ಈ ಪುಟವನ್ನು ಪ್ರಕಟಿಸಲಾಗಿದೆ
ಮಾಲತೀ.
ಮೊದಲನೆಯ ಪರಿಚ್ಛೇದ
ದಿಗಂತವಾಗಿ ಪಸರಿಸಿ ಬೈಲಾಗಿದ್ದ ಸಮಭೂಮಿಯಲ್ಲಿ ಮರಳುಮ
ಯವಾದೊಡಲ ಅಂಚನ್ನು ಚುಂಬನ ಮಾಡುತ್ತ ಸುಖಮಯಿ ನದಿಯು
ಹರಿದು ಹೋಗುತ್ತಿದ್ದಿತು. ನದಿಯ ತೀರದಲ್ಲಿ ರಮ್ಯವಾದೊಂದು ಉಪವನ
ದಲ್ಲೊಂದು ಅಚ್ಚಕಟ್ಟಾದ ವಾಟಿಕ - ಅಲ್ಲಲ್ಲಿ ಕುಳಿತುಕೊಳ್ಳುವುದಕ್ಕೆ
ಮಾಡಿದ್ದ ಉಚ್ಜಾಸನಗಳು, ಪ್ರಶಸ್ತವಾದೊಂದು ಪ್ರಸ್ತರಾಸನಕ್ಕೆ ಎರಡು
ಕಡೆಗಳಲ್ಲಿಯೂ ಮಾಲತಿಲತೆಯು ಹಬ್ಬಿದ್ದ ಎರಡು ಪಾರಿಜಾತವರಗಳು.
ಆ ಕಲ್ಲಿನಮೇಲೆ ಇಬ್ಬರು ಕುಳಿತುಕೊಂಡು ಮಾತಾಡುತ್ತಿದ್ದರು. ಆಕಾಶ
ದಲ್ಲಿ ಚಂದ್ರೋದಯವಾಗಿದ್ದಿತು. ಚೌತಿಯ ಚಂದ್ರನು, ನಿರಾಶೆಯಾದ
ಹೃದಯದಲ್ಲಿ ಅಲ್ಪವಾದ ಆಶೆಯು ನೆಲೆಗೊಂಡಿದ್ದಂತೆ, ಗಗನಪ್ರಾಂಗಣದಲ್ಲಿ
ನೆಲೆಗೊಂಡು ಮಲಿನವಾದ ಬೆಳದಿಂಗಳನ್ನು ಸಣ್ಣ ಸಣ್ಣ ಧಾರೆಯಾಗಿ ಬೀರಿ
ದರೂ ಬೀರಲಸಮರ್ಥನಾಗಿದ್ದವನಂತೆ ಕಾಣುತ್ತಿದ್ದನು; ಆ ಬೆಳದಿಂಗಳು
ನದಿಯಮೇಲೆ ಬಿದ್ದು ಪ್ರವಾಹವನ್ನು ಸ್ವಲ್ಪ ಪ್ರಕಾರಗೊಳಿಸುತ್ಕಲೂ,