ವಿಷಯಕ್ಕೆ ಹೋಗು

ಪುಟ:ಮಾಲತಿ.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಮೊದಲನೆಯ ಪರಿಚ್ಛೇದ




ಪ್ರೀತಿಯು ಹುಟ್ಟಿದ ಬಗೆ ಹೇಗೆ ? ಸ್ವಪ್ನದಲ್ಲಿಯೇ ನಿನಗೆಲ್ಲರ ಪರಿ
ಚಯದಿಂದ ಪ್ರೀತಿಯು ಹುಟ್ಟುವಂತಿದೆಯಲ್ಲವೆ ?
ಮಾಲತಿ --ನಾನವಳನ್ನು ನೋಡದಿದ್ದರೇನು ? ಅವಳ ವಿಚಾರ
ವೆಲ್ಲಾ ನಿನ್ನಿಂದ ಕೇಳಿದ್ದೇನೆ-- ಅದರಿಂದಲೇ ಅವಳ ಮೇಲೆ ಅಷ್ಟೊಂದು
ಅಂತಃಕರಣವು ಹುಟ್ಟಿದೆ- ಅವಳನ್ನು ನೋಡಬೇಕೆಂದು ಎಷ್ಟೋ ಆಶೆ-
ಅಣ್ಣ ! ಮದುವೆಗೆ ಮುಂಚೆ ಒಂದುದಿನ ನಾನವಳನ್ನು ನೋಡುವುದಕ್ಕಾಗ
ಲಾರದೆ ? ನನ್ನನ್ನು ಒಂದುದಿನದ ಮಟ್ಟಿಗೆ ಕಲಿಕತ್ತೆಗೆ ಸಂಗಡ ಕರೆದು
ಕೊಂಡು ಹೋಗಬಾರದೆ ?
ಯುವಕ -ರೇಯಿಲುಬಂಡಿಯಲ್ಲಿ ಅಷ್ಟುದೂರ ಪಯಣವಮಾಡುವುದು
ಬಹಳ ಕಷ್ಟ; ಇಲ್ಲವಾದರೆ, ನೀನಷ್ಟೊಂದು ಕೇಳಿಕೊಳ್ಳಬೇಕೆ? ಶೋಭ
ನೆಯೂ ನಿನ್ನನ್ನು ನೋಡಬೇಕೆಂದು ಅನೇಕ ತಡವೆ ಹೇಳಿದಳು.
ಮಾಲತಿ- ಅಣ್ಣ! ಹಾಗಾದರೆ ಅವಳಿಗೂ ನನ್ನ ಮೇಲೆ ಅಷ್ಟು ಪ್ರೀ
ತಿಯೆ?
ಯುವಕನ ಉತ್ತರವನ್ನೆದುರು ನೋಡದೆ ನಿಟ್ಟುಸುರನ್ನು ಬಿಟ್ಟು,
ಬಾಲೆಯು ಪುನಃ, `ನೋಡು, ಅಣ್ಣ! ಅಮ್ಮನು ಹೋದಳು, ನೀನು ವಿಲಾ
ಯಿತಿಗೆ ಹೊರಟುಹೋದೆ-ನಾನೊಬ್ಬಳೇ ಒಬ್ಬಳು-ಅರಿಯದವಳು_ ಆಗ
ಪಟ್ಟ ಕಷ್ಟವನ್ನು ನಾನು ಬಲ್ಲೆನು. ಚಿಕ್ಕಮ್ಮನು ನನ್ನನ್ನು ಆದರಿಸುತ್ತಿದ್ದಳು-
ಆದರೂ ಮನಸ್ಸಿಗೆ ಇಂಪಿಲ್ಲ-ಜತೆಗಾರರು ಇಲ್ಲದಿದ್ದರೆ ಪ್ರಾಣವುಳಿಯುವ
ಬಗೆ ಹೇಗೆ? ಆಗ ಶೋಭನೆಯು ಸಂಗಾತಿಯಾಗಿದ್ದರೆ ಹೇಗಿರುತ್ತಿದ್ದಿತೋ?
ಒಳ್ಳೆಯದು. ಅಣ್ಣ ! ಅವಳನ್ನು ನೀನು ಮೊದಲು ನೋಡಿದುದೆಲ್ಲಿ?'
ಎಂದಳು.
ಯುವಕ-ನಿನಗೆಷ್ಟು ತಡವೆ ಹೇಳಲಿ?
ಮಾಲತಿ - ಮರತೆ! ಸೋಮದತ್ತ ಮಾವಂದಿರ ಮನೆಯಲ್ಲಿ ಊಟಕ್ಕೆ
ಹೋಗಿದ್ದಾಗ ನೋಡಿದ್ದುದು-ನಾನು ಅಲ್ಲಿಗೆ ಬಂದಿರಲಿಲ್ಲ-ಬಂದಿದ್ದರೆ ನೀನ
ವಳನ್ನು ನೋಡಿದಾಗ ಹೇಗಿದ್ದೆಯೋ ನಾನದನ್ನು ನೋಡುತ್ತಿದ್ದೆನು.
ಆಹಾ ! ಮದುವೆಯಾವಾಗ ಆದೀತೋ ? ಮತ್ತೆಷ್ಟು ದಿವಸಕ್ಕೆ ? ಆಗ