ರಂತೆ ಆದರೂ ವರ್ಷಕ್ಕೆ ೧೫೦ ಮಿಲಿರ್ಯ ಪೌಂಡ್ ಬಡ್ಡಿಯಾಗುತ್ತದೆ. ಆದ್ದರಿಂದ ಯುದ್ಧ ಪೂರ್ವ ವರ್ಷಗಳ ಲೆಕ್ಕದಂತ ಗ್ರೇಟ್ ಬ್ರಿಟನ್‌ಗೆ ೩೦೦ ಮಿಲಿಯನ್ ಪೌಂಡು ಹಣ ಒಳಗೆ ಬರುತ್ತದೆ. ರಫ್ತು ವ್ಯಾಪಾರ ಮತ್ತು ಇತರ ಕೆಲಸಗಳಿಂದ ಉತ್ಪತ್ತಿ ಹೆಚ್ಚದಿದ್ದರೆ ಜನರ ಜೀವನಮಟ್ಟ ಕೆಳಗೆ ಇಳಿಯ ಬೇಕಾಗುತ್ತದೆ.
ಬ್ರಿಟನ್ನಿನ ಯುದ್ಧಾನಂತರ ನೀತಿಯಲ್ಲಿ ಇದೇ ಮುಖ್ಯ ಸಮಸ್ಯೆ, ತನ್ನ ಆರ್ಥಿಕ ರಚನೆ ಉಳಿಸಿಕೊಳ್ಳಬೇಕಾದರೆ ಕೆಲವು ಅನಿರ್ವಾಹ ಬದಲಾವಣೆ ಮಾತ್ರ ಮಾಡಿಕೊಂಡು ಅಧೀನವಿರುವ ಸಾಮ್ರಾಜ್ಯ ಉಳಿದರೆ ಸಾಕೆಂದು ಅದರ ಇಷ್ಟ. ಅಧೀನ ಸಾಮ್ರಾಜ್ಯವಿರಲಿ ಇಲ್ಲದಿರಲಿ, ಯಾವುದಾದರೊಂದು ರಾಷ್ಟ್ರ ಸಮುದಾಯದ ಪಾಲುಗಾರಿಕೆ ಮತ್ತು ಬೆಂಬಲದಿಂದ ಮಾತ್ರ ಅಪಾರ ಸಂಪತ್ಸಮೃದ್ಧಿ ಇರುವ ಅಮೆರಿಕದ ಸಂಯುಕ್ತ ಸಂಸ್ಥಾನ ಮತ್ತು ಸೋವಿಯಟ್ ಯೂನಿಯನ್ ಮಹಾರಾಷ್ಟ್ರಗಳ ಜೊತೆಗೆ ರಾಜಕೀಯ ಮತ್ತು ಆರ್ಥಿಕ ಸಮಸ್ಯೆಗಳಲ್ಲಿ ಸರಿಸಮಾನತೆಯಿಂದ ಪ್ರಮುಖ ಪಾತ್ರವಹಿಸಲು ಸಾಧ್ಯ. ಆದರೆ ತನ್ನ ಸಾಮ್ರಾಜ್ಯ ಮುಂದುವರಿಸಿಕೊಂಡು, ಇದ್ದುದು ಉಳಿಸಿಕೊಂಡು, ಸಾಧ್ಯವಾದರೆ ಹೊಸರಾಜ್ಯಗಳ ಮೇಲೆ ಉದಾಹರಣೆಗೆ ತಾಯ್ಲೆಂಡ್-ತನ್ನ ಪ್ರಭಾವ ಹೆಚ್ಚಿಸಿಕೊಂಡು ಬಾಳಬೇಕೆಂದೇ ಅದರ ಆಸೆ. ಅದೇ ಉದ್ದೇಶದಿಂದ ಡೊಮಿನಿಯನ್ ರಾಷ್ಟ್ರಗಳು ಮತ್ತು ಪಶ್ಚಿಮ ಯೂರೋಪಿನ ಸಣ್ಣ ಸಣ್ಣ ರಾಷ್ಟ್ರಗಳ ಸಮೀಪ ಸಂಘಟನೆ ಸಾಧಿಸಬೇಕೆಂದು ಅದರ ಪ್ರಯತ್ನ. ಫ್ರೆಂಚ್ ಮತ್ತು ಡಚ್ ಸಾಮ್ರಾಜ್ಯಗಳು ಬ್ರಿಟಿಷ್ ನೀತಿಯನ್ನು ಸಂಪೂರ್ಣ ಸಮರ್ಥಿಸುತ್ತವೆ. ಡಚ್ ಸಾಮ್ರಾಜ್ಯ ಬ್ರಿಟಿಷ್ ಸಾಮ್ರಾಜ್ಯದ ಒಂದು ಉಪಗೃಹ, ಬ್ರಿಟಿಷ್ ಸಾಮ್ರಾಜ್ಯವಿಲ್ಲದೆ ಡಚ್ ಸಾಮ್ರಾಜ್ಯ ಉಳಿಯುವಂತೆ ಇಲ್ಲ.
