ಪುಟ:ಭಾರತ ದರ್ಶನ.djvu/೮೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
ಭಾರತ ಸಂಶೋಧನೆ
೬೯

ಸದ ಇನ್ನೊಂದು ದೊಡ್ಡ ಘಟ್ಟ, ಆರರು ಬಂದು ನೆಲಸಿ ಬಹುದಿನಗಳಾಗಿದ್ದವು. ಹೊಸದನ್ನು ಹಳೆಯದರ ಜೊತೆಗೆ ಹೊಂದಿಸಿಕೊಂಡು, ಅನಾಗರಿಕ ಪೂಜಾ ಪದ್ದತಿಗಳ ಹಿನ್ನೆಲೆ ಇದ್ದರೂ ಆರ್ಯರ ಆದರ್ಶ, ಭಾವನೆಗಳ ಪ್ರಭಾವಕ್ಕೊಳಗಾಗಿ ಸ್ತಿಮಿತವೂ, ಸಂಪದ್ಯುಕ್ತವೂ ಆದ ಒಂದು ನಾಗರಿಕತೆ ನೆಲಸಿತ್ತು. ವೇದಗಳಿಗೆ ಗೌರವ ದೊರೆತರೂ ಆ ಗೌರವದಲ್ಲ ಒಂದು ಅವ್ಯಕ್ತ ವಿಡಂಬನ ದೃಷ್ಟಿ ಇದೆ, ವೇದ ದೇವತೆಗಳಿಂದ ತೃಪ್ತಿಯಿಲ್ಲ. ಪುರೋಹಿತರ ಯಜ್ಞಯಾಗಾದಿಗಳು ಅಪಹಾಸ್ಯಕ್ಕೀಡಾ ಗಿವೆ. ಆದರೂ ಹಿಂದಿನದನ್ನು ಬುಡ ಮೇಲುಮಾಡುವ ಪ್ರಯತ್ನ ವಿಲ್ಲ ; ಅಲ್ಲಿಂದಲೇ ಮುಂದಿನ ಪ್ರಗತಿಯ ಉಗಮವಾಗಿದೆ.

ಉಪನಿಷತ್ತುಗಳಲ್ಲಿ ಅಂತಃಪ್ರೇರಣೆಯ ವಿಚಾರ ದೃಷ್ಟಿ ಇದೆ ; ಮನೋಸಾಹಸ ಮತ್ತು ವಸ್ತು ವಿಷಯಸತ್ಯಾನ್ವೇಷಣೆಯ ಮನೋವೇಗವಿದೆ. ಈ ಸತ್ಯಾನ್ವೇಷಣೆಯ ಮಾರ್ಗ ಆಧುನಿಕ ವಿಜ್ಞಾನಶಾಸ್ತ್ರದ ವಾಸ್ತವಿಕ ಮಾರ್ಗವಲ್ಲದಿದ್ದರೂ, ಆ ಪ್ರದೇಶದಲ್ಲಿಯೇ ಒಂದು ವಿಜ್ಞಾನಮಾರ್ಗದ ಛಾಯೆ ಇದೆ. ಸಿದ್ದಾಂತ ಯಾವುದೂ ಅಡ್ಡ ಬರುವುದಿಲ್ಲ. ಅಲ್ಪ ವಿಷಯಗಳೂ, ಇಂದು ಅರ್ಥವಿಲ್ಲದ ಸಮಂಜಸವಲ್ಲದ ವಿಷಯಗಳೂ ಅನೇಕ ಇವೆ. ಮುಖ್ಯವಾಗಿ ಆತ್ಮಸಾಕ್ಷಾತ್ಕಾರಕ್ಕೆ-ಮೂಲತಃ ಒ೦ದೇ ಆದ ವ್ಯಕ್ತಿಗತ ಆತ್ಮ ಮತ್ತು ಪರಮಾತ್ಮನ-ಜ್ಞಾನಸಾಧನೆಗೆ ಪ್ರಾಮುಖ್ಯತೆ ಕೊಟ್ಟಿವೆ. ವಾಸ್ತವಿಕ ಬಾಹ್ಯ ಪ್ರಪಂಚವನ್ನು ಮಾಯೆಯೆಂದು ಭಾವಿಸಿಲ್ಲ, ಆದರೆ ಒಂದು ಸಾಪೇಕ್ಷ ಭಾವನೆ ಯಿಂದ ಸತ್ಯ, ಅ೦ತಃ ಸತ್ಯತೆಯ ಒಂದು ಭಾವ ಎಂದಿದಾರೆ.

ಉಪನಿಷತ್ತುಗಳಲ್ಲಿ ಅನೇಕ ಅನುಮಾನಗಳಿವೆ. ಅವುಗಳಿಗೆ ಅನೇಕ ವ್ಯಾಖ್ಯಾನಗಳಾಗಿವೆ. ಆದರೆ ಅದು ದಾರ್ಶನಿಕನ ಅಥವ ಪಂಡಿತನ ಕೆಲಸ, ಸಾಮಾನ್ಯ ಒಲವು ಏಕತ್ವವಾದದ ಕಡೆ, ಅವುಗಳ ಪ್ರಯತ್ನ ವೆಲ್ಲ ಭಯಂಕರ ಚರ್ಚೆಗೆ ಎಡೆಗೊಡುತ್ತಿದ್ದ ಆಗಿನ ಕಾಲದ ಭೇದ ವೈಷಮ್ಯಗಳನ್ನು ಕಡಮೆ ಮಾಡುವ ಪ್ರಯತ್ನ ವೆಂದು ಎದ್ದು ಕಾಣುತ್ತದೆ. ಅದರ ಮಾರ್ಗ ಸಂಘಟನೆಯ ಮಾರ್ಗ. ತಂತ್ರಶಕ್ತಿ ಮತ್ತು ಅತಿಮಾನುಷ ಜ್ಞಾನದಲ್ಲಿ ಆಸಕ್ತಿಯನ್ನು ನಿರ್ದಾಕ್ಷಿಣ್ಯವಾಗಿ ಖಂಡಿಸಲಾಗಿದೆ. ಜ್ಞಾನಶೂನ್ಯ ಯಜ್ಞಯಾಗಾದಿಗಳು ವ್ಯರ್ಥ, ಜ್ಞಾನಿಗಳು, ಪಂಡಿತರು ಎಂದು ಭಾವಿಸಿ ಅವುಗಳ ಲ್ಲಿಯೇ ನಿರತರಾದವರು ಕುರುಡನಿಗೆ ಕುರುಡ ಮಾರ್ಗದರ್ಶಕನಾದಂತೆ ಗುರಿಯಿಲ್ಲದೆ ವ್ಯರ್ಥ ತೊಳಲಿ ಗುರಿಮುಟ್ಟದೆ ನಿರಾಶರಾಗುತ್ತಾರೆ' ಎಂದಿದೆ. ವೇದಗಳು ಸಹ ಕೆಳಮಟ್ಟದ ಜ್ಞಾನ, ಆತ್ಮ ಸಾಕ್ಷಾತ್ಕಾರದ ಜ್ಞಾನವೇ ದಿವ್ಯಜ್ಞಾನ, ನೈತಿಕ ಶಿಕ್ಷಣವಿಲ್ಲದೆ ದಾರ್ಶನಿಕಜ್ಞಾನ ನಿಷ್ಪಲ, ತಾತ್ವಿಕ ಸಾಹಸದೊಂದಿಗೆ ಸಾಮಾಜಿಕ ಕಾರ್ಯ ತತ್ಪರತೆಯನ್ನು ಸಮ೦ಜಸಗೊಳಿಸುವ ಪ್ರಯತ್ನ ಸತತವಾಗಿ ನಡೆದಿದೆ. ಜೀವನದ ಕರ್ತವ್ಯ, ಧರ್ಮಗಳ ಪಾಲನೆ ನಿಷ್ಕಾಮ ಕರ್ಮದಿಂದ ನಡೆದಿದೆ.

