ಪುಟ:ಭಾರತ ದರ್ಶನ.djvu/೪೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೊನೆಯ ಅ೦ಕ ೩

೪೧೯

ನೆಪ ಹೇಳಿದರು. ಆ ಪ್ರಾಂತದ ಸಂಚಾರ ಮಾರ್ಗವೆಲ್ಲ ಬಹುಮಟ್ಟಿಗೆ ನದಿಗಳಲ್ಲಿ, ಮತ್ತು ನದಿಯ ಕಾಲುವೆಗಳಲ್ಲಿ ; ದೋಣಿಗಳಲ್ಲಿ ಮಾತ್ರ ದಾಟಿ ಸಂಚರಿಸಲು ಸಾಧ್ಯವಿತ್ತು. ದೋಣಿಗಳ ನಾಶದಿಂದ ಅನೇಕ ಜನರ ಓಡಾಟಕ್ಕೆ ಅವಕಾಶವಿಲ್ಲದಂತೆ ಆಯಿತು, ಅನೇಕರ ಜೀವನೋಪಾಯಕ್ಕೆ ಮಣ್ಣು ಬಿತ್ತು; ಇದ್ದ ಒಂದು ಸಂಚಾರ ಸೌಕರ್ಯವೂ ಹಾಳಾಯಿತು. ಬಂಗಾಲದ ಕ್ಷಾಮಕ್ಕೆ ಇದೂ ಒಂದು ಕಾರಣವಾಯಿತು. ಬಂಗಾಲದಿಂದ ಅನೇಕರನ್ನು ಹೊರಗೆ ಕಳುಹಿಸಲು ಸಿದ್ದತೆಗಳಾದವು. ರಂಗೂನ್ ಮತ್ತು ದಕ್ಷಿಣ ಬರದ ದುರಂತ ಕಥೆ ಇಲ್ಲಿ ಪುನಃ ನಡೆಯುವಂತೆ ತೋರಿತು. ಮದರಾಸಿನಲ್ಲಿ ಜಪಾನೀ ಹಡಗು ಪಡೆ ಬರುತ್ತಿದೆ ಎಂಬ ನಿರಾಧಾರ ಸುದ್ದಿ ಹರಡಿ ಸರಕಾರದ ದೊಡ್ಡ ದೊಡ್ಡ ಅಧಿಕಾರಿಗಳು ಕಾಲು ಕಿತ್ತರು. ಬಂದರಿನ ಕೆಲವು ಸೌಲಭ್ಯ ಸಲಕರಣೆಗಳನ್ನು ಸಹ ನಾಶಮಾಡಿದರು. ಸಾಮಾನ್ಯ ಆಡಳಿತ ವರ್ಗಕ್ಕೆ ಬುದ್ಧಿ ಭ್ರಮೆಯಾಗಿ ದಿಕ್ಕುಗೆಟ್ಟಂತೆ ಸ್ಪಷ್ಟ ಕಂಡಿತು. ಭಾರತದ ರಾಷ್ಟ್ರೀಯತ್ವವನ್ನು ಎದುರಿಸಿ ತುಳಿಯಲು ಮಾತ್ರ ಅದಕ್ಕೆ ಶಕ್ತಿ ಇತ್ತು.

