ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಕರಾವಳಿ ಯಕ್ಷಗಾನ-ನೈಸರ್ಗಿಕ ಹಿನ್ನೆಲೆ
15

ಆದುದರಿಂದಲೇ ಯಕ್ಷಗಾನದಲ್ಲಿ ಪೂರ್ವರಾತ್ರಿಯ ಪ್ರಸಂಗಗಳು ಮತ್ತು ಅಪರ ರಾತ್ರಿಯ ಪ್ರಸಂಗಗಳೆಂಬ ಒಂದು ಸ್ಕೂಲವಾದ ತಿಳುವಳಿಕೆ ಇದೆ. (ಇದು ಈಗ ಅನುಸರಣೆಯಲ್ಲಿ ಪೂರ್ತಿಯಾಗಿ ಇಲ್ಲ, ಅದಿರಲಿ). ಶರಸೇತು, ಅಂಗದ ಸಂಧಾನ, ಪಾರ್ಥಸಾರಥ್ಯ, ಪಟ್ಟಾಭಿಷೇಕ, ಅತಿಕಾಯ, ಕೀಚಕ ವಧೆ, ಇವೆಲ್ಲ ಪೂರ್ವರಾತ್ರಿ ಪ್ರಸಂಗಗಳು, ಕರ್ಣಾವಸಾನ, ಗದಾ ಪರ್ವ, ರುಕ್ರಾಂಗದ, ಕೃಷ್ಣಾರ್ಜುನ, ಮುಂತಾದವು ಅಪರಾರ್ಧದವು. ಇವುಗಳೆಲ್ಲ ಯುದ್ಧಾತ್ಮಕ ಅಥವಾ ದುರಂತ-ಸುಖಾಂತ ಮಿಶ್ರ ಶೋಕಾತ್ಮಕ ಗಳು. ಇಂತಹ ಒಂದು ಆಯ್ಕೆ ಅಥವಾ ಸಹಜವಾದ ಹೊಂದಾಣಿಕೆ ರಾತ್ರಿಯ ಅಪಸ್ಥಾಂತರಗಳ, ಪ್ರಾಕೃತಿಕ ಮನೋವ್ಯಾಪಾರದ ಹಿನ್ನೆಲೆಯದು.


ಕಾಲಮಾನದಲ್ಲಿ ಪ್ರಾಕೃತಿಕವಾಗಿ ಇರುವ ಹಗಲು-ರಾತ್ರಿ ಎಂಬ ವಿಭಾಗ ಮತ್ತು ಈ ಯಕ್ಷಗಾನ ರಂಗಭೂಮಿಗೆ ಇರುವ ತಾತ್ವಿಕವಾದೊಂದು ಸಂಬಂಧ ವೆಂತಹುದು ಎಂಬುದನ್ನು ನೋಡೋಣ. ಸಾಮಾನ್ಯವಾಗಿ ಒಂದು ನಂಬಿಕೆ ಅಥವಾ ಗ್ರಹಿಕೆ ಎಂದರೆ, ಹಗಲಿನ ಜೀವನ ನಮ್ಮದು, ರಾತ್ರಿಯದು ನಮ್ಮ ದಲ್ಲ, ಹಗಲು ವಾಸ್ತವ, ರಾತ್ರಿ, ಅವಾಸ್ತವದ್ದು. ಹಾಗಾಗಿಯೇ ರಾತ್ರಿ ಭೂತ, ಪ್ರೇತ ಪಿಶಾಚಿಗಳ ಸಂಚಾರವೆಂಬ ನಂಬಿಕೆ, ರಾತ್ರಿ ಎಂಬುದು ಹಗಲಿನ ವಿಪರೀತ (reverse), ರಾತ್ರೆಯ ವ್ಯವಹಾರವೆಲ್ಲ ಅದ್ಭುತರಮ್ಯ.


ಇದರಿಂದಾಗಿಯೇ ಹಗಲು ಮಾಡಲಾಗದ ಅಥವಾ ಮಾಡಬೇಕೆಂದಿ ದ್ದರೂ, ಮಾಡಲುಬಾರದ ಕೆಲಸಗಳಿಗೆ ರಾತ್ರಿ ಮೀಸಲು ಎಂಬುದನ್ನಾಧರಿಸಿದ ಕೆಲವು ಶಾಸ್ತ್ರೀಯ, ಜಾನಪದ ವ್ಯವಹಾರ ನ್ಯಾಯಗಳನ್ನು ನೋಡಬಹುದು. ಶಿವರಾತ್ರಿಯಂದು ರಾತ್ರಿ ಕಳ್ಳತನ, ಕೀಟಲೆ ಮಾಡುವುದು ಆಚಾರ, ಕೋಜಾ ಗರಿ ಹುಣ್ಣಿಮೆ (ಆಜ ಪೂರ್ಣಿಮಾ) ದಿನ ರಾತ್ರಿ ದೂತವನ್ನಾಡಬೇಕು.- ಇದೆಲ್ಲ ಮನುಷ್ಯನ ಅಂತಹ ಪ್ರವೃತ್ತಿಗಳ ಅಭಿವ್ಯಕ್ತಿ ಮೂಲಕ ತೃಪ್ತಿಗಾಗಿ ನೀಡಿದ ಸೀಮಿತ ಲೈಸೆನ್ಸ್, ಹಾಗೆಯೇ ನೋಡಿ. ಭೂತಾರಾಧನೆಯ ಕೋಲದಲ್ಲಿ ಭೂತದ ಪಾತ್ರಿ ಅಸ್ಪೃಶ್ಯ. ಆದರೆ ಆಹೊತ್ತು-ರಾತ್ರಿ-ಅವನು ದೇವರಂತೆ. ಹಗಲು ಪುನಃ ಅಸ್ಪಶ್ಯನೇ. ಸಿದ್ಧವೇಷ ರಾತ್ರಿ ಬ್ರಾಹ್ಮಣನನ್ನು ತಮಾಷೆ ಮಾಡುತ್ತದೆ, ಹಗಲಲ್ಲ. ಇದೆಲ್ಲ ನೈಜ ಭಾವಗಳ, ಸಾಂಕೇತಿಕ