ಪುಟ:ಭಾರತ ದರ್ಶನ.djvu/೪೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೊನೆಯ ಅಂಕ ೩

೪೨೭

ಈ ಎಲ್ಲ ತೊಂದರೆಗಳು ಸ್ಪಷ್ಟ ಇದ್ದವು. ಗಾಂಧಿಜಿಯ ಜೊತೆ ದೀರ್ಘ ಚರ್ಚೆ ಮಾಡಿದರೂ ಒಬ್ಬರನ್ನೊಬ್ಬರು ಪರಿವರ್ತಿಸಲು ಸಾಧ್ಯವಾಗಲಿಲ್ಲ. ತೊಂದರೆ, ಅಪಾಯ ಮತ್ತು ಹಾನಿಗಳು ನಾವು ಯಾವ ಕಾರ್ಯಾಚರಣೆ ಅಥವ ಕಾರ್ಯನಿರಸನ ಮಾರ್ಗ ಹಿಡಿದರೂ ಹಿಂದೆ ಕಾದೇ ಇದ್ದವು. ಸರಿಯಾಗಿ ತೂಕಮಾಡಿ ಕಡಮೆ ಅಪಾಯಕರ ಇರುವುದನ್ನು ಆರಿಸುವುದು ಮಾತ್ರ ಉಳಿದಿತ್ತು. ಪರಸ್ಪರ ಚರ್ಚೆಯಿಂದ ಮಸಕಾಗಿದ್ದ ಎಷ್ಟೋ ಅಸ್ಪಷ್ಟ ವಿಷಯಗಳು ತಿಳಿಯಾದವು. ಗಾಂಧಿಜಿಯ ಗಮನಕ್ಕೆ ತಂದ ಅನೇಕ ಅಂತರ ರಾಷ್ಟ್ರೀಯ ಪ್ರಶ್ನೆಗಳನ್ನು ಅವರು ಅರ್ಥಮಾಡಿಕೊಂಡರು. ಆಮೇಲೆ ಅವರ ಬರವಣಿಗೆಗಳಲ್ಲಿ ಒಂದು ವ್ಯತ್ಯಾಸ ಕಂಡು ಬಂದಿತು. ಅಂತರ ರಾಷ್ಟ್ರೀಯ ಪ್ರಶ್ನೆಗಳಿಗೆ ಅವರೂ ಪ್ರಾಮುಖ್ಯತೆ ಕೊಟ್ಟು ಭಾರತದ ಪ್ರಶ್ನೆಯನ್ನು ವಿಶಾಲ ದೃಷ್ಟಿಯಿಂದ ನೋಡತೊಡಗಿದರು. ಆದರೆ ಅವರ ಮೂಲ ನಿಲುವಿನಲ್ಲಿ ಮಾತ್ರ ವ್ಯತ್ಯಾಸವಾಗಲಿಲ್ಲ. ಭಾರತದಲ್ಲಿ ಬ್ರಿಟಿಷರ ನಿರಂಕುಶ ಅಧಿಕಾರ ಮತ್ತು ದಬ್ಬಾಳಿ ಕೆಗೆ ನಿಕ್ಷೇತನರಾಗಿ ತಲೆಬಾಗಬಾರದೆಂದೂ, ಯಾವ ರೀತಿಯಲ್ಲಾದರೂ ಪ್ರತಿಭಟಿಸಬೇಕೆಂದೂ ಗಾಂಧಿಜಿ ಬಹಳ ಕಾತರರಿದ್ದರು. ಆಗ ತಲೆ ಬಾಗುವುದೆಂದರೆ ಭಾರತದ ಬೆನ್ನು ಮೂಳೆ ಪುಡಿ ಪುಡಿಮಾಡಿದಂತೆ, ಆತ್ಮನಾಶಮಾಡಿಕೊಂಡಂತೆ; ಮತ್ತು ಯುದ್ಧ ಯಾವ ಸ್ವರೂಪವನ್ನೆ ತಾಳಲಿ, ಅದರ ಪರಿಣಾಮ ಏನೆ ಆಗಲಿ ಭಾರತದ ಜನತೆಗೆ ಗುಲಾಮಗಿರಿಯೇ ಶಾಶ್ವತ, ಮತ್ತು ಬಹುಕಾಲ ಪರಿಯಂತ ಅವರಿಗೆ ಸ್ವಾತಂತ್ರವೂ ಲಭಿಸಲಾರದು ಎಂದು ಅವರ ಅಭಿಮತವಾಗಿತ್ತು. ಅಲ್ಲದೆ ಯುದ್ಧದಲ್ಲಿ ತಾತ್ಕಾಲಿಕ ಸೋಲಾಗಿ ಹಿಮ್ಮೆಟ್ಟಬೇಕಾದರೂ ಯಾವ ಬಗೆಯ ಪ್ರತಿಭಟನೆಯನ್ನೂ ತೋರದೆ ಪರಾಕ್ರಮಣಕ್ಕೆ ದಾರಿ ಬಿಟ್ಟು ತಲೆಬಾಗಿದಂತಾಗುವುದು. ನಮ್ಮ ಜನತೆಯ ಪೂರ್ಣ ನೈತಿಕ ಪತನವೂ ಆಗುತ್ತಿತ್ತು. ಕಳೆದ ಕಾಲು ಶತಮಾನದ ನಿರಂತರ ಸ್ವಾತಂತ್ರದ ಹೋರಾಟದಿಂದ ಸಂಪಾದಿಸಿದ ಶಕ್ತಿ ಸಾಮರ್ಥವೆಲ್ಲ ನಿರರ್ಥಕವಾಗುತ್ತಿತ್ತು. ಪ್ರಪಂಚವು ಭಾರತದ ಸ್ವಾತಂತ್ರ್ಯದ ಬೇಡಿಕೆಯನ್ನೇ ಮರೆತು ಯುದ್ಧಾನಂತರದ ಪ್ರಶ್ನೆಗಳನ್ನೆಲ್ಲ ಹಿಂದಿನ ಸಾಮ್ರಾಜ್ಯವಾದದ ಆಸೆ ಮತ್ತು ಅವಶ್ಯಕತೆಗಳಿಂದಲೇ ನಿರ್ಣಯ ಮಾಡುವುದಕ್ಕೆ ಅವಕಾಶಕೊಟ್ಟಂತಾಗುತ್ತಿತ್ತು. ಭಾರತ ಸ್ವತಂತ್ರವಾಗಬೇಕೆಂದು ಅವರ ಉತ್ಕಟೇಚ್ಛೆಯಾದರೂ ಭಾರತವು ಅವರಿಗೆ ಕೇವಲ ಮಾತೃಭೂಮಿಯಾಗದೆ ಇನ್ನೂ ದೊಡ್ಡದಿತ್ತು. ಅದು ಅವರಿಗೆ ಪ್ರಪಂಚದ ಎಲ್ಲ ಅಧೀನ ರಾಷ್ಟ್ರಗಳ ಮತ್ತು ದಲಿತ ಜನಾಂಗಗಳ ಸಂಕೇತವಾಗಿತ್ತು. ಪ್ರಪಂಚದ ಎಲ್ಲ ಕಾರ್ಯನೀತಿಯನ್ನು ಈ ದೃಷ್ಟಿಯಿಂದ ನೋಡಿದರು. ಭಾರತವು ಸ್ವತಂತ್ರವಾಗದೆ ಹೋದರೆ ಇತರ ಅಧೀನ ರಾಷ್ಟ್ರಗಳೂ, ದಲಿತ ಜನಾಂಗಗಳೂ ತಮ್ಮ ಗುಲಾಮಗಿರಿಯಲ್ಲೇ ಇರಬೇಕಾಗುವುದಲ್ಲದೆ ಯುದ್ಧವು ನಿರರ್ಥಕ ಹೋರಾಟವಾಗುವುದು. ಯುದ್ಧದ ನೀತಿಮೂಲದ ಪರಿವರ್ತನೆ ಅತ್ಯವಶ್ಯವಿತ್ತು. ಸೈನ್ಯಗಳು, ನಾವಿಕಾ ಪಡೆಗಳು, ವಿಮಾನಪಡೆಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅಧಿಕ ಹಿಂಸಾತ್ಮಕ ಶಕ್ತಿಯಿಂದ ಕಾರ್ಯಾಚರಣೆ ಕೈಗೊಂಡು ಜಯಗಳಿಸಬಹುದು. ಆದರೆ ಈ ಜಯದಿಂದ ಬರುವ ಫಲವೇನು? ಶಸ್ತ್ರಸಜ್ಜಿತ ಯುದ್ಧಕ್ಕೆ ಸಹ ಒಂದು ನೈತಿಕ ಬೆಂಬಲ ಬೇಕು. “ದೇಹ ಬಲಕ್ಕಿಂತ ನೈತಿಕ ಬಲ ಒಂದಕ್ಕೆ ನೂರರಷ್ಟು ಹೆಚ್ಚು ಎಂದು ನೆಪೋಲಿಯನ್ ಹೇಳಿದನಲ್ಲವೇ? ಪ್ರಪಂಚದಲ್ಲಿ ಎಲ್ಲ ಕಡೆಯಲ್ಲಿ ಪರದಾಸ್ಯ ಮತ್ತು ಸುಲಿಗೆಯಲ್ಲಿ ಸಿಕ್ಕು ನರಳುತ್ತಿದ್ದ ಕೋಟ್ಯಾನುಕೋಟಿ ಜನರಿಗೆ ತಮ್ಮ ಸ್ವಾತಂತ್ರ್ಯಕ್ಕಾಗಿ ಈ ಯುದ್ಧ ಎಂಬ ಭಾವನೆ ಉಂಟಾದರೆ ಸಣ್ಣ ಯುದ್ಧ ದೃಷ್ಟಿಯಿಂದ ಮಾತ್ರ ಅಲ್ಲದೆ ಮುಂಬರುವ ಶಾಂತಿಯ ದೃಷ್ಟಿಯಿಂದ ಸಹ ಅದರ ನೈತಿಕ ಪರಿಣಾಮ ಅತಿ ಅಮೂಲ್ಯವಾಗುತ್ತದೆ, ಯುದ್ಧದ ನೀತಿ ಮತ್ತು ಗುರಿಯನ್ನು ಬದಲಾಯಿಸಿ, ಸಂಶಯದಿಂದ ಸುಮ್ಮನೆ ಕುಳಿತು ದುರುಗುಟ್ಟಿ ನೋಡುತ್ತಿದ್ದ ಕೋಟ್ಯಂತರ ಜನರ ಹೃದಯ ಪರಿವರ್ತಿಸಿ, ಅವರ ಉತ್ಸಾಹಭರಿತ ಸಹಕಾರ ಪಡೆಯಲು ಯುದ್ಧ ಪರಿಸ್ಥಿತಿಯ ವಿಷಮ ಸನ್ನಿವೇಶವೇ ಸಾಕಾಗಿತ್ತು, ಈ ಒಂದು ಅದ್ಭುತ ಪವಾಡವು ಮಾತ್ರ ಸಾಧ್ಯವಾದರೆ ಅಕ್ಷ ರಾಷ್ಟ್ರಗಳ ಸೈನ್ಯಶಕ್ತಿ ಎಲ್ಲ ನಿರರ್ಥಕವಾಗ ಬಹುದು; ಖಂಡಿತ ಅವರ ಪತನವೂ ಆಗಬಹುದು. ಪ್ರಪಂಚದ ಈ ಅದ್ಭುತ ಶಕ್ತಿಯಿಂದ ಅಕ್ಷ ರಾಷ್ಟ್ರಗಳ ಜನರಲ್ಲಿ ಅಧೈರ್ಯ ಸಹ ಹುಟ್ಟಬಹುದು. ಎಂದು ಗಾಂಧಿಜಿ ಭಾವಿಸಿದರು.

ಭಾರತದ ಜನತೆಯು ಕಾರ್ಯಶೂನ್ಯ ಮನೋಭಾವನೆಯಿಂದ ಕುರಿಗಳಂತೆ ತಲೆಬಾಗದೆ,