ಯ ಸಮಿತಿಯು ಯುದ್ಧ ಪರಿಸ್ಥಿತಿಯ ಮೇಲೆ ದೀರ್ಘ ಹೇಳಿಕೆಯೊಂದನ್ನು ಕೊಟ್ಟಿತು. ವೈಸರಾಯನ ನಡೆವಳಿಕೆ ಹೊಸ ಶಾಸನಗಳು, ವಿಶೇಷ ಅಧಿಕಾರಗಳು ಎಲ್ಲವನ್ನೂ ಅದರಲ್ಲಿ ಉಲ್ಲೇಖಿಸಿ “ಈ ನಡೆವಳಿಕೆಗಳೆಲ್ಲ ಅನರ್ಥಕಾರಿಗಳೆಂದು ಕಾರ್ಯಸಮಿತಿಯ ಅಭಿಪ್ರಾಯ” ಎಂದು ಹೇಳಿದೆವು. ಫ್ಯಾಸಿಸಂ ಮತ್ತು ನಾಸಿಸಂಗಳನ್ನು ಸ್ಪಷ್ಟ ಖಂಡಿಸಿದೆವು. ಮುಖ್ಯವಾಗಿ ಜರ್ಮನ್ ನಾಜಿ ಸರಕಾರ ಪೋಲೆಂಡಿನ ಮೇಲೆ ಮಾಡಿದ ಆಕ್ರಮಣ ಖಂಡಿಸಿ, ಅದನ್ನು ಎದುರಿಸುತ್ತಿದ್ದ ಪೋಲರಿಗೆ ಸಹಾನುಭೂತಿಯನ್ನು ತೋರಿಸಿದೆವು.

ಸಹಕಾರದ ಭರವಸೆ ಕೊಟ್ಟರೂ “ಬಲಾತ್ಕಾರದ ತೀರ್ಮಾನ ಏನೇ ಇರಲಿ ಅದನ್ನು ಎದುರಿಸಬೇಕಾಗುವುದೆಂದೂ, ಕಾರ್ಯವು ಯೋಗ್ಯವಿದ್ದರೂ ಒತ್ತಾಯ ಮತ್ತು ಬಲಾತ್ಕಾರದಿಂದ ಸಹಕಾರ ಪಡೆಯಲು ಸಾಧ್ಯವಿಲ್ಲವೆಂದೂ, ಪರದೇಶೀ ಅಧಿಕಾರ ವರ್ಗ ಕೊಟ್ಟ ಆಜ್ಞೆಗಳಿಗೆ ಭಾರತದ ಜನರು ಮಾನ್ಯ ಮಾಡುವುದನ್ನು ಕಾರ್ಯ ಸಮಿತಿಯು ಎಂದಿಗೂ ಒಪ್ಪುವದಿಲ್ಲವೆಂದೂ ಹೇಳಿದೆವು. ಗುರಿಯು ಇಬ್ಬರಿಗೂ ಯೋಗ್ಯ ವೆಂದು ತೋರಿದರೆ, ಪರಸ್ಪರ ಒಪ್ಪಿಗೆಯಿಂದ ಸಮಾನ ಅಧಿಕಾರವಿದ್ದರೆ ಮಾತ್ರ ಸಹಕಾರ ಸಾಧ್ಯ; ಸ್ವಾತಂತ್ರ ಪಡೆದು ಪ್ರಜಾಪ್ರಭುತ್ವ ಸರಕಾರ ಸ್ಥಾಪಿಸಲು ಭಾರತದ ಜನತೆ ಇತ್ತೀಚಿನ ವರ್ಷಗಳಲ್ಲಿ ಅಪಾರ ಕಷ್ಟ ಅನುಭವಿಸಿ ಸ್ವಯಂ ಪ್ರೇರಣೆಯಿಂದ ಅದ್ಭುತ ತ್ಯಾಗಮಾಡಿದೆ ; ಅದರ ಸಹಾನುಭೂತಿ ಎಲ್ಲ ಸ್ವಾತಂತ್ರ ಮತ್ತು ಪ್ರಜಾಪ್ರಭುತ್ವದ ಕಡೆಗೆ; ಆದರೆ ಯಾವ ಪ್ರಜಾಪ್ರಭುತ್ವದ ಸ್ವಾತಂತ್ರ್ಯಕ್ಕಾಗಿ ಯುದ್ಧ ಘೋಷಣೆ ಆಗಿದೆಯೋ ಆ ಪ್ರಜಾಪ್ರಭುತ್ವದ ಸ್ವಾತಂತ್ರ್ಯವನ್ನೇ ಭಾರತಕ್ಕೆ ನಿರಾಕರಿಸುವಾಗ ಮತ್ತು ಇದ್ದ ಅಲ್ಪ ಸ್ವಾತಂತ್ರ್ಯವನ್ನೂ ಅಪಹರಿಸುವಾಗ ಯಾವ ಯುದ್ಧದಲ್ಲೂ ಭಾಗವಹಿಸಲು ಭಾರತಕ್ಕೆ ಸಾಧ್ಯವಿಲ್ಲವೆಂದೆವು.

