ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
14
ಮಾರು ಮಾಲೆ

ಪ್ರಕೃತಿ ಅಷ್ಟಾಗಿ ಬಂದಿಲ್ಲ. ಅಲ್ಲಿ ಇಲ್ಲಿ ಎಂಬಂತೆ ಬಂದಿದ್ದರೂ, ತೀರ ಕಡಿಮೆ ಅನ್ನಬೇಕು. ಇದಕ್ಕೆ ಕಾರಣವಿಲ್ಲದಿಲ್ಲ. ಪ್ರಸಂಗ ಕರ್ತೃಗಳು ಪುರಾಣದ ಕತೆಯನ್ನು ಅನುವಾದ ರೂಪವಾಗಿಯೇ ಪ್ರಸಂಗಗಳಾಗಿ ಬರೆ ದಿದ್ದಾರೆ. ಅಲ್ಲಿನ ವಿವರ, ದರ್ಶನ, ಫಟನೆಗಳೆಲ್ಲವೂ ಆಕರದ ಕಾವ್ಯ ಪುರಾಣಗಳವೇ ಹೊರತು ಕವಿಯ ಕಲ್ಪನೆಗಳಲ್ಲ. ಹಾಗಾಗಿ ಪುರಾಣಗಳಲ್ಲಿನಂತೆ ಪ್ರಸಂಗಗಳಲ್ಲೂ ಪ್ರಕೃತಿ ಅಪ್ರಧಾನ.


ನಿಸರ್ಗ ಅಥವಾ ಪ್ರಕೃತಿ ಎಂಬುದಕ್ಕೆ, ಪ್ರಾದೇಶಿಕವಾದ ನೆಲೆಯ ಅರ್ಥ ವನ್ನು ಬಿಟ್ಟು ವ್ಯಾಪಕವಾಗಿ, ಪ್ರಕೃತಿ ವ್ಯಾಪಾರ ಎಂಬ ನೆಲೆಯಲ್ಲಿ ತೆಗೆದು ಕೊಂಡು, ಈಗ ಮುಂದುವರಿಯಬಹುದು. ಮೊದಲಾಗಿ ಯಕ್ಷಗಾನದಲ್ಲಿ ಬಳಕೆಯಲ್ಲಿರುವ ಕಾಲವಿಭಾಗ, ಇಡಿಯ ರಾತ್ರಿಯನ್ನು ನಾಲ್ಕು ಕಾಲಗಳಾಗಿ ವಿಭಾಗಿಸಿ, ಪ್ರದರ್ಶನವು, ಅಂದರೆ ಕತೆಯ ನಡೆಯ ವೇಗವು ಈ ನಾಲ್ಕು ಕಾಲ ವಿಭಾಗಗಳಲ್ಲಿ ಉತ್ತರೋತ್ತರವಾಗಿ ಹೆಚ್ಚುತ್ತ ಹೋಗಬೇಕೆಂಬುದು ಒಂದು ಅಂಗೀಕೃತ ನಿಯವು. ಇದು ಪ್ರೇಕ್ಷಕನ ಮನಸ್ಥಿತಿ, ಮತ್ತು ರಾತ್ರಿಯ ಸಂದರ್ಭದಲ್ಲಿ ಪ್ರೇಕ್ಷಕನನ್ನು ಜಾಗೃತ ನೋಟಕನನ್ನಾಗಿಸುವ ಬಗೆಗೆ ಅಗತ್ಯ ವಾದ ತಂತ್ರ, ಆರೆಂಟು ಗಂಟೆಗಳ ಪ್ರದರ್ಶನದಲ್ಲಿ ಮೊದಲ ಭಾಗದಲ್ಲಿದ್ದಷ್ಟು ಕೇಳುಗನ ಏಕಾಗ್ರತೆ, ತಾಳ್ಮೆಗಳು ಮತ್ತೆ ಇರುವುದಿಲ್ಲ. ಅಲ್ಲದೆ ರಾತ್ರಿ ಕಳೆದಂತೆ ನಿದ್ರೆಯ ಒತ್ತಡ ಹೆಚ್ಚು. ಅದಕ್ಕಾಗಿಯೇ ಈ ಕಾಲ ವಿಭಾಗ, “ಬೆಳಗಿನ ಜಾವದ ಆಟ' ಎಂಬ ವಾಗ್ರೂಢಿಯ ಅರ್ಥ ಅತಿ ವೇಗದ್ದು ಎಂಬುದೇ ಬೆಳಗ್ಗೆ ಸುಮಾರು ನಾಲ್ಕು ಗಂಟೆಯ ಬಳಿಕ ರಭಸ, ಯುದ್ಧ ಅಬ್ಬರದ ಪ್ರಸಂಗಗಳು ಹೆಚ್ಚು ಪರಿಣಾಮಕಾರಿ, ಆದುದರಿಂದಲೇ ಕಾಂಡ್ಲಿಕ ವಧೆ, ಶಿಶುಪಾಲ ವಧೆ, ತಾರಕ ವಧೆ, ಮೀನಾಕ್ಷಿ ಕಲ್ಯಾಣ ಮುಂತಾದವುಗಳು ಅಪರ ರಾತ್ರೆಗೆ ಪ್ರಶಸ್ತಿ ಪ್ರಸಂಗಗಳು, ಆದರೆ, ತೀರ ಶಾಂತವಾದ, ಕತೆಯೊಂದರ ಮುಕ್ತಾಯವಾಗಿರುವ, ಅಥವಾ ಶೋಕಾತ್ಮಕ ಪ್ರಸಂಗಗಳು ಬೆಳಗಿನ ಜಾವಕ್ಕೆ ಸಹಜವಾಗಿ ಹೊಂದಿಕೆಯಾಗುತ್ತವೆ. ಕಾರಣ ಆ ಹೊತ್ತಿನ ಪ್ರಶಾಂತತೆ. ಉಳಿದ ರೀತಿಯ ಕಥೆಗಳು ಆ ಹೊತ್ತಿಗೆ ಅನುಯೋಜ್ಯವಲ್ಲ.