ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
12
ಮಾರುಮಾಲೆ

ಹಿಂದೆಯೂ, ಈಗಲೂ ಮಳೆಗಾಲದಲ್ಲಿ, ಮಳೆಯ ತೀವ್ರತೆ ಕಡಿಮೆ ಆದ ಬಳಿಕ,-ಜುಲೈ ಮಧ್ಯಭಾಗದಿಂದ ನವಂಬರ್‌ತನಕ ತಾಳಮದ್ದಲೆ ಎಂಬ ಯಕ್ಷಗಾನ ಪ್ರಕಾರಕ್ಕೆ ಪ್ರಶಸ್ತವಾದ ಕಾಲ. ಕಾರಣ ಇದು ಒಳಾಂಗಣ ಪ್ರದರ್ಶನ (Indoor performance). ಹೀಗೆ ಬೇಸಗೆಯಲ್ಲಿ ಆಟ, ಮಳೆಗಾಲದಲ್ಲಿ ತಾಳಮದ್ದಲೆ ಎಂಬ ವಿಭಾಗವು ಪ್ರಾಕೃತಿಕ ರೂಪಣವೀ.

ನೃತ್ಯವೆಂಬುದು ಒಂದು ಬಗೆಯ ಚಲನೆ. ಆದುದರಿಂದ ಅದು ಭೌತ, ಅಭೌತ ಚಲನೆಗಳ ಪ್ರತಿಫಲನ ಕೂಡ, ಪ್ರಾಕೃತಿಕ-ಮಾನುಷ ಜೈವಿಕ ಚಲನೆಗಳಲ್ಲಿ ಪರಸ್ಪರ ಪ್ರಭಾವ, ಪ್ರಭಾವಿತ ಸಂಬಂಧವಿದೆ ಎಂದು ಎಲ್ಲೋ ಓದಿದ ನೆನಪು. ಈ ನೆಲೆಯಲ್ಲಿ, ಈಗಾಗಲೇ ಸೂಚಿಸಿರುವಂತೆ, ಯಕ್ಷಗಾನ ರಂಗಭೂಮಿಯಲ್ಲಿ ಚಲನೆಯ ಕ್ರಿಯೆಯೊಂದನ್ನೇ ಹಿಡಿದು ಅಧ್ಯಯನ ಮಾನುಷ ಮತ್ತು ಜೈವಿಕ, ಪ್ರಾಕೃತಿಕ ಚಲನೆಗಳ ವೈವಿಧ್ಯಕ್ಕೆ, ವಿಪುಲತೆಗೆ ಅವಕಾಶವೀಯುವಂತಿದೆ ಕರಾವಳಿಯ ಭೂತಿ ಮತ್ತು ಹವಾಮಾನ, ಬೆಳೆ, ಕಾಡುಮೇಡು. ಅದಕ್ಕನುಗುಣವಾಗಿ ಸಂವಾದಿಯಾಗಿದೆ. ಯಕ್ಷಗಾನದ ಚಲನಕ್ರಿಯೆ-ನೃತ್ಯದಲ್ಲಿ, ವಾಚಿಕಾಭಿ ನಯದಲ್ಲೂ.

ಅಭಿವ್ಯಕ್ತಿಯಲ್ಲೂ ಪ್ರಾಕೃತಿಕ ಪ್ರಭಾವವನ್ನು ಗುರುತಿಸಬಹುದು. ಕರಾವಳಿಯ ಜನರಲ್ಲಿ (ಬಹುಶಃ ಎಲ್ಲೆಡೆ) ಕಾಣುವ ವಿಶೇಷವಾದ ಅಂಗನ್ಯಾಸ ಕರನ್ಯಾಸಗಳು (gesturs) ತೀವ್ರಾಭಿವ್ಯಕ್ತಿಯ ಕ್ರಮ (expressive movements) ಗಳು ಪ್ರಸಿದ್ಧ. ಇವು ಕಲೆಯ ಅಭಿವ್ಯಕ್ತಿಯಲ್ಲಿ ತಮ್ಮ ಕೊಡುಗೆ ನೀಡಿವೆ. ಹೀಗೆ ನಿಜಜೀವನದಿಂದ ಕಲೆಗೆ ವರ್ಗಾವಣೆಯಾಗಿ ಮತ್ತಷ್ಟು ವ್ಯವಸ್ಥಿತ (formalised) ಮತ್ತು ಶೈಲೀಕೃತ (stylised) ವಾಗಿ ಬಂದ ಈ ದೇಹ ಭಾಷೆಯು ಮೂಲತಃ ಇಲ್ಲಿನ ಪ್ರಕೃತಿಯ ಗುಣ