"ಗ್ರೇಟ್ ಬ್ರಿಟನ್ ಮತ್ತು ಫ್ರಾನ್ಸಿನ ಸರಕಾರಗಳು ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯಕ್ಕಾಗಿ, ಆಕ್ರಮಣ ನೀತಿ ಕೊನೆಗಾಣಿಸುವುದಕ್ಕಾಗಿ ಈ ಯುದ್ಧ ಎಂದು ಹೇಳುತ್ತಿರುವುದನ್ನು ಕಾರ್ಯ ಸಮಿತಿಯು ಗಮನಿಸಿದೆ; ಆದರೆ ಇತ್ತೀಚಿನ ಘಟನೆಗಳನ್ನು ಗಮನಿಸಿದರೆ ಆಡುವ ಮಾತು ಮತ್ತು ಹೇಳುವ ಉನ್ನತ ಆದರ್ಶಗಳಿಗೂ ಮತ್ತು ನಿಜವಾದ ಉದ್ದೇಶ ಮತ್ತು ಗುರಿಗಳಿಗೂ ಅಜಗಜಾಂತರವಿದೆ” ಎಂದು ಹೇಳಿದೆವು. ಮೊದಲನೆ ಪ್ರಪಂಚ ಯುದ್ಧದ ಕಾಲದ ಮತ್ತು ಅನಂತರದ ಕೆಲವು ಘಟನೆಗಳನ್ನು ಉದಹರಿಸಿದೆವು. "ಪವಿತ್ರ ವಚನವೆಂದು ಭರವಸೆಕೊಟ್ಟು ಮಾಡಿದ ಘೋಷಣೆಗಳನ್ನೆಲ್ಲ ಸ್ವಲ್ಪವೂ ಸಂಕೋಚವಿಲ್ಲದೆ ಹೇಗೆ ಕೈಬಿಡಬಹುದೆಂದು ಇತ್ತೀಚಿನ ಐತಿಹಾಸಿಕ ಘಟನೆಗಳಿಂದ ಸ್ಪಷ್ಟವಾಗಿದೆ......., ಪ್ರಜಾಪ್ರಭುತ್ವಕ್ಕೆ ಅಪಾಯ ಒದಗಿದೆ, ಪ್ರಜಾಪ್ರಭುತ್ವದ ರಕ್ಷಣೆಯಾಗಬೇಕು ಎಂಬ ಘೋಷಣೆಯನ್ನು ಕಾರ್ಯಸಮಿತಿ ಪೂರ್ಣ ಒಪ್ಪುತ್ತದೆ ; ಪಾಶ್ಚಾತ್ಯ ರಾಷ್ಟ್ರಗಳ ಜನರ ಏಕೈಕ ಧ್ಯೇಯವೇ ಅದೆಂದೂ, ಅದಕ್ಕಾಗಿ ಯಾವ ತ್ಯಾಗವನ್ನಾದರೂ ಮಾಡಲು ಅವರು ಸಿದ್ಧರಿದ್ದಾರೆಂದೂ ಸಮಿತಿಯು ಮನಗಂಡಿದೆ; ಆದರೂ ಭಾರತದ ಜನರ ಉನ್ನತ ಧೈಯ ಮತ್ತು ಭಾವನೆಗಳನ್ನೂ, ಮತ್ತು ಅವುಗಳಿಗಾಗಿ ಹೋರಾಟ ಮಾಡಿದ ಅಪಾರ ತ್ಯಾಗವನ್ನೂ ತೃಣೀಕರಿಸಲಾಗುತ್ತಿದೆ; ಮತ್ತು ಅವರು ಭಾರತದ ಜನತೆಯ ವಿಶ್ವಾಸ ಉಳಿಸಿಕೊಂಡಿಲ್ಲ” ಎಂದೆವು. “ಈಗಿರುವಂತೆ ಸಾಮ್ರಾಜ್ಯದ ಆಸ್ತಿ, ಅಧೀನರಾಜ್ಯಗಳು, ಹಕ್ಕುದಾರಿ, ಅಧಿಕಾರ ಇವುಗಳ ರಕ್ಷಣೆಗಾಗಿ ಯುದ್ಧವೆಂದರೆ ಭಾರತಕ್ಕೂ ಅದಕ್ಕೂ ಯಾವ ಸಂಬಂಧವೂ ಇಲ್ಲ; ಆದರೆ ಯುದ್ಧದ ಗುರಿ ಪ್ರಜಾಪ್ರಭುತ್ವ ಮತ್ತು ಅದರ ಆಧಾರದ ಮೇಲೆ ಒಂದು ಪ್ರಪಂಚ ರಚನೆ ಎಂದರೆ ಭಾರತಕ್ಕೆ ಆ ಗುರಿಯಲ್ಲಿ ಆಸಕ್ತಿ ಇದೆ. ಭಾರತದ ಪ್ರಜಾಪ್ರಭುತ್ವಕ್ಕೂ ಬ್ರಿಟಿಷ್ ಅಥವ ಪ್ರಪಂಚದ ಪ್ರಜಾಪ್ರಭುತ್ವಕ್ಕೂ ಯಾವ ವಿರೋಧವೂ ಇಲ್ಲ. ಆದರೆ ಭಾರತದ ಮತ್ತು ಇತರ ದೇಶಗಳ ಸ್ವಾತಂತ್ರ್ಯವೆಂದೊಡನೆ ಸಾಮ್ರಾಜ್ಯ ನೀತಿಗೂ, ಫ್ಯಾಸಿಸ್ಟ್ ನೀತಿಗೂ ವಿರೋಧ ಅನಿವಾರ, ಗ್ರೇಟ್ ಬ್ರಿಟನ್ ಪ್ರಜಾಪ್ರಭುತ್ವದ ರಕ್ಷಣೆ ಮತ್ತು ವಿಸ್ತರಣಕ್ಕಾಗಿ ಯುದ್ಧ ಮಾಡುವುದಾದರೆ ಅದು ಮೊದಲು ತನ್ನ ಅಧೀನ ರಾಷ್ಟ್ರಗಳಲ್ಲಿ ಸಾಮ್ರಾಜ್ಯ