ಪ್ರಾಯಶಃ ವೈಯಕ್ತಿಕ ಪರಿಪೂರ್ಣತೆಯ ನೀತಿಗೆ ಅತಿ ಪ್ರಾಮುಖ್ಯತೆ ದೊರೆತು ಸಾಮಾಜಿಕ ದೃಷ್ಟಿಗೆ ಧಕ್ಕೆ ಬಂದಿತು. ಪುರುಷನಿಗಿಂತ ಶ್ರೇಷ್ಠವಾದುದು ಇನ್ನೊಂದಿಲ್ಲ ಎಂದು ಉಪನಿಷತ್ತುಗಳು ಸಾರುತ್ತಿವೆ. ಸಮಾಜ ಭದ್ರತೆ ದೃಢಗೊಂಡಿರಬೇಕು ; ಆದ್ದರಿಂದ ಮನುಷ್ಯನ ಮನಸ್ಸೆಲ್ಲ ಆತ್ಮೀನ ತಿಯ ಕಡೆಗೆ ಹೊರಳಿದೆ. ಈ ಅನ್ವೇಷಣೆಯಲ್ಲಿ, ಅಂತರಿಕಗಳಲ್ಲಿ, ಅ೦ತರ೦ಗದ ಅಂತರಾಳಗಳಲ್ಲಿ ಅವನ ಮನಸ್ಸು ಅಲೆಯಿತು. ಚೀನ, ಗ್ರೀಸ್, ರೋಮ್ ರಾಜ್ಯಗಳು ಒಂದೊಂದು ಕಾಲದಲ್ಲಿ ಒಂದೊಂದು ಜಗತ್ತೇ೦ದ್ರವೆಂದು ಭಾವಿಸಿದ್ದ೦ತೆ ಭಾರತದಲ್ಲಿಯೂ ಆ ಭಾವನೆ ಇದ್ದಿರಬಹುದಾದರೂ ಈ ಪುರಾತನ ಭಾರತೀಯ ದೃಷ್ಟಿ ಒಂದು ಸಂಕುಚಿತ ರಾಷ್ಟ್ರೀಯ ದೃಷ್ಟಿಯಲ್ಲ, “ ಮಾನವ ಪ್ರಪಂ ಚದ ಜೀವನವೆಲ್ಲ ಪರಸ್ಪರ ಅವಲಂಬಿತ ” ಎಂದು ಮಹಾಭಾರತದ ಉಕ್ಕಿ.

ಉಪನಿಷತ್ತುಗಳಲ್ಲಿ ಚರ್ಚಿಸಿರುವ ಪ್ರಶ್ನೆಗಳ ತಾತ್ವಿಕದೃಷ್ಟಿ ನನಗೆ ಅರ್ಥಮಾಡಿಕೊಳ್ಳಲು ಸ್ವಲ್ಪ ಕಷ್ಟ. ಆದರೆ ಅಂಥ ಶ್ರದ್ಧೆ ಮತ್ತು ಸಿದ್ಧಾಂತ ವಾದದಲ್ಲಿ ಮುಳುಗಿದ ಈ ಸಮಸ್ಯೆಗಳನ್ನು ಪ್ರವೇಶಿಸುವ ರೀತಿಗೆ ಮನ ಸೋತಿದ್ದೇನೆ. ಆ ಪ್ರವೇಶ ಮತೀಯವಲ್ಲ; ಆದರೆ ದಾರ್ಶನಿಕ. ಅಲ್ಲಿ ಕಾಣುವ ಬುದ್ದಿ ತೀಕ್ಷತೆ, ಪ್ರಶ್ನಿಸುವ ರೀತಿ, ಮತ್ತು ವಿಚಾರ ಪರಿಪೂರ್ಣತೆಯ ಹಿನ್ನೆಲೆ ಬಹು