ಪುಟ:ಭಾರತ ದರ್ಶನ.djvu/೮೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೬೮
ಭಾರತ ದರ್ಶನ

ಪ್ರೊಫೆಸರ್ ಮೆಕ್‌ಡೊನೆಲ್‌ರು ತಮ್ಮ ಸಂಸ್ಕೃತ ಸಾಹಿತ್ಯ ಚರಿತ್ರೆಯಲ್ಲಿ “ ಭಾರತೀಯ ಸಾಹಿತ್ಯದ ಪ್ರಾಮುಖ್ಯತೆಯು ಒಟ್ಟಿನಲ್ಲಿ ಅದರ ನವೀನತೆಯಲ್ಲಿದೆ. ಕ್ರಿಸ್ತಪೂರ್ವ ನಾಲ್ಕನೆಯ ಶತಮಾನದ ಅಂತ್ಯಭಾಗದಲ್ಲಿ ಗ್ರೀಕರು ವಾಯವ್ಯದಲ್ಲಿ ದಂಡೆತ್ತಿ ಬಂದಾಗ ಭಾರತೀಯರು ಪರರ ಪ್ರಭಾವವಿಲ್ಲದ ತಮ್ಮದೇ ಒಂದು ರಾಷ್ಟ್ರೀಯ ಸಂಸ್ಕೃತಿಯನ್ನು ಬೆಳೆಸಿಕೊಂಡು ಬಂದಿದ್ದರು. ಆಮೇಲೆ ಪರ್ಷಿಯ ನರು, ಗ್ರೀಕರು, ಸಿಥಿಯನರು, ಮಹಮ್ಮದೀಯರು ಪದೇ ಪದೇ ಅಲೆಅಲೆಯಾಗಿ ದಂಡೆತ್ತಿ ಬಂದು ಜಯಶೀಲರಾದರೂ ಭಾರತೀಯ ಆರ್ಯರ ರಾಷ್ಟಜೀವನ ಮತ್ತು ಸಾಹಿತ್ಯದ ಪ್ರಗತಿ ಮಾತ್ರ ಬ್ರಿಟಿಷರ ಆಳ್ವಿಕೆಯವರೆಗೂ ವ್ಯತ್ಯಸ್ತವಾಗದೆ ನಿರಾತಂಕವಾಗಿ ನಡೆದುಬಂದಿದೆ. ಇಂಡೋ ಯೂರೋ ಪಿಯನ್ ಬುಡಕಟ್ಟಿನ ಯಾವ ಶಾಖೆಯೂ ಈ ರೀತಿ ಪರರ ಸಂಪರ್ಕವಿಲ್ಲದೆ ವಿಕಾಸಗೊಳ್ಳಲಿಲ್ಲ. ಚೀನಾ ಒ೦ದರ ವಿನಾ ಬೇರಾವ ದೇಶವೂ ಈ ರೀತಿ ಮೂರು ಸಾವಿರ ವರ್ಷಗಳಿಂದ ನಿರಾತಂಕವಾಗಿ ಬೆಳೆದು ಬಂದ ಭಾಷೆ ಮತ್ತು ಸಾಹಿತ್ಯ, ಧರ್ಮಶ್ರದ್ಧೆ, ಸಂಪ್ರದಾಯ, ನಾಟಕ ಮತ್ತು ಸಮಾಜ ಪದ್ಧತಿಗಳ ಅಭಿನ್ನ ಚಿತ್ರವನ್ನು ತೋರಲಾರದು.

ಆದರೂ ಭಾರತವು ಸಂಪರ್ಕಶೂನ್ಯವಾಗಿರಲಿಲ್ಲ. ಅದರ ಬಹುಕಾಲದ ಇತಿಹಾಸ ಪರಂಪರೆ ಯಲ್ಲಿ ಇರಾನಿಗಳು, ಗ್ರೀಕರು, ಚೀನಿಗಳು, ಮಧ್ಯ ಏಷ್ಯದವರು ಮತ್ತು ಇತರರ ಅವಿಚ್ಛಿನ್ನ ಸಜೀವ ಸಂಪರ್ಕವಿತ್ತು. ಈ ಸಂಪರ್ಕವಿದ್ದೂ ಅದರ ಮೂಲ ಸಂಸ್ಕೃತಿ ಉಳಿದಿರಬೇಕಾದರೆ ಆ ರೀತಿ ಉಳಿಯಲು ಅದಕ್ಕೆ ಒಂದು ಅಮ್ಮ ತತ್ವವನ್ನು ಕೊಟ್ಟು ಜೀವನರಹಸ್ಯವನ್ನರಿಯುವಂತೆ ಮಾಡಿದ ಯಾವುದೋ ಒಂದು ಅಂತಶಕ್ತಿ, ಆ ಸಂಸ್ಕೃತಿಯಲ್ಲಿಯೇ ಇರಬೇಕು. ಏಕೆಂದರೆ ಅದರ ಈ ಮೂರು ಅಥವ ನಾಲ್ಕು ಸಾವಿರ ವರ್ಷಗಳ ಸಾಂಸ್ಕೃತಿಕ ಪ್ರಗತಿ ಮತ್ತು ಅವಿಚ್ಛಿನ್ನತೆಯು ಅದ್ಭುತ ವಾಗಿದೆ.

ಜಗದ್ವಿಖ್ಯಾತ ವಿದ್ವಾಂಸನೂ, ಪೌರ್ವಾತ್ಯ ಸಂಸ್ಕೃತಿ ವಿಮರ್ಶನ ವಿಚಕ್ಷಣನೂ ಆದ ಮಾಕ್ಸ್ ಮುಲ್ಲರ್ “ ಅತ್ಯಾಧುನಿಕ ಮತ್ತು ಅತಿ ಪ್ರಾಚೀನ ಹಿಂದೂ ದರ್ಶನಗಳಲ್ಲಿ ಮೂರು ಸಾವಿರ ವರ್ಷ ಗಳಿಗೆ ಮಾರಿದ ಒಂದು ನಿಜವಾದ ಅಭೇದ್ಯ ಅವಿಚ್ಛಿನ್ನತೆ ಇದೆ” ಎಂದಿದ್ದಾನೆ. ೧೮೮೨ ರಲ್ಲಿ ಕೇಂಬ್ರಿಜ್ ವಿಶ್ವವಿದ್ಯಾನಿಲಯದಲ್ಲಿ ಕೊಟ್ಟ ಉಪನ್ಯಾಸಗಳಲ್ಲಿ ಅತಿ ಉತ್ಸಾಹದಿಂದ “ ಪ್ರಕೃತಿದತ್ತ ಸಂಪತ್ತು, ಶಕ್ತಿ, ಮತ್ತು ಸೌಂದಯ್ಯಗಳನ್ನು ಕೆಲವು ವಿಷಯಗಳಲ್ಲಿ ಭೂಸ್ವರ್ಗವನ್ನು ಕಾಣ ಬೇಕೆಂದು ಪ್ರಪಂಚದಲ್ಲೆಲ್ಲ ಹುಡುಕಿದರೆ ಅದು ಇಂಡಿಯ, ಮನುಷ್ಯನ ಮನಸ್ಸು ತನ್ನ ಕೆಲವು ಅಪೂರ್ವ ಭಾವನೆಗಳನ್ನು ಸರ್ವಸುಂದರವಾಗಿ ಬೆಳೆಸಿ ಪ್ರಪಂಚಕ್ಕೆ ಮಹಾ ವರಪ್ರದಾನ ಮಾಡಿದುದೆಲ್ಲಿ ; ಜೀವನದ ಮಹಾ ಸಮಸ್ಯೆಗಳ ಮೇಲೆ ಆಳವಾಗಿ ಚಿಂತನಮಾಡಿದುದೆಲ್ಲಿ, ಮತ್ತು ಪ್ಲೇಟೊ, ಕ್ಯಾಂಟ್ ರನ್ನು ಅಭ್ಯಾಸಮಾಡಿದವರ ಮಾನ್ಯ ಮಾಡಬೇಕಾದಂಥ ಸಮಸ್ಯಾ ಪರಿಹಾರಗಳು ಕೆಲವನ್ನು ತೋರಿದುದೆಲ್ಲಿ ಎಂದರೆ ಇಂಡಿಯ, ಗ್ರೀಕರು, ರೋಮನರು, ಒಂದು ಸೆಮಿಟಿಕ್ ಪಂಗಡವಾದ ಯೆಹೂದ್ಯರ ಸಂಸ್ಕೃತಿಯ ನೆರಳಿನಲ್ಲೇ ಬೆಳೆದ ಯುರೋಪಿಯನರಾದ ನಾವು ನಮ್ಮ ಆಂತರಿಕ ಜೀವನವನ್ನು ಸರ್ವವ್ಯಾಪ್ತಿಯುಳ್ಳದ್ದಾಗಿ, ವಿಶ್ವದೃಷ್ಟಿಯುಳ್ಳದ್ದನ್ನಾಗಿ ಪರಿಪೂರ್ಣಮಾಡಿಕೊಳ್ಳ ಬೇಕಾದರೆ, ಇಹಜೀವನದಲ್ಲಿ ಮಾತ್ರವಲ್ಲದೆ ಪುನರ್ಜನ್ಮ ಮತ್ತು ಶಾಶ್ವತ ಜೀವನಕ್ಕೆ ಸಹ ಅತ್ಯವಶ್ಯ ವಾದ ಸಮಾಧಾನವನ್ನು ಪಡೆಯಬೇಕಾದರೆ ಯಾವ ಸಾಹಿತ್ಯದಿಂದ ಎಂದರೆ ಭಾರತೀಯ ಸಾಹಿತ್ಯ ದಿಂದ ಎಂದಿದಾನೆ.

ಸುಮಾರು ಅರ್ಧಶತಮಾನದ ನಂತರ ರೋಮರೋಲಾ ಅದೇ ಧಾಟಿಯಲ್ಲಿ “ ಮನುಷ್ಯನು ಜೀವನದ ಕನಸುಗಳನ್ನು ಕಾಣಲು ಆರಂಭಮಾಡಿದ ಮೊದಲ ದಿನಗಳಿಂದಲೂ ಮಾನವ ಜೀವನದ ಎಲ್ಲ ಕನಸುಗಳಿಗೆ ಈ ಪ್ರಪಂಚದಲ್ಲಿ ಒಂದು ಆಗರವೆಂದರೆ ಇ೦ಡಿಯ ” ಎಂದಿದ್ದಾನೆ.

೯, ಉಪನಿಷತ್ತುಗಳು

ಸುಮಾರು ಕ್ರಿಸ್ತಪೂರ್ವ ೮೦೦ ರ ಕಾಲದ ಉಪನಿಷತ್ತುಗಳು ಇಂಡೋ ಆರರ ಭಾವನಾವಿಕಾ