ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮುಳಿಯರ ಪಾರ್ತಿಸುಬ್ಬ ಮತ್ತು
ಸೂರ ಕಾಂತಿ ಕಲ್ಯಾಣ


ಕನ್ನಡದ ಮಹತ್ವದ ಲೇಖಕರಲ್ಲೊಬ್ಬರಾದ ಶ್ರೀ ಮುಳಿಯ ತಿಮ್ಮ ಪ್ಪಯ್ಯನವರು ಯಕ್ಷಗಾನ ಕಲೆಗೆ ಸಂಬಂಧಿಸಿ ಎರಡು ಕೃತಿಗಳನ್ನು ರಚಿಸಿದ್ದಾರೆ. ಒಂದು, ಸುಪ್ರಸಿದ್ಧವಾದ 'ಪಾರ್ತಿ ಸುಬ್ಬ' ಎಂಬ ದೊಡ್ಡ ಪ್ರಬಂಧ (ಪ್ರ: ಬಾಳಿಗ ಎಂಡ್ ಸನ್ಸ್ ಮಂಗಳೂರು 1945), ಮತ್ತೊಂದು 'ಸೂರ್ಯಕಾಂತಿ ಕಲ್ಯಾಣ' (ಅಪ್ರಕಟಿತ)ವೆಂಬ ಯಕ್ಷಗಾನ ಪ್ರಸಂಗ.

ಮುಳಿಯರ 'ಪಾರ್ತಿಸುಬ್ಬ' ಗ್ರಂಥವು, ಕನ್ನಡದಲ್ಲಿನ ಯಕ್ಷಗಾನ ವಿಮರ್ಶೆ ಗ್ರಂಥಗಳಲ್ಲಿ ಬಹಳ ಮಹತ್ವದ್ದಾಗಿದ್ದು, ದಿ|| ಬಿ. ರಂಗಪ್ಪಯ್ಯ ಪುತ್ತೂರು ಅವರ “ಯಕ್ಷಗಾನ ಪರಿಸ್ಥಿತಿ” ಪದ್ಯಗ್ರಂಥ (1929)ದ ಬಳಿಕ ಬಂದ ಮೊದಲ ಗ್ರಂಥ, ಯಕ್ಷಗಾನ ಕವಿಯೊಬ್ಬನ ಬಗೆಗೆ ಬಂದ ಮೊದಲ ಪುಸ್ತಕಇದೇ. ಪಾರ್ತಿಸುಬ್ಬ ಕವಿಯ ಬಗೆಗೆ, ನಂತರ ನಡೆದ ಸುದೀರ್ಘವಾದ ಚರ್ಚೆಗೆ ಆಧಾರವಾಗಿ, ಪ್ರೇರಕವಾಗಿಯೂ ನಿಂತಿರುವ ಈ ಗ್ರಂಥಕ್ಕೆ, ಕನ್ನಡಸಂಶೋಧಕ ಪ್ರಪಂಚದಲ್ಲಿ ಒಂದು ವಿಶಿಷ್ಟ ಸ್ಥಾನವಿದೆ. ಪಾರ್ತಿಸುಬ್ಬನ ಬಗೆಗೆ ಬಂದಿರುವ ಸಂಶೋಧನ, ವಿಮರ್ಶೆಗಳ ಬೆಳಕಿನಲ್ಲಿ ಮತ್ತು ಈ ಗ್ರಂಥ ದಲ್ಲಿ ವಿವೇಚಿಸಲಾದ ವಿಷಯಗಳ ನೆಲೆಯಲ್ಲಿ, ಇದನ್ನು ಪರಿಶೀಲಿಸುವ ಯತ್ನ ವನ್ನು ಇಲ್ಲಿ ಮಾಡಿದೆ.

ಈ ಗ್ರಂಥದಲ್ಲಿ ಮುನ್ನುಡಿ, ಭೂಮಿಕೆ, ಪ್ರಬಂಧಸಾರ ಎಂಬ ಮೂರು ಭಾಗಗಳು, ಮುನ್ನುಡಿಯಲ್ಲಿ ಅವರು ತವರಿಗೆ ಬಾಲ್ಯದಲ್ಲಿ ಹಾಡು, ಕೀರ್ತನ,