ಪುಟ:ಮಾತೃನಂದಿನಿ.djvu/೨೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನ 198 ಸತಿ ಹಿತೈಷಿ ನೀ ಇದನ್ನು ಖಚಿತವಾಗಿ ತಿಳಿದು, ಯಾರಲ್ಲಿಯ ವಿರೋಧವನ್ನಾಗಲೋ ಉದಾ ಸೀನವನ್ನಾಗಲೀ ತೋರದೆ, ವಿನಯ-ಪ್ರೀತಿ-ಗೌರವಗಳನ್ನು ಪ್ರದರ್ಶಿಸ ಬೇಕು. ನಾದಾ + ನಂದಿಸಿ , ಅಚಲ + ಸ್ವರ್ಣ): -ಸರ್ವ ಪ್ರಕಾರದಿಂದಲೂ ಹಾಗೆಯೇ ನಡೆ ಋಲುಳ್ಳವರು. ಸತ್ಯಾ:-ನಾವು ಮಾಡಬೇಕಾದ ಪ್ರತಿಯೊಂದು ಕೆಲಸವೂ ನಮ್ಮ ಮನೆತನಕ್ಕೂ ದೇಶಕ್ಕೂ ಸಮಾಜಕ್ಕೂ ಕೀರ್ತಿ-ಕಲ್ಯಾಣ-ಕ್ಷೇಮಾಭ್ಯುದ ಯಗಳನ್ನು ಂಟುಮಾಡುವಂತಹ ಸತ್ಕಾರ್ಯಗಳೇ ಆಗಿರಬೇಕಲ್ಲದೆ, ನಾವು ಮಾಡುವ ಯಾವುದೇ ಒಂದು ಕೆಲಸವೂ ಜನರ ವಿಡಂಬನೆಗಾಗಿ ನಡೆಸಲ್ಪ ಡದೆ, ನಮ್ಮ ಅವಶ್ಯ ಕರ್ತವ್ಯ ಕರ್ಮವೆಂಬ ನಿಷ್ಕಾಮ ಬುದ್ಧಿಯಿಂದಲೇ ಮಾಡಲ್ಪಡಬೇಕು. ಹೀಗಿದ್ದರೆಯೇ ನಿಮ್ಮ ವ್ರತವು ಸಾರ್ಥಿ ಕವು. ನಾದಾ + ನಂದಿನಿ ಅಚಲ+ಸ್ವರ್ಣ :---ಶಿರಸಾವಹಿಸಿದೆವ. ಸತ್ಯಾ:-ಮತ್ತೆ ಒಂದೆರಡು ಮಾತುಗಳು,-ನೀವು ಗೃಹಸ್ಥಾಶ್ರಮಿ ಗಳಾದ ಮಾತ್ರಕ್ಕೆ ಭೋಗೋಪಭೋಗಗಳಲ್ಲಿಯೇ ನಿರತರಾಗಿರಬಾರದು. ಕ್ಲಿಪರೀತಿ, ಮಿತವ್ಯಯದಿಂದ, ಉಚಿತಮಾರ್ಗದಲ್ಲಿ, ನಿಮ್ಮ ತನುಮನೋ ಧನಗಳನ್ನು ವಿನಿಯೋಗಿಸಿ, ನಿಮ್ಮ ಮುಂದಿನ ಮಕ್ಕಳನ್ನು ನಿಜವಾದ ದೇಶಸೇವಕರನ್ನಾಗಿ ಮಾಡುವ ಸದ್ವರ್ತನವು ನಿಮ್ಮಲ್ಲಿ ಸ್ಥಿರವಾಗಿರಬೇಕು. ಸಮಾಜದ ಶಾಂತಿಸ್ಥಾಪನೆಗಾಗಿ, ದೇಶದಕಲ್ಯಾಣಕ್ಕಾಗಿ, ಪ್ರಾಣವನ್ನೆ ಬಿಡಬೇಕಾಗಿಬಂದರೂ, ಸಂತೋಷದಿಂದ ಮುಂದೆ ನಿಲ್ಲುವಂತಹ ಪ್ರೌಢ ಶಿಕ್ಷಣವು ನಿಮ್ಮಲ್ಲಿ ಪ್ರತಿಯೊಬ್ಬರಿಗೂ ಈcಳಾಗಿರಬೇಕು. ಇಷ್ಟಾದರೆ ಸಾಕು. ನೀವೂ ಮತ್ತು ನಿಮ್ಮ ಅನುಗಾಮಿಗಳೂ ದೇಶಮಾತೆಯ ಪೂರ್ಣಾನುಗ್ರಹಕ್ಕೆ ಪಾತ್ರರಾದ ಧನ್ಯಾತ್ಮರೆನ್ನಿಸುವಿರಿ. ನಿಮ್ಮಿಂದಲೇ ದೇಶ ಮಾತೆಯ ಕಲ್ಯಾಣವು ನಡೆಯುವುದು, ಇದು ನಿಮಗೆ ಮಾತ್ರವೇ ಹೇಳಿದ ಮಾತಲ್ಲ; ಇಲ್ಲಿರುವ ಎಲ್ಲರಿಗೂ ಹೇಳಿದುದು. ಇದನ್ನು ಎಲ್ಲರೂ ಅನು ಮೂದಿಸಬೇಕೆಂಬುದೇ ನನ್ನ ಕೋರಿಕೆ.