ಹಳೆಯ ಭಾವನೆಗಳಿಗೆ ಶರಣುಹೋದ ಜನರಿಗೆ ಹಳೆಯ ದೃಷ್ಟಿ ಮತ್ತು ಆದರ್ಶಗಳ ಆಧಾರದ ಮೇಲೆ ರಚಿತವಾದ ಬ್ರಿಟಿಷ್ ನೀತಿಯ ನಿಲುವು ಅರ್ಥಮಾಡಿಕೊಳ್ಳುವುದು ಸುಲಭ. ಆದರೂ ಈ ಹಳೆಯ ಹತ್ತೊಂಭತ್ತನೆಯ ಶತಮಾನದ ಆರ್ಥಿಕನೀತಿಯಲ್ಲಿ ಬ್ರಿಟನ್ನು ಇಂದು ಎದುರಿಸಬೇಕಾದ ತೊಂದರೆಗಳು ಅನೇಕ ಇವೆ. ಒಟ್ಟಿನಲ್ಲಿ ಅದಕ್ಕೆ ಬುಡ ಭದ್ರವಿಲ್ಲ; ಅದರ ಆರ್ಥಿಕ ನೀತಿ ಆಧುನಿಕ ಪರಿಸ್ಥಿತಿಗೆ ಅನುಗುಣವಾಗಿಲ್ಲ; ಅದರ ಆರ್ಥಿಕ ಸಂಪತ್ತು ಅತ್ಯಲ್ಪ, ಮತ್ತು ಅದರ ಕೈಗಾರಿಕೋದ್ಯಮದ ಮತ್ತು ಸೈನ್ಯಶಕ್ತಿ ಮೊದಲಿನ ಮಟ್ಟದಲ್ಲಿರಲು ಸಾಧ್ಯವಿಲ್ಲ. ಹಳೆಯ ಆರ್ಥಿಕ ರಚನೆ ಮುಂದುವರಿಸಲು ಮಾಡಿರುವ ಸಲಹೆಗಳಲ್ಲಿ ಅತ್ಯವಶ್ಯ ಬೇಕಾದ ಭದ್ರತೆ ಇಲ್ಲ; ಏಕೆಂದರೆ ಅಧೀನರಾಜ್ಯಗಳಲ್ಲಿ ಸದಾ ಕೊನೆಇಲ್ಲದ ಘರ್ಷಣೆ, ಸುರಕ್ಷತೆಯ ಅಭಾವ, ವಿರೋಧ ಭಾವನೆ ಬೆಳೆದು ಬ್ರಿಟನ್ನಿನ ಭವಿಷ್ಯ ಇನ್ನೂ ಕಠಿಣತಮವಾಗುತ್ತದೆ. ತಮ್ಮ ಜೀವನ ಮಟ್ಟ ಮೊದಲಿನ ಅಂತಸ್ತಿನಲ್ಲೇ ಇರಬೇಕು, ಸಾಧ್ಯವಾದರೆ ಉತ್ತಮಪಡಿಸಬೇಕು ಎಂಬ ಬ್ರಿಟಿಷರ ಇಚ್ಛೆ ಸುಲಭ ಅರ್ಥವಾಗುತ್ತದೆ. ಆದರೆ ಬ್ರಿಟನ್ನಿನ ರಫ್ತು ಪದಾರ್ಥಗಳಿಗೆ ಸುರಕ್ಷಿತಪೇಟೆ ಕಾದಿರಿಸಿ, ಅಗ್ಗದ ಕಚ್ಚಾ ಮಾಲು ಮತ್ತು ಆಹಾರ ಸರಬರಾಜಿಗೆ ಅಧೀನ ರಾಜ್ಯಗಳ ಮತ್ತು ಇತರ ರಾಷ್ಟ್ರಗಳ ಹತೋಟ ಪೂರ್ಣ ಅವರ ಕೈಯಲ್ಲಿ ಇದ್ದರೆ ಮಾತ್ರ ಅದು ಸಾಧ್ಯ. ಅಂದರೆ ಏಷ್ಯ ಮತ್ತು ಆಫ್ರಿಕದ ಕೋಟ್ಯಾನುಕೋಟಿ ಜನ ಅರೆಹೊಟ್ಟೆಯಲ್ಲಿದ್ದು ಬ್ರಿಟನ್ನಿನ ಜೀವನ ಮಟ್ಟವನ್ನು ಉನ್ನತ ಮಟ್ಟದಲ್ಲಿ ಉಳಿಸಬೇಕೆಂದು ಬ್ರಿಟನ್ನಿನ ಜೀವನ ಮಟ್ಟ ಕಡಿಮೆಮಾಡಿರೆಂದು ಯಾರೂ ಹೇಳುವುದಿಲ್ಲ; ಆದರೆ ಅಮಾನುಷ ಜೀವನ ಕೂಪಕ್ಕೆ ತಮ್ಮನ್ನು ತಳ್ಳಿರುವ ಸಾಮ್ರಾಜ್ಯನೀತಿ ಮುಂದುವರಿಸಿ ಆ ಮಟ್ಟ ಕಾಪಾಡಲು ಏಷ್ಯ ಮತ್ತು ಆಫ್ರಿಕದ ಜನ ಯಾರೂ ಒಪ್ಪುವುದಿಲ್ಲ. ಯುದ್ಧ ಪೂರ್ವದಲ್ಲಿ ಬ್ರಿಟನ್ನಿನ ಪ್ರತಿಯೊಬ್ಬ ವ್ಯಕ್ತಿಯ ಕೊಳ್ಳುವ ಶಕ್ತಿ ವರ್ಷಕ್ಕೆ ೯೭ ಪೌಂಡು ಇತ್ತು; (ಅಮೆರಿಕದಲ್ಲಿ ಇದು ಇನ್ನೂ ಹೆಚ್ಚು) ಭಾರತದಲ್ಲಿ ಅದು ೬ ಪೌಂಡುಗಳಿಗಿಂತ ಕಡಿಮೆ ಇತ್ತು. ಈ ಅಗಾಧ ವ್ಯತ್ಯಾಸ ಸಹಿಸುವಂತೆ ಇಲ್ಲ. ಸಾಮ್ರಾಜ್ಯ ಆರ್ಥಿಕ ನೀತಿಯಿಂದ ವರಮಾನ ಕ್ರಮೇಣ ಕಡಮೆಯಾಗುತ್ತ ಬಂದು ಕೊನೆಗೆ ಅಧಿಕಾರ ನಡೆಸುವ ಸಾಮ್ರಾಟ ರಾಷ್ಟ್ರಕ್ಕೆ ಹಾನಿ ತರುತ್ತದೆ. ಅಮೆರಿಕೆಯ ಸಂಯುಕ್ತ ಸಂಸ್ಥಾನಗಳ ಜನರಿಗೆ ಇದು ಸಂಪೂರ್ಣ ಅರ್ಥವಾಗಿದೆ. ಆದ್ದರಿಂದಲೇ ಕೈಗಾರಿಕೋದ್ಯಮ ಮತ್ತು ಆಡಳಿತ ಸ್ವಾತಂತ್ರ್ಯ ಹೆಚ್ಚಿಸಿ ಅಧೀನ ರಾಜ್ಯಗಳ ಜನರ ಕೊಳ್ಳುವ ಶಕ್ತಿ ಹೆಚ್ಚಿಸಬೇಕೆಂದು ಅವರ ಇಚ್ಛೆ.