ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗೋದ್ಭವಾಗಿ ನನ್ನ ಕೆಲಸವೆಲ್ಲವೂ ಕೈಗೂಡುವು ದೆಂದು ನಾನು ತಿಳಿದಿದ್ದೆನು. ಅದು ಸಾಧ್ಯವಾಗಲಿಲ್ಲ. ನಾ ನು ಬದುಕಿರುವೆನು ಎಂಬುದು ನಿನಗೆ ತಿಳಿಯಿತು. ನಿನಗೆ ತಿಳಿದರೆ ತಿಳಿಯಲಿ, ಅದರಿಂದ ನನಗಾಗುವುದೇನು? ನಾನು ಸಣ್ಣ ಸಣ್ಣ ಮಕ್ಕಳ ಗುಡ್ಡು ಬೆದರಿಕೆಗಳಿಗೆಲ್ಲ ಭಯಪಡತಕ್ಕವಳಲ್ಲ. ನಾನು ಮೇಲಿಯಾ, ಒಂದು ನಿಮಿ ಪವೆನ್ನುವುದರೊಳಗಾಗಿ ನಾನು ನಿನಗೆ ಏಳು ಸಮುದ್ರದ ನೀರನ್ನು ಕುಡಿಸಿಕೊಂಡು ಬರತಕ್ಕವಳು. ಪತ್ತೇದಾರ ಮಹಾಶಯ ! ನೀನ: ಹೆಂಗಸಿನ ಬಲ ಕ್ಕೆ ಸಮನಾದವನು - ಬಹಳ ಶಕ! ನಿನ್ನ ಯೋಗ್ಯತೆಗೆ ತಕ್ಕ ಕೆಲಸದಲ್ಲಿ ಕೈ ಹಾಕಿದರೆ ಫಲವುಂಟು. ನನ್ನ ನ್ನು ನೀನು ಏನು ಮಾಡಬಲ್ಲೆ ? ನಿನ್ನ ಹೆಂಡತಿಯ ಹ ಣೆಯಲ್ಲಿ ಬರೆದಿರುವ ವೈಧವ್ಯವನ್ನು ಯಾರು ತಾನೇ ತಪ್ಪಿ ಸಬಲ್ಲರು. ಆವೆಲೆಯು ನಿನ್ನ ಕಿವಿಗಳನ್ನು ಹಿಡಿದುಕೊಂಡು ಲಾಗಾಟಗಳನ್ನು ಹಾಕಿಸುತ್ತಿದ್ದು ಜು ಜ್ಞಾಪಕದಲ್ಲಿರುವುದೋ? ಅಯ್ಯೋ ಪಾಪ! ಈಗ ಜ್ಞಾಪಕವೆಲ್ಲಿ ಬರಬೇಕು! ಬಹಳ ದಿನಗಳು ನಿನ್ನನ್ನು ನಾನು ಆಂಗೆಡೆನು. ನೀನು ಬೇಗನೆ ಕಾಯುವೆ-ನೀನು ಯಮಪುರಿಯನ್ನು ಬೆಳ ಗುವೆ, ಬಾಬು! ಮೆಲೆಯೊಡನೆ ಹೋರಾಡಿ ನೀನು ಬದು ಕಿದ ಪಾಪವುಂಟೆ? ಕಾಲಹರಣಕ್ಕೆ ಅವಕಾಶಕೊಡದೆ ನಿನಗೆ ಆಸ್ತಿಪಾಸ್ತಿಗಳೇನಾದರೂ ಇರುವುದಾಗಿದ್ದರೆ,ಉಯಿಲ್ ಗಿ ಯಿಲ್‌ನ್ನು ಬೇಗನೆ ಸಿದ್ಧಪಡಿಸಿಕೊ, ಚಿತ್ರಗುಪ್ತನ ದಪ್ಪರ ದಲ್ಲಿ ನಿನ್ನ ಹೆಸರು ದಾಖಲಾಗಿರುವುದು. ನೀನು ನಿನ್ನ ನಾಲ್ಕಾರು ಜನ ಸ್ನೇಹಿತರೊಡನೆ ಕಾನ