ಈಗ ನಾವು ಮಾಡುವುದೇನು? ಭಾರತದ ಯಾವ ಭಾಗವೇ ಆಗಲಿ ಯಾವ ಪ್ರತಿಭಟನೆಯೂ ಇಲ್ಲದೆ ಪರಾಕ್ರಮಣಕ್ಕೆ ತಲೆಬಾಗಬೇಕೆನ್ನುವುದು ನಮಗೆ ಅಸಾಧ್ಯವೆನಿಸಿತು. ಶಸ್ತ್ರ ಸಜ್ಜಿತ ಪ್ರತಿಭಟನೆಯಂತೂ ಸೈನ್ಯ ಮತ್ತು ವಾಯುಪಡೆ ಕೆಲಸವಾಯಿತು. ಅಮೆರಿಕನ್ ವಿಮಾನಗಳು ಬಂದ ಮೇಲೆ ಯುದ್ಧ ಪರಿಸ್ಥಿತಿಯಲ್ಲಿ ಸ್ವಲ್ಪ ಬದಲಾವಣೆಯಾಗುವುದರಲ್ಲಿತ್ತು. ಜನರಲ್ಲಿ ಉತ್ಸಾಹ ತುಂಬಿ ಹುರಿದುಂಬಿಸಿ ಎಷ್ಟು ನಷ್ಟವಾದರೂ ಪ್ರತಿಭಟಿಸಲೇಬೇಕೆಂಬ ನಮ್ಮ ಸ್ಥಿರಮನಸ್ಸಿನಿಂದ ಸಾರ್ವಜನಿಕ ಸೇವಾ ಪಡೆಗಳು, ಗೃಹ ರಕ್ಷಕದಳಗಳು ಮುಂತಾದ ಸಹಾಯಕ ಪಡೆಗಳನ್ನು ನಿರ್ಮಿಸಿ ದೇಶದ ಒಳಗೆ ವಾತಾವರಣ ಉತ್ತಮಪಡಿಸ ಬಹುದಾಗಿತ್ತು. ಬ್ರಿಟಿಷರ ಸಂಕುಚಿತ ನೀತಿಯಿಂದ ಇದು ನಮಗೆ ಅಸಾಧ್ಯವಾಯಿತು. ನಾಳೆ ಮುತ್ತಿಗೆ ಎಂದಾಗ ಸಹ ಸೈನಿಕರ ಹೊರತು ಬೇರೆ ಯಾವ ಭಾರತೀಯನ ಕೈಯಲ್ಲೂ ಒಂದು ಬಂದೂಕು ಕೊಡಲು ಬ್ರಿಟಿಷರಿಗೆ ಧೈರ್ಯವಿರಲಿಲ್ಲ; ಗ್ರಾಮಾಂತರಗಳಲ್ಲಿ ನಿಶ್ಯಸ್ಯ ಸ್ವಯಂ ಸೇವಕ ಪಡೆ ಏರ್ಪಡಿಸಲು ನಾವು ಮಾಡಿದ ಪ್ರಯತ್ನವನ್ನು ಸಹ ಒಪ್ಪಲಿಲ್ಲ; ಅನೇಕ ವೇಳೆ ಅದಕ್ಕೂ ಅಡ್ಡಿ ಬಂದರು. ಜನರ ಪ್ರತಿಭಟನಾ ಶಕ್ತಿ ಹೆಚ್ಚಲೆಂದು ಅವರಲ್ಲಿ ಸಂಘಟನೆ ಶಕ್ತಿ ಬೆಳೆಸುವ ಬದಲು ಬ್ರಿಟಿಷ್ ಅಧಿಕಾರಿಗಳು ಅದರಲ್ಲಿ ಒಂದು ಪೆಡಂಭೂತವನ್ನು ಕಂಡು ಬೆದರಿದರು. ಏಕೆಂದರೆ ಮೊದಲಿನಿಂದ ಜನರ ಆತ್ಮರಕ್ಷಣಾ ಸಂಸ್ಥೆಗಳನ್ನೆಲ್ಲ ರಾಜದ್ರೋಹ ಸಂಸ್ಥೆಗಳೆಂದೂ ಬ್ರಿಟಿಷರ ಆಳ್ವಿಕೆಗೆ ಅಪಾಯ ಎಂದೂ ಭಾವಿಸಿದ್ದರು. ತಮ್ಮ ಆ ಹಳೆಯ ನೀತಿಯನ್ನೇ ಅವರು ಈಗಲೂ ನಂಬಿ ಅನುಸರಿಸಬೇಕಾಗಿತ್ತು; ಇಲ್ಲವಾದರೆ ಜನರಲ್ಲಿ ಭರವಸೆ ಇಟ್ಟು, ರಾಷ್ಟ್ರೀಯ ಸರಕಾರ ಸ್ಥಾಪಿಸಿ, ಆತ್ಮರಕ್ಷಣೆಗೆ ಅವರನ್ನು ಅಣಿಗೊಳಿಸಬೇಕಾಗಿತ್ತು. ಎರಡನೆಯ ಮಾರ್ಗ ಅವರು ನಿರಾಕರಿಸಿದ್ದರು. ಆದ್ದರಿಂದ ಮಧ್ಯವರ್ತಿ ಮಾರ್ಗ ಯಾವುದೂ ಇರಲಿಲ್ಲ. ಜನರನ್ನು ದನಗಳಂತೆ ನೋಡತೊಡಗಿದರು; ಅವರಿಗೆ ಯಾವ ಸ್ವಯಮಾಚರಣೆ ಅಧಿಕಾರವನ್ನೂ ಕೊಡಲಿಲ್ಲ; ತಮಗೆ ಮನಬಂದಂತೆ ತಾವು ವರ್ತಿಸತೊಡಗಿದರು. ೧೯೪೨ ನೆ ಏಪ್ರಿಲ್ ಕೊನೆಯಲ್ಲಿ ಅಖಿಲಭಾರತ ಕಾಂಗ್ರೆಸ್ ಸಮಿತಿ ಈ ಸರ್ವಾಧಿಕಾರ ನೀತಿಯನ್ನೂ ಆಚರಣೆಯನ್ನೂ ಉಗ್ರವಾಗಿ ಖಂಡಿಸಿತು. ಪರಕೀಯರ ಗುಲಾಮಗಿರಿಯನ್ನು ಭದ್ರಪಡಿಸುವ ಯಾವ ಪರಿಸ್ಥಿತಿಯನ್ನೂ ಇನ್ನು ಎಂದಿಗೂ ಒಪ್ಪಲು ಸಾಧ್ಯವಿಲ್ಲವೆಂದಿತು.

ಆದರೂ ಸುಮ್ಮನೆ ಕೈಕಟ್ಟಿ ಕುಳಿತು ನಿಕ್ಷೇತನ ಪ್ರೇಕ್ಷಕರಾಗಿ ಮುಂಬರುವ ದುರಂತ ನಾಟಕ ನೋಡಲು ಸಾಧ್ಯವಿರಲಿಲ್ಲ. ಮುತ್ತಿಗೆಯೇ ಸಂಭವಿಸಿದರೆ ಭಾರತದ ಜನಕೋಟಿ ಏನು ಮಾಡಬೇಕೆಂದು ಜನರಿಗೆ ತಿಳಿವಳಿಕೆ ಕೊಡಬೇಕಾಗಿತ್ತು. ಬ್ರಿಟಿಷರ ನೀತಿಯಿಂದ ಕುಪಿತರಾಗಿ ಅಸಮಾಧಾನಗೊಂಡಿದ್ದರೂ ಬ್ರಿಟಿಷರ ಅಥವ ಮಿತ್ರ ರಾಷ್ಟ್ರಗಳ ಸೈನ್ಯಗಳ ಚಲನವಲನಗಳಿಗೆ ಯಾವ ಆತಂಕವನ್ನೂ ಮಾಡಬಾರದೆಂದೂ, ಆ ರೀತಿ ಮಾಡಿದರೆ ಶತ್ರುವಿಗೆ ಪರೋಕ್ಷ ಸಹಾಯ ಮಾಡಿದಂತಾಗುವುದೆಂದೂ, ತಿಳಿಸಿದೆವು. ಯಾವ ಸಂದರ್ಭದಲ್ಲೂ ಶತ್ರುವಿಗೆ ತಲೆಬಾಗಬಾರದೆಂದೂ, ಆತನ ಆಜ್ಞೆಗಳನ್ನು ಪಾಲಿಸಲಾಗದೆಂದೂ, ಆತನಿಂದ ಯಾವ ಉಪಕಾರವನ್ನೂ ಪಡೆಯಬಾರದೆಂದೂ ತಿಳಿಸಿದೆವು. ಜನರ ಮನೆಮಠ, ಭೂಮಿಕಾಣಿ