ಪುಟ:ಮಾಲತಿ.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಾಲತೀ

ಅರಳಿದ್ದ ಮಾಲತಿ ಪುಪ್ಪಗಳನ್ನು ಮತ್ತಷ್ಟು ಅರಳಿಸುತ್ತಲೂ ಮಾಲತಿಯ
ಮುಖದಮೇಲೆ ಬಿದ್ದು ಬೆಳಗುತ್ತಲೂ ಇದ್ದಿತು. ಮಾಲತಿಯು ಹದಿ
ನಾರು ವರ್ಷದ ಬಾಲೆ, ಮುಗುಳುನಗೆಗೂಡಿದ ಅಲರ್ಮೆಗ್ಗೆ, ಜೊನ್ನೆಯ
ಜೋಂಪಲ ಬೊಂಬೆ-ಮಾಲತಿಯು ಮಾತಾಡುತ್ತಿದ್ದ ಹಾಗೆ ಒಂದೊಂದು
ತಡವೆ ಆಕಾಶದಲ್ಲಿದ್ದ ಚಂದ್ರನನ್ನು ನೋಡುವಳು, ಒಂದೊಂದು ತಡವೆ
ಬೆಳದಿಂಗಳಲ್ಲಿ ಬೆಳೆಯುತ್ತಿದ್ದ ಹೊಳೆಯಲ್ಲಿ ತಂಡತಂಡನಾಗಿ ಎದ್ದು ಕುಣಿ
ದಾಡುತ್ತಿದ್ದ ಅಲೆಗಳ ಮಾಲೆಗಳನ್ನು ನೋಡುವಳು; ಹೀಗೆ ಕಣ್ಣುಗೊಳ
ದಾದವುಗಳನ್ನು ನೋಡುತ್ತ ಕೆಡೆಗೆ ಸಂಜೆಯ ಪೂಗಾಳಿಗೆ ತೂಗಾಡುತ್ತಿದ್ದ
ಮಾಲತಿಲತೆಯಿಂದ ಒಂದೆರಡು ಹೂವುಗಳನೆತ್ತಿ ಅವುಗಳನ್ನು ನೋಡಿ
ನಗುತ್ತ, “ಅಣ್ಣ ! ಇನ್ನುಳಿದಿರುವುದು ಹತ್ತು ದಿನವಾದರೂ ಎಷ್ಟೋ ವರ್ಷ
ಗಳಿರುವಂತೆ ತೋರುತ್ತದೆಎಂದಳು.
ಹರುಷದಿಂದ ಅರಳಿದ್ದ ಯುವಕನ ಮುಖವು ಮತ್ತಷ್ಟು ಅರಳಿ
ಸ್ವಲ್ಪ ಕಂಬಣ್ಣವಟತಾಳ್ದು ತೋರಿದ ನಗೆಮೊಗದಿಂದಲೇ ಮಾಲತಿಯು
ಹೇಳಿದ ಮಾತಿಗೆ ಉತ್ತರವನ್ನು ಕೊಟ್ಟಂತಾಯಿತು. ಮಾಹಿತಿಯು ತನ್ನ
ಗುಲಾಬಿಯ ಬಣ್ಣವುಳ್ಳ ಮುಖವನ್ನು ತಿರಿಗಿಸಿ ನಗುನಗುತ್ತ, “ಅಣ್ಣ !
ನಾವಿಬ್ಬರೇ ಈಗಿರುವವರು ;ಶೋಭನೆಯೂ ಬಂದರೆ ಮತ್ತೊಬ್ಬಳು
ಬಂದಂತಾಗಾಗುವುದು--ಹಗಲು ನೀನು ಕಲಸಕಾರ್ಯದಮೇಲೆ ಹೋದಾಗ
ನಾನೊಬ್ಬಳೇ ಇದ್ದಂತಾಗುವುದಿಲ್ಲ" ಎಂದಳು.
ಯುವಕನು ಬಾರಿಸ್ಟರು ಆದರೆ ಲಾಯರ ಕಲಸದಲ್ಲಿ ಸಂಪಾದಿಸ
ಲಾರದೆ ಮುನಸೀಫಿ ಕೆಲಸಕ್ಕೊಪ್ಪಿಕೊಂಡು ಪಟ್ಣವಾನಸವನ್ನು ಬಿಟ್ಟು ಹಳ್ಳಿ
ಊರಲ್ಲಿರುತ್ತಿದ್ದನು. ಹುಡುಗಿಯ ಮಾತಿಗೆ ನಕ್ಕು, 'ಮಾಲತಿ ! ಅದುಸಲ
ವಾಗಿಯೇ ನಿನಗಿಷ್ಟು ಸಂತೋಷವೆಂದು ತೋರುತ್ತದೆ ” ಎಂದನು.
ಮಾಲತಿಯು ಸ್ವಲ್ಪ ನಾಚಿಕೊಂಡವಳಾಗಿ, ಇಲ್ಲ, ಅಣ್ಣ! ಹಾಗಲ್ಲ ;
ನಾನು ಶೋಭನೆಯನ್ನು ಎಷ್ಟೊಂದು ಪ್ರೀತಿಸುತ್ತೇನೆಯೋ ಅದನ್ನು ಸೀನ
ರಿಯೆ ” ಎಂದಳು.
ಯುವಕ ಅವಳನ್ನು ಕಾಣದಲೇ ಅವಳಮೇಲೆ ಅಷ್ಟೊಂದು