ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಕರಾವಳಿ ಯಕ್ಷಗಾನ-ನೈಸರ್ಗಿಕ ಹಿನ್ನೆಲೆ
13


ಸ್ವಭಾವ ನಾದ, ಕ್ರಿಯೆ, ಚಲನೆಗಳಿಂದ ಪ್ರೇರಿತವಿರಬೇಕೆಂದು ನ್ಯಾಯವಾಗಿ ಊಹಿಸಬಹುದು.

   ಯಕ್ಷಗಾನದ ಮಾತುಗಾರಿಕೆಯು ಲಿಖಿತವಲ್ಲ. ಅದು ಆಶುಭಾಷಣ

ಸ್ವರೂಪದ್ದು. ಅದರ ನಡೆ, ಧ್ವನಿ ಸ್ವರೂಪಗಳ ಅಧ್ಯಯನದಿಂದ ಅದನ್ನು ರೂಪಿಸುವಲ್ಲಿ, ಇಲ್ಲಿನ ನಿಸರ್ಗವು ನೀಡಿದ ಪ್ರೇರಣೆ ಕಾಣದಿರದು. ಅದಕ್ಕಿಂತ ಸ್ಪುಟವಾಗಿ ಎದ್ದು ಕಾಣುವ ಅಂಶ ಯಕ್ಷಗಾನದ ಮಾತುಗಾರಿಕೆ (ಅರ್ಥಗಾರಿಕೆ) ಯ ಸಾಹಿತ್ಯ ಲಕ್ಷಣಗಳಿಗೆ ಸಂಬಂಧಿಸಿದುದು. ಕರಾವಳಿಯ ಸಮೃದ್ಧವಾದ ಪ್ರಕೃತಿ, ಅರ್ಥವನ್ನು ಮಾತನಾಡುವ ಪಾತ್ರಧಾರಿಗೆ ದೃಷ್ಟಾಂತ, ಉದಾಹರಣೆ ಅಲಂಕಾರ, ಪ್ರತಿಪಾದನೆಯ ವಿಷಯಗಳಿಗೆ, ಅಕ್ಷಯವಾದ ಭಂಡಾರವೆನಿಸಿದೆ. ಅರ್ಥಗಾರಿಕೆಯಲ್ಲಿ ಕರಾವಳಿಯ ಕೃಷಿಯ ಮತ್ತು ನಿಸರ್ಗದ ವಿವರಗಳೊಂದಿಗೆ ಕೇಳುಗನಿಗೆ ಒಂದು ಸುಂದರವಾದ ಮುಖಾಮುಖಿ ಒದಗುವುದು ಯಕ್ಷಗಾನ ಪ್ರೇಕ್ಷಕನ ನಿತ್ಯಾನುಭವವಾಗಿದೆ. ಹಾಸ್ಯಗಾರರ ಪಾತ್ರಗಳಲ್ಲಿ ಅದು ಶಿಷ್ಟದ ಬಂಧನವನ್ನು ಕಳಚಿ, ಹೆಚ್ಚು ಜೀವಂತವಾಗಿ ಮೂಡಿರುವುದನ್ನು ಕಾಣ ಬಹುದು. ತುಳು ಯಕ್ಷಗಾನ ಪ್ರಸಂಗಗಳಲ್ಲಿ, ಸ್ಥಳೀಯ ಪ್ರಕೃತಿಯು, ಪೌರಾಣಿಕ ಪ್ರಸಂಗದಂತೆ ಪೂರಕ ಸಾಮಗ್ರಿಯಲ್ಲ. ಅದು ಕಥೆಯ ಅಂಗ ವಾಗಿಯೇ ಇರುವಂತಹದು. ಹಾಗಾಗಿ ತುಳು ಯಕ್ಷಗಾನ ಪ್ರಯೋಗಗಳ ಮಾತು, ಗೀತಗಳಲ್ಲಿ ಕರಾವಳಿಯ ನಿಸರ್ಗವು ಅವಯವ, ಅಲಂಕರಣ ಮಾತ್ರ ವಲ್ಲ. ಇಲ್ಲಿನ ಹುಲ್ಲು, ಕಲ್ಲು, ಮಳೆ, ಬೆಳೆ, ಕಾಡು ಗುಡ್ಡಗಳು ಕಥೆಯಲ್ಲಿ ಬರುತ್ತವೆ. ಪಾತ್ರಗಳಿಗೂ ಅವು ಬದುಕಿನ ಅಂಶಗಳಾಗಿರುತ್ತವೆ. ಹೀಗಾಗಿ ತುಳು ಯಕ್ಷಗಾನಗಳ ಬಗೆಗೆ, ಉಳಿದಂತೆ, ರೂಪ (form) ಮೊದಲಾದವುಗಳಿಗೆ ಸಂಬಂಧಿಸಿದ ಚರ್ಚೆಯನ್ನು ಬದಿಗಿಡೋಣ, ಪ್ರಕೃತಿ-ಅಭಿವ್ಯಕ್ತಿ ಸಂಬಂಧ ದಿಂದ ನೋಡಿದರೆ, ಕರಾವಳಿಯ ನಿಸರ್ಗ ತುಳು ಆಟಗಳಲ್ಲಿ ಸೊಗಸಾದ ವರು ಹುಟ್ಟು ಪಡೆಯುವುದನ್ನು ಕಾಣಬಹುದು.

ಯಕ್ಷಗಾನದ ಲಿಖಿತ ಭಾಗವೆಂದರೆ, ಅದರ ಪ್ರಸಂಗವೆಂಬ ಪದ್ಯ ನಾಟಕ. ಅದು ಅದರ ಆಧಾರ (script). ಇಂತಹ ಪ್ರಸಂಗಗಳು ಸಾವಿರಕ್ಕೂ ಮಿಕ್ಕಿ ಇವೆ. ಇವುಗಳಲ್ಲಿ ಮುಖ್ಯವಾಗಿ ಪೌರಾಣಿಕ ಪ್ರಸಂಗಗಳಲ್ಲಿ ಪ್ರಾದೇಶಿಕ