ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೪೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೪೯೨
ಭಾರತ ದರ್ಶನ

ತ್ತದೆ; ಇತರ ಕಡೆ ದೊರೆಯದ ವಸ್ತುಗಳ ರಫಿಗೆ ಮಾತ್ರ ಅವಕಾಶ ದೊರೆಯುತ್ತದೆ. ಜನರ ಕೊಳ್ಳುವ ಶಕ್ತಿಗೆ ಅನುಸಾರವಾಗಿ ವೆಚ್ಚದಶಕ್ತಿ ಮಿತಿಗೊಳಿಸಬೇಕಾಗುತ್ತದೆ. ಜನರ ಕೊಳ್ಳುವ ಶಕ್ತಿ ವೃದ್ಧಿಗೊಳ್ಳಬೇಕಾದರೆ ಮೂಲ ಬದಲಾವಣೆಗಳಾಗದೆ ಸಾಧ್ಯವಿಲ್ಲ. ಪ್ರಪಂಚದ ಎಲ್ಲ ಕಡೆಗಳಲ್ಲಿ ಜನರ ಜೀವನಮಟ್ಟ ತಕ್ಕಮಟ್ಟಿಗೆ ಉನ್ನತಿಗೊಂಡರೆ ಮಾತ್ರ ಅಂತರ ರಾಷ್ಟ್ರೀಯ ವ್ಯಾಪಾರ ಮತ್ತು ವಸ್ತು ವಿನಿಮಯ ಹೆಚ್ಚು ಅಭಿವೃದ್ಧಿಯಾಗುತ್ತವೆ. ಆದರೆ ಆ ಜೀವನಮಟ್ಟ ಏರುವ ಮುಂಚೆ ಹಿಂದುಳಿದ ಮತ್ತು ಅಧೀನ ಸಾಮ್ರಾಜ್ಯ ರಾಷ್ಟ್ರಗಳಲ್ಲಿ ವಸ್ತು ನಿರ್ಮಾಣ ಮತ್ತು ಹಂಚಿಕೆಯ ಮೇಲಿನ ರಾಜಕೀಯ ಮತ್ತು ಆರ್ಥಿಕ ನಿರ್ಬಂಧಗಳು ನಾಶವಾಗಬೇಕು. ಅಂದರೆ ಮಹಾಪರಿವರ್ತನೆಗಳ ಪರಿಣಾಮವಾಗಿ ಇಂದಿನ ವ್ಯವಸ್ಥೆಗಳ ಕೀಲುತಪ್ಪಿ ಹೊಸ ವ್ಯವಸ್ಥೆ ಅನುಷ್ಠಾನಕ್ಕೆ ಬರಬೇಕು.

ಈ ಹಿಂದೆ ಇಂಗ್ಲೆಂಡಿನ ಆರ್ಥಿಕ ರಚನೆಯು ದೊಡ್ಡ ರಫ್ತು ವ್ಯಾಪಾರ, ಪರದೇಶಗಳಲ್ಲಿ ಬಂಡವಾಳ ವಿನಿಯೋಗ, ಲಂಡನ್ ನಗರದ ಹಣಕಾಸಿನ ನಾಯಕತ್ವ, ವಿಶಾಲ ಸಮುದ್ರ ವ್ಯಾಪಾರದ ಸಾರಿಕೆ ಇವುಗಳ ಆಧಾರದ ಮೇಲೆ ರಚಿತವಾಗಿತ್ತು. ಯುದ್ಧಕ್ಕೆ ಮುಂಚೆ ಬ್ರಿಟನ್ನಿನ ಆಹಾರದಲ್ಲಿ ಶೇಕಡ ೫೦ ರಷ್ಟು ಹೊರಗಿನಿಂದ ಬರಬೇಕಾಗಿತ್ತು. ವಿಶೇಷ ಶ್ರಮಪಟ್ಟು ಆಹಾರ ಉತ್ಪತ್ತಿ ಹೆಚ್ಚಿಸಿರುವುದರಿಂದ ಈಚೆಗೆ ಈ ಪರಾವಲಂಬನೆ ಸ್ವಲ್ಪ ಕಡಮೆಯಾಗಿರಬಹುದು. ಈ ಆಹಾರ ಆಮದು ಮತ್ತು ಕಚ್ಚಾ ಮಾಲುಗಳಿಗೆ ತಾನು ತಯಾರಿಸಿದ ನಯಮಾಲು, ಬಂಡವಾಳ, ಹಡಗಿನ ಸಾರಿಗೆ, ಹಣಕಾಸಿನ ಸಲಹೆ ಮತ್ತು ಇವರ (ಅವ್ಯಕ್ತ' ರಫ್ತುಗಳೇ ಅದು ತೆರುವ ಬೆಲೆಯಾಗಿತ್ತು. ವಿದೇಶ ವ್ಯಾಪಾರ, ಅದರಲ್ಲೂ ಮುಖ್ಯವಾಗಿ ರಫ್ತು ವ್ಯಾಪಾರ, ಬ್ರಿಟಿಷ್ ಆರ್ಥಿಕ ರಚನೆಯ ಮುಖ್ಯ ಜೀವಮೂಲವಾಗಿತ್ತು. ಅಧೀನ ರಾಷ್ಟ್ರಗಳ ಮೇಲೆ ಸರ್ವಾಧಿಕಾರ ಆಡಳಿತ ನಡೆಸುತ್ತ ಸಾಮ್ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಒಂದು ಬಗೆಯ ಸಮತೋಲನ ಕಲ್ಪಿಸಿಕೊಂಡು ಈ ಆರ್ಥಿಕ ರಚನೆ ಕಾಪಾಡಿಕೊಂಡರು. ಈ ಸರ್ವಾಧಿಕಾರದ ಹತೋಟ ಮತ್ತು ವ್ಯವಸ್ಥೆ ಗಳಿಂದ ಅಧೀನ ರಾಷ್ಟ್ರಗಳಿಗೆ ಅಪಾರ ನಷ್ಟವಾಯಿತು. ಮುಂದೆ ಪುನಃ ಈ ಆಡಳಿತ ನಡೆಸಲು ಸಾಧ್ಯವಿಲ್ಲ. ಬ್ರಿಟನ್ನಿನ ಹೊರದೇಶದ ಬಂಡವಾಳ ಕರಗಿ ಹೋಗಿದೆ ; ಅಪಾರ ಸಾಲದ ಹೊರೆ ಅದರ ಮೈಮೇಲೆ ಬಂದಿದೆ ; ಲಂಡನ್ನಿನ ಹಣಕಾಸಿನ ನಾಯಕತ್ವ ದಿವಾಳಿ ಎದ್ದಿದೆ. ಅಂದರೆ ಯುದ್ಧಾನಂತರ ದಿನಗಳಲ್ಲಿ ಇನ್ನು ಮುಂದೆ ಇಂಗ್ಲೆಂಡ್ ತನ್ನ ರಫ್ತು ವ್ಯಾಪಾರ ಮತ್ತು ಸಾಮಾನು ಸಾರಿಗೆಯನ್ನೇ ಹೆಚ್ಚು ಅವಲಂಬಿಸಬೇಕಾಗಿದೆ. ಆದರೂ ರಫ್ತು ವ್ಯಾಪಾರ ಹೆಚ್ಚಿಸುವುದೂ ಹಾಗಿರಲಿ ಹಿಂದಿನ ಮಟ್ಟದಲ್ಲಿ ಇಟ್ಟು ಕೊಳ್ಳುವುದೂ ಸಹ ಬಹಳ ಕಠಿಣವಿದೆ.

ಗ್ರೇಟ್ ಬ್ರಿಟನ್ನಿನ ಆಮದು ವ್ಯಾಪಾರ (ಪುನಃ ಹೊರಗೆ ಕಳುಹಿಸಿದ್ದನ್ನು ಬಿಟ್ಟು) ೧೯೩೬ ರಿಂದ ೩೮ರ ವರೆಗೆ ಮೂರು ವರ್ಷಗಳಲ್ಲಿ ೮೬೬,೦೦೦,೦೦೦ ಪೌಂಡುಗಳಾಗಿತ್ತು. ಅದರ ತೀರ್ಮಾನ ವಿವರ ಎಂದರೆ ರಫ್ತು ವ್ಯಾಪಾರ ೪೭೮ ಮಿಲಿಯನ್ ಪೌಂಡುಗಳು ಹೊರದೇಶದ ಬಂಡವಾಳದ ಉತ್ಪತ್ತಿ , ೩೦೩ ಹಡಗಿನ ಸಾರಿಗೆ ೧೦೫ ಹಣಕಾಸಿನ ಸಲಹೆ ಒಳಗೆ ಬಂದದ್ದು ಒಟ್ಟು ೮೬L ಹೊರಗಿನ ಬಂಡವಾಳದಿಂದ ಬರುವ ಉತ್ಪತ್ತಿಯ ಬದಲು (ಅಮೆರಿಕದ ಲೆಂಡ್-ಲೀಸ್ ' ಸಾಲ ಬಿಟ್ಟು) ಈಗ ಭಾರತ, ಈಜಿಪ್ಟ್, ಅರ್ಜೆಂಟೈನಾ ಮತ್ತು ಇತರ ದೇಶಗಳಿಂದ ಸಾಮಾನು ಮತ್ತು ಇತರ ಸಹಾಯ ಪಡೆದುದರ ಸಲುವಾಗಿ ದೊಡ್ಡ ಸಾಲದ ಹೊರೆ ಬಂದಿದೆ. ಯುದ್ಧ ಮುಗಿವ ಹೊತ್ತಿಗೆ ಈ ಸಾಲದ ಮೊತ್ತ ೩೦೦೦ ಮಿಲಿಯ ಪೌಂಡುಗಳಾಗಬಹುದೆಂದು ಲಾರ್ಡ್ ಕೇನ್ ಅಂದಾಜುಮಾಡಿದ್ದಾನೆ. ಶೇಕಡ ೫%